ಲಂಡನ್: ಮೊದಲ ಪಂದ್ಯದಲ್ಲಿ ಗೆಲುವು ಪಡೆದು ವಿಶ್ವಾಸದಲ್ಲಿರುವ ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಮಂಗಳವಾರ ಪೈಪೋಟಿ ನಡೆಸಲಿದ್ದು, ಉಭಯ ತಂಡಗಳೂ ಸೆಮಿಫೈನಲ್ ಮೇಲೆ ಕಣ್ಣಿಟ್ಟಿವೆ.

`ಬಿ' ಗುಂಪಿನ ಪಂದ್ಯದಲ್ಲಿ ಯಾವ ತಂಡ ಗೆಲುವು ಪಡೆದರೂ ನಾಲ್ಕರ ಘಟ್ಟ ಪ್ರವೇಶಿಸಲಿವೆ. ಉದ್ಘಾಟನಾ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿರುವ ಮಹೇಂದ್ರ ಸಿಂಗ್ ದೋನಿ ನೇತೃತ್ವದ ಭಾರತ ತಂಡ ವಿಂಡೀಸ್ ಎದುರು ಜಯ ಪಡೆದು ಸೆಮಿಫೈನಲ್ನಲ್ಲಿ ತನ್ನ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳುವ ವಿಶ್ವಾಸದಲ್ಲಿದೆ. ಡ್ವೇನ್ ಬ್ರಾವೊ ಸಾರಥ್ಯದ ವಿಂಡೀಸ್ ಮೊದಲ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸಿ ವಿಶ್ವಾಸ ಹೆಚ್ಚಿಸಿಕೊಂಡಿದೆ. ಆದ್ದರಿಂದ ಉಭಯ ತಂಡಗಳು ನಾಲ್ಕರ ಘಟ್ಟ ಪ್ರವೇಶಿಸುವ ಲೆಕ್ಕಾಚಾರದಲ್ಲಿವೆ.

ಕಾರ್ಡಿಫ್ನಲ್ಲಿ ಮೊದಲ ಪಂದ್ಯವನ್ನಾಡಿದ್ದ ಭಾರತ ತಂಡ 331 ರನ್ಗಳನ್ನು ಗಳಿಸಿತ್ತು. ಆರಂಭಿಕ ಬ್ಯಾಟ್ಸ್ಮನ್ ಶಿಖರ ಧವನ್ ಏಕದಿನ ಕ್ರಿಕೆಟ್ನಲ್ಲಿ ಚೊಚ್ಚಲ ಶತಕ ಗಳಿಸಿದ್ದರು. ವಿಂಡೀಸ್ನ ಕೆಲ ಆಟಗಾರರು ಕಳೆದ ತಿಂಗಳು ಮುಗಿದ ಐಪಿಎಲ್ನಲ್ಲಿ ಆಡಿದ್ದರು. ಆದ್ದರಿಂದ ಭಾರತದ ಬ್ಯಾಟ್ಸ್ಮನ್ಗಳನ್ನು ಹೇಗೆ ನಿಯಂತ್ರಿಸಬೇಕು ಎಂಬುದು ವಿಂಡೀಸ್ಗೆ ಚೆನ್ನಾಗಿ ಗೊತ್ತಿದೆ.

ಐಪಿಎಲ್ನಲ್ಲಿ ಒಂದೇ ತಂಡದಲ್ಲಿದ್ದ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ದೋನಿ ಮತ್ತು ಬ್ರಾವೊ ಈಗ ಬೇರೇ ಬೇರೇ ತಂಡಗಳ ನಾಯಕರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರಾಟ್ ಕೊಹ್ಲಿ ಮತ್ತು ಕ್ರಿಸ್ ಗೇಲ್ ಸಹ ಈಗ ಪರಸ್ಪರ ಎದುರಾಳಿಗಳು ಎನ್ನುವುದೇ ಕುತೂಹಲ. ಸ್ಥಳೀಯ ವಾತಾವರಣಕ್ಕೆ ಚೆನ್ನಾಗಿ ಹೊಂದಿಕೊಂಡಿರುವ ದೋನಿ ಪಡೆ ಬ್ಯಾಟಿಂಗ್ ವಿಭಾಗದಲ್ಲಿ ಬಲಿಷ್ಠವಾಗಿದೆ. ಆರಂಭಿಕ ಜೋಡಿ ರೋಹಿತ್ ಶರ್ಮ ಮತ್ತು ಧವನ್ ಎದುರಾಳಿ ಬೌಲರ್ಗಳಿಗೆ ಸವಾಲಾಗಬಲ್ಲ ಸಾಮರ್ಥ್ಯ ಹೊಂದಿದ್ದಾರೆ. ಈ ಜೋಡಿ ದಕ್ಷಿಣ ಆಫ್ರಿಕಾ ಎದುರಿನ ಪಂದ್ಯದಲ್ಲಿ ಮೊದಲ ವಿಕೆಟ್ಗೆ 127 ರನ್ಗಳನ್ನು ಕಲೆ ಹಾಕಿತ್ತು.

ಉಭಯ ತಂಡಗಳು ತಲಾ ಒಂದು ಪಂದ್ಯಗಳಲ್ಲಿ ಗೆಲುವು ಪಡೆದಿದ್ದರೂ ರನ್ರೇಟ್ ಆಧಾರದ ಮೇಲೆ ವಿಂಡೀಸ್ `ಬಿ' ಗುಂಪಿನ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಭಾರತ ಎರಡನೇ ಸ್ಥಾನ ಹೊಂದಿದೆ. ವಿಂಡೀಸ್ ತಂಡದಲ್ಲೂ ಬಲಿಷ್ಠ ಬ್ಯಾಟ್ಸ್ಮನ್ಗಳಿದ್ದಾರೆ. ಕ್ರಿಸ್ ಗೇಲ್, ಜಾನ್ಸನ್ ಚಾರ್ಲೆಸ್, ಡೆರನ್ ಸಮಿ ಮತ್ತು ಮರ್ಲಾನ್ ಸ್ಯಾಮುಯೆಲ್ಸ್ ಈ ತಂಡದ ಬ್ಯಾಟಿಂಗ್ ಶಕ್ತಿ. ಅದರೆ, ಹಿಂದಿನ ಪಂದ್ಯದಲ್ಲಿ ಗೇಲ್ ಅವರನ್ನು ಹೊರತು ಪಡಿಸಿದರೆ, ಉಳಿದ ಬ್ಯಾಟ್ಸ್ಮನ್ಗಳು ವಿಫಲರಾಗಿದ್ದರು. 39 ರನ್ ಗಳಿಸಿದ್ದ ಗೇಲ್ ವಿಂಡೀಸ್ ತಂಡದ `ಗರಿಷ್ಠ ಸ್ಕೋರರ್' ಎನಿಸಿದ್ದರು.

ಭಾರತ ಹಾಗೂ ವಿಂಡೀಸ್ ತಂಡಗಳ ನಡುವಿನ ಅಂಕಿ ಅಂಶಗಳನ್ನು ನೋಡಿದರೆ ವಿಂಡೀಸ್ ತಂಡಕ್ಕೇ ಮೇಲುಗೈ. ಎರಡೂ ತಂಡಗಳು ಚಾಂಪಿಯನ್ಸ್ ಟ್ರೋಫಿಯಲ್ಲಿ ಮೂರು ಸಲ ಮುಖಾಮುಖಿಯಾಗಿದ್ದು ವಿಂಡೀಸ್ ಎರಡು ಪಂದ್ಯಗಳಲ್ಲಿ ಜಯ ಪಡೆದರೆ, ಭಾರತ ಒಂದು ಸಲ ಗೆಲುವು ಸಾಧಿಸಿದೆ. 1998ರಲ್ಲಿ (ಢಾಕಾ) ಮತ್ತು 2006ರಲ್ಲಿ (ಅಹಮದಾಬಾದ್) ವಿಂಡೀಸ್, 2009ರಲ್ಲಿ (ಜೋಹಾನ್ಸ್ಬರ್ಗ್) ಭಾರತ ಎಳು ವಿಕೆಟ್ಗಳ ಗೆಲುವು ಸಾಧಿಸಿತ್ತು.

ಐಸಿಸಿ ಏಕದಿನ ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ವೇಗಿಗಳಾದ ಇಶಾಂತ್ ಶರ್ಮ, ಉಮೇಶ್ ಯಾದವ್, ಭುವನೇಶ್ವರ್ ಕುಮಾರ್ ದಕ್ಷಿಣ ಆಫ್ರಿಕಾದ ಬ್ಯಾಟ್ಸ್ಮನ್ಗಳನ್ನು ನಿಯಂತ್ರಿಸುವಲ್ಲಿ ವಿಫಲರಾಗಿದ್ದರು. ಹಿಂದಿನ ತಪ್ಪನ್ನು ಈ ಪಂದ್ಯದಲ್ಲಿ ಮಾಡುವಂತಿಲ್ಲ.

ವೇಗಿ ಕೆಮರ್ ರೋಚ್, ರವಿ ರಾಂಪಾಲ್, ಟಿನೊ ಬೆಸ್ಟ್ ಮತ್ತು ಸ್ಪಿನ್ನರ್ ಸುನಿಲ್ ನಾರಾಯಣ್ ವಿಂಡೀಸ್ ತಂಡದ ಬೌಲಿಂಗ್ ಶಕ್ತಿ ಎನಿಸಿದ್ದಾರೆ. ಹಿಂದಿನ ಪಂದ್ಯಗಳ ಅಂಕಿ ಅಂಶಗಳ ಲೆಕ್ಕಾಚಾರಗಳೇನೇ ಇದ್ದರೂ ಇಲ್ಲಿನ ಪಿಚ್ಗೆ ಹೊಂದಿಕೊಂಡು ಉತ್ತಮ ಪ್ರದರ್ಶನ ತೋರುವ ಸವಾಲು ಉಭಯ ತಂಡಗಳ ಮೇಲಿದೆ.

ಪ್ರತಿ ಗುಂಪಿನಲ್ಲಿ ಎಲ್ಲಾ ತಂಡಗಳು ತಲಾ ಮೂರು ಪಂದ್ಯಗಳನ್ನಾಡಲಿದ್ದು, ಎರಡರಲ್ಲಿ ಗೆಲುವು ಸಾಧಿಸುವ ತಂಡಗಳು ಸೆಮಿಫೈನಲ್ ಪ್ರವೇಶಿಸಲಿವೆ. ಭಾರತ ತನ್ನ ಕೊನೆಯ ಪಂದ್ಯದಲ್ಲಿ ಜೂನ್ 15ರಂದು ಸಾಂಪ್ರಾದಾಯಿಕ ಎದುರಾಳಿ ಪಾಕಿಸ್ತಾನದ ಎದುರು ಆಡಲಿದೆ.

ತಂಡಗಳು ಇಂತಿವೆ
ಭಾರತ:  ಮಹೇಂದ್ರ ಸಿಂಗ್ ದೋನಿ (ನಾಯಕ), ಅರ್. ಅಶ್ವಿನ್, ಶಿಖರ್ ಧವನ್, ರವೀಂದ್ರ ಜಡೇಜ, ದಿನೇಶ್ ಕಾರ್ತಿಕ್, ವಿರಾಟ್ ಕೊಹ್ಲಿ, ಭುವನೇಶ್ವರ ಕುಮಾರ್, ಅಮಿತ್ ಮಿಶ್ರಾ, ಇರ್ಫಾನ್ ಪಠಾಣ್, ಸುರೇಶ್ ರೈನಾ, ಇಶಾಂತ್ ಶರ್ಮ, ರೋಹಿತ್ ಶರ್ಮ, ಮುರಳಿ ವಿಜಯ್, ಆರ್. ವಿನಯ್ ಕುಮಾರ್ ಮತ್ತು ಉಮೇಶ್ ಯಾದವ್.

ವೆಸ್ಟ್ ಇಂಡೀಸ್: ಡ್ವೇನ್ ಬ್ರಾವೊ (ನಾಯಕ), ದಿನೇಶ್ ರಾಮ್ದಿನ್, ಟಿನೊ ಬಿಸ್ಟ್, ಡರೆನ್ ಬ್ರಾವೊ, ಜಾನ್ಸನ್ ಚಾರ್ಲೆಸ್, ಕ್ರಿಸ್ ಗೇಲ್, ಜಾಸನ್ ಹೋಲ್ಡರ್, ಸುನಿಲ್ ನಾರಾಯಣ್, ಕೀರನ್ ಪೊಲಾರ್ಡ್, ರವಿ ರಾಂಪಾಲ್, ಕೆಮರ್ ರೋಚ್, ಡರೆನ್ ಸಮಿ, ಮಾರ್ಲೊನ್ ಸ್ಯಾಮುಯೆಲ್ಸ್, ರಾಮನರೇಶ್ ಸರವಣ್ ಹಾಗೂ ಡೆವೊನ್ ಸ್ಮಿತ್.

ಇಂದಿನ ಪಂದ್ಯ: ಭಾರತ ಹಾಗೂ ವೆಸ್ಟ್ ಇಂಡೀಸ್
ಆರಂಭ: ಮಧ್ಯಾಹ್ನ 3ಕ್ಕೆ (ಭಾರತೀಯ ಕಾಲಮಾನ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.