ಬೆಂಗಳೂರು: ಕರ್ನಾಟಕದ ವಿನೋದ ಗೌಡ ಅವರಿಗೆ ಸೋಲುಣಿಸಿದ ತಮಿಳುನಾಡಿದ ವಿಜಯ್ ಸುಂದರ್ ಪ್ರಶಾಂತ್ ಇಲ್ಲಿ ನಡೆಯುತ್ತಿರುವ ಜೆಜಿಐ-ಎಐಟಿಎ ಟೆನಿಸ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದಾರೆ.

ಇಲ್ಲಿನ ಕೆಎಸ್ಎಲ್ಟಿಎ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ವಿಜಯ್ 6-3, 6-1ರಲ್ಲಿ ವೈಲ್ಡ್ ಕಾರ್ಡ್ ಪ್ರವೇಶ ಪಡೆದಿದ್ದ ವಿನೋದ್ ಗೌಡ ಎದುರು ಗೆಲುವು ಪಡೆದರು.

ಇದೇ ವಿಭಾಗದ ಇತರ ಪಂದ್ಯಗಳಲ್ಲಿ ಆಂಧ್ರ ಪ್ರದೇಶದ ಸಕೇತ್ ಮೈನಿಯಾ 6-1, 6-2ರಲ್ಲಿ ತಮ್ಮ ರಾಜ್ಯದವರೇ ಆದ ಎಸ್.ವಿ. ಅಭಿಷೇಕ್ ಮೇಲೂ, ಮೊಹಮ್ಮದ್ ಹಫೀಜ್ 6-2, 6-2ರಲ್ಲಿ ವಿದಿಕ್ ಮುನ್ಷೆವ್ ವಿರುದ್ಧವೂ, ಮೋಹಿತ್ ಮಯೂರ್ 6-7, 6-3, 6-1ರಲ್ಲಿ ವಿಜಯ್ ಕಣ್ಣನ್ ಮೇಲೂ ಗೆಲುವು ಪಡೆದು ಸೆಮಿಫೈನಲ್ಗೆ ಲಗ್ಗೆ ಇಟ್ಟರು.

ಪಶ್ವಿಮ ಬಂಗಾಳದ ಟ್ರಿಟಾ ಭಟ್ಟಾಚಾರ್ಯ ಮಹಿಳೆಯರ ವಿಭಾಗದ ಸಿಂಗಲ್ಸ್ನ ಕ್ವಾರ್ಟರ್ಫೈನಲ್ನಲ್ಲಿ 6-4, 6-1ರಲ್ಲಿ ಕರ್ನಾಟಕದ ಅರ್ಚನಾ ವೆಂಕಟರಮಣ್ ಅವರನ್ನು ಸೋಲಿಸಿದರು.

ಇತರ ಪಂದ್ಯಗಳಲ್ಲಿ ಸೌಜನ್ಯ ಭಾವಿಶೆಟ್ಟಿ 6-1, 6-3ರಲ್ಲಿ ಹರಿಯಾಣದ ಎ. ಅಭಿಲಾಷಾ ಮೇಲೂ, ಎರಡನೇ ಶ್ರೇಯಾಂಕದ ಜೀನಬ್ ಅಲಿ ಸಜ್ಜದ್ 6-0, 6-4ರಲ್ಲಿ ವನಿಯಾ ದಂಗ್ವಾಲ್ ವಿರುದ್ಧವೂ, ದೆಹಲಿಯ ನಿತಾಶಾ ಪಾಲ್ 6-3, 7-5ರಲ್ಲಿ ಮಹಾರಾಷ್ಟ್ರದ ಸೋನಿಯಾ ದಯಾಲ್ ಮೇಲೂ ಜಯ ಪಡೆದರು.

ಶರ್ಮದಾ- ಶೀತಲ್ಗೆ ಜಯ: ಕರ್ನಾಟಕದ ಶರ್ಮದಾ ಬಾಲು ಹಾಗೂ ಶೀತಲ್ ಗೌತಮ್ ಜೋಡಿ ಮಹಿಳೆಯರ ವಿಭಾಗದ ಡಬಲ್ಸ್ನ ಕ್ವಾರ್ಟರ್ಫೈನಲ್ ಪಂದ್ಯದಲ್ಲಿ ತಮಿಳುನಾಡಿನ ಪ್ರೀತಿ ಶ್ರೀನಿವಾಸ-ಕರ್ನಾಟಕದ ಪ್ರೀತಿ ಉಜ್ಜನಿ ಎದುರು ಜಯ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.