ಸೋಮವಾರ, 16-4-1962
ರಾಷ್ಟ್ರೈಕ್ಯತೆ ಭಾವನೆಹೆಚ್ಚುವುದು ಅಗತ್ಯ
ಮುಂಬೈ, ಏ. 15- ಭಾರತವನ್ನು ಆಕ್ರಮಣಕಾರರು ಆಕ್ರಮಿಸಿದ್ದರೆ ಅದು ಅವರ ಸ್ವಶಕ್ತಿಯಿಂದಲ್ಲ. ನಮ್ಮಲ್ಲಿದ್ದ ಅನೈಕ್ಯತೆಯಿಂದ ಜಯಗಳಿಸಿದರು ಎಂಬುದನ್ನು ಇತಿಹಾಸ ಸಾರುತ್ತದೆ ಎಂದು ರಕ್ಷಣಾ ಸಚಿವ ಶ್ರಿ ವಿ.ಕೆ. ಕೃಷ್ಣಮೆನನ್ ನಿನ್ನೆ ಇಲ್ಲಿ ತಿಳಿಸಿದರು.

ಇತ್ತೀಚೆಗೆ ಭಾರತ ತೆಗೆದುಕೊಂಡ ವಿಮಾನ ವಾಹಕ ವಿಕ್ರಾಂತ ನೌಕೆಯ ಅಧಿಕಾರಿ ವರ್ಗ ರಕ್ಷಣಾ ಸಚಿವರಿಗೆ ಗೌರವರಕ್ಷೆ ನೀಡಿದ ಸಮಾರಂಭದಲ್ಲಿ ನೌಕಾಧಿಕಾರಿಗಳನ್ನುದ್ದೇಶಿಸಿ ಶ್ರಿ ಕೃಷ್ಣಮೆನನ್ ಮಾತನಾಡುತ್ತಾ ಮೇಲ್ಕಂಡಂತೆ ತಿಳಿಸಿದರು.

ಕಾಂಗ್ರೆಸ್ ಅಧ್ಯಕ್ಷ ನೀಲಂ ರಾಜೀನಾಮೆ ಒಪ್ಪಿಗೆ
ನವದೆಹಲಿ, ಏ.15- ಕಾಂಗ್ರೆಸ್ ಅಧ್ಯಕ್ಷರ ಸ್ಥಾನಕ್ಕೆ ನೀಲಂ ಸಂಜೀವರೆಡ್ಡಿ ಅವರಿತ್ತ ರಾಜೀನಾಮೆಯನ್ನು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಇಂದು ಅಂಗೀಕರಿಸಿತು. ಮುಂದಿನ ಏಐಸಸಿ ಸಭೆಯಲ್ಲಿ ಅವರ ಉತ್ತರಾಧಿಕಾರಿ ಆಯ್ಕೆ ಆಗುವವರೆಗೆ ರೆಡ್ಡಿ ಅವರು ಅಧಿಕಾರದಲ್ಲಿ ಮುಂದುವರಿಯುವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.