ಸೋಮೇಶ್ವರ ಕೆರೆ: ಶಾಸಕರಿಂದ ಪರಿಶೀಲನೆ

7

ಸೋಮೇಶ್ವರ ಕೆರೆ: ಶಾಸಕರಿಂದ ಪರಿಶೀಲನೆ

Published:
Updated:
ಸೋಮೇಶ್ವರ ಕೆರೆ: ಶಾಸಕರಿಂದ ಪರಿಶೀಲನೆ

ಉಳ್ಳಾಲ: ಸೋಮೇಶ್ವರ ದೇವಸ್ಥಾನದ ಬಳಿಯಿರುವ  ಕೆರೆ ಅಭಿವೃದ್ಧಿಗೆ ರೂ. 1.5 ಕೋಟಿ ಮೀಸಲಿಟ್ಟಿದ್ದು,  ಈ ತಾಣವನ್ನು ಪ್ರವಾಸಿ  ತಾಣವಾಗಿ ಮಾರ್ಪಾಡು  ಮಾಡಲಾಗುವುದು ಎಂದು  ಶಾಸಕ ಯು.ಟಿ.ಖಾದರ್  ತಿಳಿಸಿದರು. ಕೆರೆ ಅಭಿವೃದ್ಧಿಗೆ  ಸಂಬಂಧಿಸಿದಂತೆ ಸ್ಥಳ  ಪರಿಶೀಲನೆ ನಡೆಸಿ ಸುದ್ಧಿಗಾರರೊಂದಿಗೆ  ಮಾತನಾಡಿದ  ಅವರು, ಕೆರೆ ಅಭಿವೃದ್ಧಿಗೆ ಸಂಬಂಧಿಸಿದಂತೆ  ಯೋಜನೆ ರೂಪಿಸಲಾಗಿದ್ದು  ಮೊದಲ ಹಂತದ  ಸರ್ವೇ ಕಾರ್ಯ ಶೀಘ್ರದಲ್ಲಿ  ನಡೆಯಲಿದ್ದು, ಬಳಿಕ  ಸರ್ಕಾರ  ನಿಯೋಜಿಸಿರುವ  ಏಜೆನ್ಸಿ ಕಾರ್ಯ ನಿರ್ವಹಿಸಲಿದೆ ಎಂದರು.ವೈಜ್ಞಾನಿಕವಾಗಿ ಕೆರೆಯನ್ನು ಅಭಿವೃದ್ಧಿಗೊಳಿಸಲಾಗುವುದರಿಂದ  ಕುಡಿಯುವ ನೀರಿಗೆ, ಯಾತ್ರಾರ್ಥಿಗಳಿಗೆ,  ಸಹಾಯಕವಾಗುವಂತೆ   ರೂಪಿಸಲಾಗುವುದು ಎಂದು ತಿಳಿಸಿದರು. ಕೆರೆ ಅಭಿವೃದ್ಧಿ  ಸಮಿತಿ ಅಧ್ಯಕ್ಷ  ಹಾಗೂ ಕೋಟೆಕಾರ್ ಗ್ರಾ.ಪಂ ಸದಸ್ಯ  ಕೃಷ್ಣ ಗಟ್ಟಿ ಸೋಮೇಶ್ವರ,  ಮುಖಂಡರಾದ  ಯೋಗೀಶ್ ಶೆಟ್ಟಿ ಜೆಪ್ಪು, ದಿನೇಶ್ ಕುಂಪಲ, ರಾಜೇಶ್ ಕಾಪಿಕಾಡು,  ಗಟ್ಟಿ ನಾರಾಯಣ ಗಟ್ಟಿ, ಯುವಜನ ವಿಭಾಗದ ಅಧ್ಯಕ್ಷ ನಿತಿನ್ ಗಟ್ಟಿ ಮೊದಲಾದವರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry