ಸೆ. 10ಕ್ಕೆ ಮತ ಮರು ಎಣಿಕೆ?
ಬಳ್ಳಾರಿ: ಬಳ್ಳಾರಿ ಲೋಕಸಭಾ ಕ್ಷೇತ್ರದ ಮತಗಳ ಮರು ಎಣಿಕೆ ಕಾರ್ಯವನ್ನು ಸೆ. 10 ರಂದು ನಡೆಸಲು ಅವಕಾಶ ನೀಡು ವಂತೆ ಜಿಲ್ಲಾಡಳಿತವು ರಾಜ್ಯ ಚುನಾ ವಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ.
ಮತಗಳ ಮರುಎಣಿಕೆಗೆ ಆದೇಶ ನೀಡಿದ್ದ ಹೈಕೋರ್ಟ್ ತೀರ್ಪನ್ನು ಸಂಸದೆ ಸುಪ್ರೀಂ ಕೋರ್ಟ್ನಲ್ಲಿ ಪ್ರಶ್ನಿಸಿದ್ದರು. ತಡೆಯಾಜ್ಞೆ ನೀಡಿದ್ದ ಇದೇ 17ರಂದು ಮೇಲ್ಮನವಿಯನ್ನು ತಿರಸ್ಕರಿಸಿ, ಹೈಕೋರ್ಟ್ ತೀರ್ಪನ್ನು ಎತ್ತಿಹಿಡಿಯಿತು. ಅಲ್ಲದೇ, ನಾಲ್ಕು ವಾರಗಳೊಳಗೆ ಮರು ಮತಎಣಿಕೆ ಪೂರ್ಣಗೊಳಿಸುವಂತೆಯೂ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಎಲ್ಲ ಸಿದ್ಧತೆಗಳನ್ನೂ ಪೂರ್ಣಗೊಳಿಸ ಲಾಗಿದ್ದು, ಸೆಪ್ಟೆಂಬರ್ 10 ರಂದು ಮರುಎಣಿಕೆ ನಡೆಸಲು ಅನುಮತಿ ನೀಡುವಂತೆ ಜಿಲ್ಲಾ ಚುನಾವಣಾಧಿ ಕಾರಿಯೂ ಆಗಿರುವ ಜಿಲ್ಲಾಧಿಕಾರಿ ಎ.ಎ. ಬಿಸ್ವಾಸ್ ಆಯೋಗಕ್ಕೆ ಪತ್ರ ಬರೆದು ಮನವಿ ಮಾಡಿದ್ದಾರೆ.
2009ರ ಏಪ್ರಿಲ್ನಲ್ಲಿ ನಡೆದಿದ್ದ 13ನೇ ಲೋಕಸಭೆ ಚುನಾವಣೆ ಯಲ್ಲಿ 2,243 ಮತಗಳ ಅಂತರ ದಿಂದ ಕಾಂಗ್ರೆಸ್ನ ಎನ್.ವೈ. ಹನು ಮಂತಪ್ಪ ಸೋತಿದ್ದರು. ಮತ ಎಣಿಕೆ ಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಏಜೆಂಟ್ ಆಗಿದ್ದ ಚಂದ್ರಗೌಡ ಎಂಬುವವರು ಅಕ್ರಮ ನಡೆದಿರುವ ಕುರಿತು ಹೈಕೋರ್ಟ್ಗೆ ದೂರು ಸಲ್ಲಿಸಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.