ಸೋಮವಾರ, ಜೂನ್ 21, 2021
20 °C

ಸೆಲ್ವಿ ರೆಜಿನಾ ಟ್ರಸ್ಟ್: ವಿದೇಶಿ ದೇಣಿಗೆ ಅನುಮತಿ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ವಿದೇಶ­ದಿಂದ ದೇಣಿಗೆ ಪಡೆ­ಯಲು ಬೆಂಗಳೂರಿನ ದೊಡ್ಡ­ಗುಬ್ಬಿಯ ಸ್ವಯಂಸೇವಾ ಸಂಸ್ಥೆ ‘ಸೆಲ್ವಿ ರೆಜಿನಾ ಚಾರಿಟಬಲ್‌ ಟ್ರಸ್ಟ್’ಗೆ ನೀಡಿದ್ದ ಅನುಮತಿ­ಯನ್ನು ಕೇಂದ್ರ ಗೃಹ ಸಚಿವಾಲಯ ರದ್ದುಗೊಳಿಸಿದೆ.



‘ವಿದೇಶಗಳಿಂದ ಬರುವ ದೇಣಿಗೆ ಮೊತ್ತ­ವನ್ನು ಘೋಷಿತ ಉದ್ದೇಶದ ಬದಲು ಬೇರೆ ಉದ್ದೇಶಗಳಿಗೆ ಬಳಸಲಾ­ಗಿದ್ದು, ಇದು ವಿದೇಶಿ ಕೊಡುಗೆ ಕಾಯ್ದೆ –2010ಗೆ ವಿರುದ್ಧವಾಗಿದೆ’ ಎಂದು ಫೆ.26ರಂದು ಸಚಿವಾಲಯ ಹೊರಡಿ­ಸಿದ ಆದೇಶದಲ್ಲಿ ತಿಳಿಸಲಾಗಿದೆ.



ಬೆಂಗಳೂರಿನ ಜೀವನ್‌ಬಿಮಾ ನಗರ­ದ ಭಾರತೀಯ ಸ್ಟೇಟ್‌ ಬ್ಯಾಂಕ್‌­ನಲ್ಲಿ ಸಂಸ್ಥೆಯ ಖಾತೆಗೆ ಜಮೆ ಆದ ಮೊತ್ತ­ವನ್ನು ತಡೆ ಹಿಡಿಯಲು ಸಹ ಸಚಿವಾಲಯ ಸೂಚನೆ ನೀಡಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.