ಶನಿವಾರ, ಮೇ 8, 2021
26 °C

ಸೇವಾ ತೆರಿಗೆ ಬಾಕಿ: ಕಿಂಗ್‌ಫಿಷರ್‌ಗೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಸಿಬ್ಬಂದಿಯ ವೇತನ ಪಾವತಿಯನ್ನೂ ಮಾಡಲಾಗದೆ ಸಂಕಷ್ಟದಲ್ಲಿರುವ ಕಿಂಗ್‌ಪಿಷರ್ ವಿಮಾನಯಾನ ಕಂಪೆನಿಗೆ, 60 ಕೋಟಿ ರೂಪಾಯಿ ಬಾಕಿ ಸೇವಾ ತೆರಿಗೆಯನ್ನು ಶೀಘ್ರವೇ ಪಾವತಿಸಲು ತೆರಿಗೆ ಇಲಾಖೆ ಸೂಚಿಸಿದೆ.



ಕಳೆದ ತಿಂಗಳು ಕಂಪೆನಿ 20 ಕೋಟಿ ರೂಪಾಯಿ ಸೇವಾ ತೆರಿಗೆ ಪಾವತಿಸಿತ್ತು.



`ಕಂಪೆನಿ ಪ್ರಯಾಣಿಕರಿಂದ ಸಂಗ್ರಹಿಸಿರುವ ಸೇವಾ ತೆರಿಗೆ ಇಲಾಖೆಗೆ ಸೇರಲೇಬೇಕು~ ಎಂದು ಕೇಂದ್ರ ಅಬಕಾರಿ ಮತ್ತು ಸೀಮಾಶುಲ್ಕ ಮಂಡಲಿಯ ಅಧ್ಯಕ್ಷ ಎಸ್.ಕೆ.ಗೋಯಲ್ ಸ್ಪಷ್ಟಪಡಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.