ಶನಿವಾರ, ಆಗಸ್ಟ್ 15, 2020
26 °C

ಸೆಮಿಫೈನಲ್‌ಗೆ ಅನಿರ್ಬನ್-ಸರ್ಕಾರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೆಮಿಫೈನಲ್‌ಗೆ ಅನಿರ್ಬನ್-ಸರ್ಕಾರ್

ಧಾರವಾಡ: ಆಗ್ನೇಯ ರೈಲ್ವೆಯ ಅನಿರ್ಬನ್ ನಂದಿ ಹಾಗೂ ಸೌಮ್ಯಜಿತ್ ಸರ್ಕಾರ್ ಮತ್ತು ಪೂರ್ವ ರೈಲ್ವೆಯ ಸೌವಿಕ್ ರಾಯ್ ಹಾಗೂ ಕೇಂದ್ರ ರೈಲ್ವೆಯ ಅಮನ್ ಬಾಲ್ಗೋ ಅವರು ನೈರುತ್ಯ ರೈಲ್ವೆ ಸ್ಪೋರ್ಟ್ಸ್ ಅಸೋಸಿಯೇಷನ್ ಆಶ್ರಯದಲ್ಲಿ ಇಲ್ಲಿ ನಡೆಯುತ್ತಿರುವ ಅಖಿಲ ಭಾರತ ರೈಲ್ವೆ ಟೇಬಲ್ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್‌ನ ಸೆಮಿಫೈನಲ್‌ನಲ್ಲಿ ಸೆಣಸಲಿದ್ದಾರೆ.ಆರ್.ಎನ್. ಶೆಟ್ಟಿ ಒಳಾಂಗಣ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯಗಳಲ್ಲಿ ಅನಿರ್ಬನ್ ನಂದಿ, ಕೇಂದ್ರ ರೈಲ್ವೆಯ ಮಾರ್ತಾಂಡ ಬಿನಿವಾಲೆ ಅವರನ್ನು 9-11, 11-6, 11-6, 11-5ರ ಅಂತರದಿಂದ ಮಣಿಸಿದರು. ಸೌಮ್ಯಜಿತ್, ದಕ್ಷಿಣ ರೈಲ್ವೆಯ ಇ. ಪ್ರಭಾಕರನ್ ಅವರನ್ನು 11-13, 11-8, 11-8, 11-9ರ ಅಂತರದಲ್ಲಿ ಮಣಿಸಿದರು. ಸೌವಿಕ್ ರಾಯ್, ನಾರ್ಥ್ ಫ್ರಾಂಟಿಯರ್ ರೈಲ್ವೆಯ ಅರ್ನಾಬ್ ಅಧಿಕಾರಿ ವಿರುದ್ಧ (11-13, 11-6, 11-2, 11-2) ಜಯ ಸಾಧಿಸಿದರೆ ಅಮಾನ್ ಬಾಲ್ಗೋ, ನೈರುತ್ಯ ರೈಲ್ವೆಯ ಸಗಾಯ್ ರಾಜ್ ಅವರನ್ನು (11-4,11-4, 11-5) ಮಣಿಸಿದರು.ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಆಗ್ನೇಯ ರೈಲ್ವೆಯ ಅನಿಂದಿತಾ ಚಕ್ರವರ್ತಿ, ಪಲ್ಲವಿ ಕುಂದ್, ನಾರ್ಥ್ ಫ್ರಾಂಟಿಯರ್ ರೈಲ್ವೆಯ ತನಯಾ ದತ್ತಾ, ತೇಕುಣಿ ಸರ್ಕಾರ್, ಪಶ್ಚಿಮ ರೈಲ್ವೆಯ ಪ್ರೀತಿ ಮೊಕಾಶಿ, ರೂಣಾ ರಾಯ್, ಮೆಟ್ರೋ ರೈಲ್ವೆಯ ಅನುಶ್ರೀ ಹಜಾರೆ ಹಾಗೂ ಶ್ರೇಯಾ ಘೋಷ್ ಕ್ವಾರ್ಟರ್ ಫೈನಲ್ ಹಂತ ಪ್ರವೇಶಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.