ಶುಕ್ರವಾರ, ಮೇ 14, 2021
31 °C

ಸೆರೆಮನೆ ಮೇಲೆ ದಾಳಿ: 384 ಕೈದಿಗಳ ಪರಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಪಿಟಿಐ): ಅತ್ಯಾಧುನಿಕ ಶಸ್ತ್ರಾಸ್ತ್ರಗಳೊಂದಿಗೆ ಇಲ್ಲಿನ ಸೆರೆಮನೆಯೊಂದರ ಮೇಲೆ ನೂರಕ್ಕೂ ಹೆಚ್ಚು ತಾಲಿಬಾನ್ ಉಗ್ರರು ದಾಳಿ ನಡೆಸಿದ ಪರಿಣಾಮವಾಗಿ ಕುಖ್ಯಾತ ಉಗ್ರರು ಸೇರಿದಂತೆ 384 ಕೈದಿಗಳು ಪರಾರಿಯಾದ ಘಟನೆ ಭಾನುವಾರ ನಡೆದಿದೆ.ದೇಶದ ವಾಯವ್ಯ ಭಾಗದ ಭಾನ್ನು ನಗರದಲ್ಲಿನ ಸೆರೆಮನೆ ಮೇಲೆ ಮಧ್ಯಾಹ್ನ 1.30ರಲ್ಲಿ ಉಗ್ರರು ರಾಕೆಟ್ ದಾಳಿ ನಡೆಸಿದರಲ್ಲದೆ ಪ್ರವೇಶ ದ್ವಾರದ ಬಳಿ ಕೈಬಾಂಬ್‌ಗಳನ್ನು ಎಸೆದರು. ಈ ಸಂದರ್ಭವನ್ನು ಬಳಸಿಕೊಂಡು 20ಕ್ಕೂ ಹೆಚ್ಚು ಕುಖ್ಯಾತ ಭಯೋತ್ಪಾದಕರು ಪರಾರಿಯಾಗಿದ್ದಾರೆ ಎಂದು ಖೈಬರ್-ಪಂಕ್ತುಂಖ್ವಾ ಪ್ರಾಂತ್ಯದ ಮಾಹಿತಿ ಸಚಿವ ಇಫ್ತಿಕಾರ್ ಹುಸೇನ್ ತಿಳಿಸಿದ್ದಾರೆ.ತೆಹ್ರಿಕ್- ಎ- ತಾಲಿಬಾನ್ ದಾಳಿಯ ಹೊಣೆಯನ್ನು ಹೊತ್ತುಕೊಂಡಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.