ಸೋಮವಾರ, ಜೂನ್ 14, 2021
21 °C

ಸೇವಾ ತೆರಿಗೆ ವಂಚನೆ: ಕಿಂಗ್‌ಫಿಷರ್ ವಿರುದ್ಧ ಕೋರ್ಟ್‌ಗೆ- ಎಚ್ಚರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಪ್ರಯಾಣಿಕರಿಂದ ಸಂಗ್ರಹಿಸಿರುವ ಸೇವಾ ತೆರಿಗೆಯನ್ನು ಪಾವತಿ ಸದಿರುವುದಕ್ಕಾಗಿ ಕಿಂಗ್‌ಫಿಷರ್ ಏರ್‌ಲೈನ್ಸ್ ವಿರುದ್ಧ ನ್ಯಾಯಾಲಯದ ಮೊರೆ ಹೋಗುವುದಾಗಿ ಕಂದಾಯ ಇಲಾಖೆ ಬೆದರಿಸಿದೆ.`ಅವರು (ಕಿಂಗ್‌ಫಿಷರ್) ನ್ಯಾಯಾಲಯವನ್ನು ಎದುರಿಸಲೇಬೇಕು. ಕಂಪೆನಿ ಸೇವಾ ತೆರಿಗೆ ಪಾವತಿಸದೆ ವಂಚಿಸಿದೆ. ಅದಕ್ಕಾಗಿ ಜೈಲು ಶಿಕ್ಷೆ ಆಗಬಹುದು~ ಎಂದು ಕೇಂದ್ರ ಅಬಕಾರಿ ಮತ್ತು ಸೀಮಾ ಸುಂಕ ಮಂಡಳಿಯ (ಸಿಬಿಇಸಿ) ಅಧ್ಯಕ್ಷ ಎಸ್.ಕೆ. ಗೋಯಲ್ ಹೇಳಿದ್ದಾರೆ.76 ಕೋಟಿ ರೂಪಾಯಿ ಮೊತ್ತವನ್ನು ಪಾವತಿಸದೇ ಇರುವುದಕ್ಕಾಗಿ ಈಗಾಗಲೇ ಸೇವಾ ತೆರಿಗೆ ಇಲಾಖೆಯು ಸಾಲದ ಸುಳಿಯಲ್ಲಿ ಸಿಲುಕಿರುವ ಕಿಂಗ್‌ಫಿಷರ್ ಸಂಸ್ಥೆಯ ಸುಮಾರು 40 ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿದೆ. ಅಲ್ಲದೇ ಕಂಪೆನಿಯ ಅಂತರರಾಷ್ಟ್ರೀಯ ವಿಮಾನಯಾನ ಒಕ್ಕೂಟದ ಖಾತೆಗಳನ್ನೂ ಮುಟ್ಟುಗೋಲು ಹಾಕಿಕೊಂಡಿದೆ.`ಈಗ ನಮ್ಮ ಮುಂದೆ ಎರಡು ಆಯ್ಕೆಗಳಿವೆ. ಒಂದು ಬಾಕಿ ಉಳಿದಿರುವ ಮೊತ್ತವನ್ನು ಕಂಪೆನಿಯಿಂದ ವಶಪಡಿಸಿಕೊಳ್ಳುವುದು. ಎರಡನೆಯದಾಗಿ ನ್ಯಾಯಾಲಯದಿಂದ ಕಂಪೆನಿಗೆ ಶಿಕ್ಷೆ ಆಗುವಂತೆ ಮಾಡುವುದು~ ಎಂದು ಗೋಯಲ್ ಹೇಳಿದ್ದಾರೆ.ಮಾರ್ಚ್ 31ರ ಒಳಗಾಗಿ ಬಾಕಿ ಉಳಿದಿರುವ ಸೇವಾ ತೆರಿಗೆಗಳನ್ನು ಪಾವತಿಸುವುದಾಗಿ ಕಿಂಗ್‌ಫಿಷರ್ ಸಿಬಿಇಸಿಗೆ ತಿಳಿಸಿದೆ. ಕಿಂಗ್‌ಫಿಷರ್ ತನ್ನ ಪ್ರಯಾಣಿಕರಿಂದ ಶೇ 10ರಷ್ಟು ಸೇವಾ ತೆರಿಗೆ ಸಂಗ್ರಹಿಸಿದೆ. ಆದರೆ ಅದನ್ನು ಇಲಾಖೆಗೆ ಪಾವತಿಸಿಲ್ಲ ಎಂದು ಗೋಯಲ್ ತಿಳಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.