ಶುಕ್ರವಾರ, ಮೇ 14, 2021
30 °C

ಸೆಲ್ಕಾನ್‌ಗೆ ವಿರಾಟ್ ರಾಯಭಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ್ರಿಕೆಟ್ ಪಟು ವಿರಾಟ್ ಕೊಹ್ಲಿ ಅವರನ್ನು ಸೆಲ್ಕಾನ್ ಮೊಬೈಲ್ ಫೋನುಗಳ ಪ್ರಚಾರ ರಾಯಭಾರಿಯಾಗಿ ನೇಮಕ ಮಾಡಲಾಗಿದೆ ಎಂದು ಸೆಲ್ಕಾನ್ ಕಂಪೆನಿ ತಿಳಿಸಿದೆ.

ಸೆಲ್ಕಾನ್ ಕಂಪೆನಿಯ ಮ್ಯಾನೇಜಿಂಗ್ ಡೈರೆಕ್ಟರ್ ವೈ ಗುರು, `ಸೆಲ್ಕಾನ್ ಭಾರತೀಯ ಮೊಬೈಲ್ ಫೋನ್ ಮಾರುಕಟ್ಟೆಯಲ್ಲಿ ಮೂರನೆಯ ಸ್ಥಾನ ಗಳಿಸಿದೆ.ಯುವಜನಾಂಗವೇ ಅತಿ ಹೆಚ್ಚು ಬಳಸುವ ಈ ಕಂಪೆನಿಗೆ ಯುವ ಕ್ರಿಕೆಟ್ ಪಟು ವಿರಾಟ್ ಕೊಹ್ಲಿಯವರನ್ನು ಪ್ರಚಾರ ರಾಯಭಾರಿಯಾಗಿ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ವಿರಾಟ್ ಕೊಹ್ಲಿ ಅವರ ಪ್ರಚಾರದೊಂದಿಗೆ ಸೆಲ್ಕಾನ್‌ನ ಮಾರುಕಟ್ಟೆಯನ್ನು ಇನ್ನಷ್ಟು ವಿಸ್ತಾರಗೊಳಿಸುವ ಯೋಜನೆಗಳಿವೆ ಎಂದು ತಿಳಿಸಿದರು. ದಕ್ಷಿಣ ಭಾರತದ ಪ್ರಚಾರ ರಾಯಭಾರಿಯಾಗಿ ಚಲನಚಿತ್ರ ನಟಿ ತಮನ್ನಾ ಅವರನ್ನು ಆಯ್ಕೆ ಮಾಡಲಾಗಿದೆ. ಇವರಿಬ್ಬರೂ ಭಾರತೀಯ ಯುವಜನಾಂಗವನ್ನು ಬೆಸೆಯುವ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.ವಿರಾಟ್ ಕೊಹ್ಲಿ ಸಹ ಸೆಲ್ಕಾನ್ ಕಂಪೆನಿಯೊಂದಿಗೆ ಸಹಭಾಗಿಯಾಗಲು ಖುಷಿಯಿಂದ ಒಪ್ಪಿಕೊಂಡಿದ್ದಾರೆ. ಇಷ್ಟು ಸಣ್ಣ ಅವಧಿಯಲ್ಲಿ ಮಾರುಕಟ್ಟೆಯಲ್ಲಿ ಹೆಸರು ಮಾಡಿರುವ `ಸೆಲ್ಕಾನ್~ ಕಂಪೆನಿಯ ರಾಯಭಾರಿಯಾಗಲು ಅವರು ಸಂತಸದಿಂದಲೇ ಒಪ್ಪಿಕೊಂಡರು ಎಂದೂ ತಿಳಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.