ಶುಕ್ರವಾರ, ಮೇ 14, 2021
25 °C

ಸೆಮಿಫೈನಲ್‌ಗೆ ಸೈನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೆಮಿಫೈನಲ್‌ಗೆ ಸೈನಾ

ನವದೆಹಲಿ (ಪಿಟಿಐ): ಸೊಗಸಾದ ಪ್ರದರ್ಶನ ಮುಂದುವರಿಸಿದ ಸೈನಾ ನೆಹ್ವಾಲ್ ಟೋಕಿಯೊದಲ್ಲಿ ನಡೆಯುತ್ತಿರುವ ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ಪ್ರವೇಶಿಸಿದರು.ಶುಕ್ರವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಅವರು 21-17, 21-13 ರಲ್ಲಿ ಸಿಂಗಪುರದ ಜುವಾನ್ ಗು ವಿರುದ್ಧ ಜಯ ಸಾಧಿಸಿದರು. ಭಾರತದ ಆಟಗಾರ್ತಿ ನಾಲ್ಕರಘಟ್ಟದ ಪಂದ್ಯದಲ್ಲಿ ಜರ್ಮನಿಯ ಜೂಲಿಯನ್ ಶೆಂಕ್ ಅವರ ಸವಾಲು ಎದುರಿಸಲಿದ್ದಾರೆ.ಇಲ್ಲಿ ನಾಲ್ಕನೇ ಶ್ರೇಯಾಂಕ ಹೊಂದಿರುವ ಸೈನಾ ವಿಶ್ವ ರ‌್ಯಾಂಕಿಂಗ್‌ನಲ್ಲಿ 23ನೇ ಸ್ಥಾನದಲ್ಲಿರುವ ಆಟಗಾರ್ತಿಯ ವಿರುದ್ಧ ಪ್ರಭಾವಿ ಪ್ರದರ್ಶನ ನೀಡಿದರು. ಇವರಿಬ್ಬರು ಕೊನೆಯದಾಗಿ 2008 ರಲ್ಲಿ ಪರಸ್ಪರ ಎದುರಾಗಿದ್ದರು. ಆಗ ಕೂಡಾ ಗೆಲುವು ಭಾರತದ ಆಟಗಾರ್ತಿಗೆ ಒಲಿದಿತ್ತು.ಮೊದಲ ಸೆಟ್‌ನಲ್ಲಿ ಸೈನಾ 18-9 ರ ಭಾರಿ ಮುನ್ನಡೆ ಪಡೆದಿದ್ದರು. ಆದರೆ ಮರುಹೋರಾಟ ನಡೆಸಿದ ಜುವಾನ್ ಹಿನ್ನಡೆಯನ್ನು 17-19 ರಲ್ಲಿ ತಗ್ಗಿಸಿದರು. ಈ ಹಂತದಲ್ಲಿ ಲಯ ಕಂಡುಕೊಂಡ ಹೈದರಾಬಾದ್‌ನ ಆಟಗಾರ್ತಿ ಸತತ ಎರಡು ಗೇಮ್‌ಗಳನ್ನು ಗೆದ್ದು ಸೆಟ್ ತಮ್ಮದಾಗಿಸಿಕೊಂಡರು. ಎರಡನೇ ಸೆಟ್‌ನಲ್ಲಿ ಸೈನಾಗೆ ಪೈಪೋಟಿ ಎದುರಾಗಲಿಲ್ಲ.ಇಲ್ಲಿ ಫೈನಲ್ ಪ್ರವೇಶಿಸುವ ಉತ್ತಮ ಅವಕಾಶ ಸೈನಾಗೆ ಲಭಿಸಿದೆ. ಅವರು ಇದುವರೆಗೆ ಜೂಲಿಯನ್ ಶೆಂಕ್ ಜೊತೆ ಏಳು ಸಲ ಪೈಪೋಟಿ ನಡೆಸಿದ್ದು, ಐದು ಬಾರಿ ಗೆಲುವು ಪಡೆದಿದ್ದಾರೆ. 2010ರ ಹಾಂಕಾಂಗ್ ಓಪನ್ ಟೂರ್ನಿಯಲ್ಲಿ ಇವರಿಬ್ಬರು ಕೊನೆಯ ಬಾರಿ ಎದುರಾಗಿದ್ದಾಗಲೂ ಸೈನಾ ಜಯ ಸಾಧಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.