ಕೊಳ್ಳೇಗಾಲ: ಸೋಪಾನಕಟ್ಟೆ ಮತ್ತು ಸ್ನಾನಘಟ್ಟ ಹಾಗೂ 2 ಕೊಠಡಿಗಳನ್ನು ಪವರ್ ಕಾರ್ಪೋರೇಷನ್ ನಿರ್ಮಿ ಸಲು ಕ್ರಮ ಜರುಗಿಸುವಂತೆ ಒತ್ತಾ ಯಿಸಿ ಸತ್ತೇಗಾಲ ಛಲವಾದಿ ಮಹಾ ಸಭಾ ಪದಾಧಿಕಾರಿಗಳು ಹಾಗೂ ಮುಖಂಡರು ಸೋಮವಾರ ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.

ತಾಲ್ಲೂಕಿನ ಸತ್ತೇಗಾಲ ಮಗ್ಗುಲಲ್ಲೇ ಹರಿಯುವ ಕಾವೇರಿ ನದಿ ದಡದಲ್ಲಿರುವ ಈಶ್ವರ ದೇವಸ್ಥಾನದ ಬಳಿ ಬರೂಕ್ ಪವರ್ ಕಾರ್ಪೋ ರೇಷನ್ ಕಾವೇರಿಗೆ ಅಡ್ಡಲಾಗಿ ಅಣೆಕಟ್ಟೆ ಕಟ್ಟಿ ವಿದ್ಯುತ್ ಸ್ಥಾವರ ನಿರ್ಮಿಸಿದ್ದರಿಂದ ತಲೆತಲಾಂತರದಿಂದ ಸತ್ತೇಗಾಲದ ಜನತೆಯ ಸ್ನಾನಕ್ಕಾಗಿ ನಿರ್ಮಿಸಿದ್ದ ಸ್ನಾನ ಘಟ್ಟ, ಬಟ್ಟೆಬರೆ ಒಗೆಯುವ ಸಲುವಾಗಿ ನಿರ್ಮಿಸಿದ್ದ ಸೋಪಾನ ಕಟ್ಟೆ ಹಿನ್ನೀರಿನಿಂದಾಗಿ ಸಂಪೂರ್ಣವಾಗಿ ಮುಳುಗಡೆಗೊಂಡು ಗ್ರಾಮದ ಜನತೆ ಈ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಇದನ್ನು ಹೊಸ ದಾಗಿ ನಿರ್ಮಿಸಿಕೊಡುವಂತೆ ಪವರ್ ಕಾರ್ಪೋರೇಷನ್ ಅಧಿಕಾರಿ ಗಳಿಗೆ ಕಳೆದ ಐದಾರು ವರ್ಷಗಳಿಂದಲೂ ತಿಳಿಸುತ್ತಲೇ ಬಂದಿದ್ದು ಅವರು ಈ ಬಗ್ಗೆ ಯಾವುದೇ ಕ್ರಮಕೈ ಗೊಂಡಿ ರುವುದಿಲ್ಲ ಎಂದು ದೂರಿದ್ದಾರೆ.

ವಿಳಂಬ ಧೋರಣೆಯ ಬಗ್ಗೆ ಸೋಮವಾರ ಈಶ್ವರ ದೇವಾಲಯದ ಭಕ್ತಮಂಡಳಿ, ಗ್ರಾಮದ ಮಹಿಳೆಯರು ಸಭೆ ನಡೆಸಿ ಪವರ್ ಕಾರ್ಪೋ ರೇಷನ್ಗೆ ಮುತ್ತಿಗೆ ಹಾಕಿ ಧರಣಿ ನಡೆಸಲು ತೀರ್ಮಾನಿಸಿದ್ದಾರೆ.

ಪವರ್ ಕಾರ್ಪೊರೇಷನ್ 100 ಮೀ ಉದ್ದದ ಸೋಪಾನ ಕಟ್ಟೆ, ಸ್ನಾನಘಟ್ಟ ಹಾಗೂ ಮಹಿಳೆಯರು ಬಟ್ಟೆ ಬದಲಾಯಿಸಲು 2 ಕೊಠಡಿ ನಿರ್ಮಿಸಿಕೊಡಬೇಕು, ಅಲ್ಲದೇ ಮೂರು ತಿಂಗಳಿಗೊಮ್ಮೆ ನಿಂತ ಹಿನ್ನೀರನ್ನು ಖಾಲಿಮಾಡಿ ಹೊಸ ನೀರು ನಿಲ್ಲುವಂತೆ ಮಾಡಬೇಕು ಎಂಬ ಬೇಡಿಕೆಯನ್ನು ಪೂರೈಸುವ ಬಗ್ಗೆ ಸಭೆ ನಡೆಸಿ ಅನುಕೂಲ ಕಲ್ಪಿಸಬೇಕೆಂದು ತಹಶೀಲ್ದಾರ್ರಲ್ಲಿ ಮನವಿ ಮಾಡಿದರು.

ಛಲವಾದಿ ಮಹಾಸಭಾ ಅಧ್ಯಕ್ಷ ಪುಟ್ಟಸ್ವಾಮಿ, ಕಾರ್ಯದರ್ಶಿ ಮಲ್ಲೇಶ್, ಉಪಾಧ್ಯಕ್ಷ ರಾಮು, ನಂಜಯ್ಯ, ಎಸ್. ರಾಜಶೇಖರ್, ಸಂಪತ್ತು, ಶಿವ ಲಿಂಗಯ್ಯ, ನಂಜುಂಡ ಮೂರ್ತಿ, ಮಂಟ್ಯ, ಲಿಂಗ ರಾಜು, ಕಾಳಯ್ಯ, ಗಾಂಧಿ ಮತ್ತಿತರರು ಹಾಜರಿದ್ದರು. ಈ ಸಂಬಂಧ ಮಂಗಳವಾರ ತಹಶೀಲ್ದಾರ್ ಡಾ. ವೆಂಕಟೇಶ್ ಮೂರ್ತಿ ಬರೂಕ್ ಪವರ್ ಕಾರ್ಪೋರೇಷನ್ ಅವರಿಗೆ ನೋಟಿಸು ಜಾರಿಗೊಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.