ನವದೆಹಲಿ (ಪಿಟಿಐ): ಭಾರತೀಯ ಸೇನೆಯ ಎರಡು ಮುಂಚೂಣಿ ತುಕಡಿಗಳು ಜ.16-17ರ ನಡುವಿನ ರಾತ್ರಿ ನಡೆಸಿದ ತಾಲೀಮು ಚರ್ಚೆಗೆ ಗ್ರಾಸವಾಗುವ ಸುದ್ದಿಯಾಗುತ್ತದೆಂಬ ಅನುಮಾನ ಸೇನಾ ಮುಖ್ಯಸ್ಥ ವಿ.ಕೆ.ಸಿಂಗ್ ಅವರಿಗೆ ಮುಂಚೆಯೇ ಇತ್ತು ಎಂಬುದು ಅವರು ಮಾರ್ಚ್ ಮಧ್ಯಬಾಗದಲ್ಲಿ ಇಂಗ್ಲಿಷ್ ನಿಯತಕಾಲಿಕಕ್ಕೆ ನೀಡಿದ್ದ ಸಂದರ್ಶನವೊಂದರಲ್ಲಿ ಕಂಡುಬಂದಿದೆ.

`ನಮ್ಮ ಸೇನಾ ಪಡೆಗಳು ಏನೇ ತಾಲೀಮು ನಡೆಸಿದರೂ ಈಗ ಅದನ್ನು ದೊಡ್ಡ ಸುದ್ದಿ ಮಾಡುವವರು ಇದ್ದಾರೆ. ತಾಲೀಮನ್ನಲ್ಲದೇ ಬೇರೆ ಏನಾದರೂ ಪೂರ್ವಸನ್ನದ್ಧತೆಯಲ್ಲಿ ತೊಡಗಿದರೂ ಅದನ್ನು ತಾಲೀಮು ಎಂದೇ ಬಿಂಬಿಸುವವರು ಇದ್ದಾರೆ.

ತಮ್ಮದೇ ದುರುದ್ದೇಶಗಳನ್ನು ಸಾಧಿಸಿಕೊಳ್ಳಲು ಈಗ ಸುದ್ದಿ ಮಾಡುವವರು ಅಧಿಕವಾಗುತ್ತಿದ್ದಾರೆ~ ಎಂದು ವಿಕೆ ಸಿಂಗ್ ಅವರು ಮಾರ್ಚ್ 13ರಂದು ನಿಯತಕಾಲಿಕಕ್ಕೆ ನೀಡಿದ್ದ ಸಂದರ್ಶನದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಪತ್ರಕರ್ತರಿಗೆ ಏನಾದರೂ ರೋಚಕವಾಗಿದ್ದನ್ನು ಹೇಳಿ ನೋಡಿ. ಅದು ಮುಖಪುಟದಲ್ಲಿ ಪ್ರಕಟವಾಗುತ್ತದೆ.

ಅದರಲ್ಲಿ ಸತ್ಯಾಂಶವಿದೆಯೇ ಎಂದು ಯಾರೂ ಯೋಚಿಸುವ ಗೋಜಿಗೆ ಹೋಗುವುದಿಲ್ಲ.
ಆದರೆ ಅಂತಹ ಸುದ್ದಿ ಯಾರಾದರೊಬ್ಬರನ್ನು ಕಷ್ಟಕ್ಕೆ ಸಿಲುಕಿಸಿರುತ್ತದೆ ಎಂದೂ ಸಿಂಗ್ ಸಂದರ್ಶನದಲ್ಲಿ ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.