ರಾಣೆಬೆನ್ನೂರು:  ಸ್ಪರ್ಧೆಯಲ್ಲಿ ಸೋಲು ಗೆಲುವು ಕ್ರೀಡಾಪಟುಗಳ ಮನಸ್ಥಿತಿ ಆಧಾರವಾಗಿರುತ್ತದೆ, ಆತ್ಮ ವಿಶ್ವಾಸ ಹೆಚ್ಚಿಸಿಕೊಂಡು ಗೆಲುವಿನತ್ತ ಹೆಜ್ಜೆ ಹಾಕಬೇಕು, ಯಾವುದಕ್ಕೂ ಧೃತಿ ಗೆಡಬಾರದು, ಕ್ರೀಡೆ ಸ್ಪರ್ಧೆಗೆ ಅಷ್ಟೇ ಸೀಮಿತವಾಗಿರದೇ ನಿರಂತರ ಅಭ್ಯಾಸ ದಲ್ಲಿ ತೊಡಗಿಕೊಂಡು ಅಂತರಾಷ್ಟ್ರೀಯ ಮಟ್ಟದವರೆಗೂ ಭಾಗವಹಿಸಬೇಕು ಎಂದು ಶಾಸಕ ಜಿ.ಶಿವಣ್ಣ ಕರೆ ನೀಡಿದರು.

ಇಲ್ಲಿನ ಕೆಎಲ್ಇ ಸಂಸ್ಥೆಯ ರಾಜ ರಾಜೇಶ್ವರಿ ಪ,ಪೂ ಮಹಿಳಾ ಕಾಲೇಜಿನ ಆವರಣಲ್ಲಿ ಬಿಎಜೆಎಸ್ಎಸ್ ಸಂಸ್ಥೆ, ಜಿಪಂ ಹಾವೇರಿ, ಉಪ ನಿರ್ದೇಶಕರ ಕಚೇರಿ ಹಾವೇರಿ ಇವರ ಆಶ್ರಯದಲ್ಲಿ ಏರ್ಪಡಿಸಿದ್ದ ಬೆಳಗಾವಿ ವಿಭಾಗ ಮತ್ತು ರಾಜ್ಯಮಟ್ಟದ ಪ್ರಾಥಮಿಕ ಮತ್ತು ಪೌಢ ಶಾಲೆ ಬಾಲಕ/ಬಾಲಕೀಯರ ಥ್ರೋಬಾಲ್ ಪಂದ್ಯಾವಳಿ ಮುಕ್ತಾಯ ಸಮಾರಂಭ ದಲ್ಲಿ ಪಾರಿತೋಷಕ ಹಾಗೂ ಪ್ರಶಸ್ತಿ ಪತ್ರ ವಿತರಣೆ ಮಾಡಿ ಅವರು ಮಾತನಾಡಿದರು.

ಮಕ್ಕಳು ಎಲ್ಲ ಕ್ರೀಡೆಗಳಲ್ಲೂ ಭಾಗ ವಹಿಸುವಂತೆ ಕೋಚ್ಗಳು ಪ್ರೇರಣೆ ಮಾಡಬೇಕು, ಮಕ್ಕಳ ತಾಲೀಮಿನಲ್ಲಿ ಕೋಚ್ಗಳು ಹಿಂದೆ ಬೀಳಬಾರದು. ಮಕ್ಕಳನ್ನು ಹುರಿದುಂಬಿಸಬೇಕು, ಪ್ರತಿ ಯೊಬ್ಬ ವಿದ್ಯಾರ್ಥಿಯಲ್ಲಿ ಪ್ರತಿಭೆ ಇರುತ್ತದೆ ಅದನ್ನು ಹೊರ ಹಾಕಲು ದೈಹಿಕ ಶಿಕ್ಷಕರು ಶ್ರಮಿಸಬೇಕು ಎಂದರು.

ನಗರಯೋಜನಾ ಪ್ರಾಧಿಕಾರ ಅಧ್ಯಕ್ಷ ವಿಶ್ವನಾಥ ಪಾಟೀಲ, ಕೆಎಲ್ಇ ಸಂಸ್ಥೆಯ ಸ್ಥಾನಿಕ ಆಡಳಿತ ಮಂಡಳಿ ಉಪಾಧ್ಯಕ್ಷ ವ್ಹಿ.ಪಿ.ಲಿಂಗನೌಡ್ರ, ಬಿ. ಎಸ್.ಪಟ್ಟಣಶೆಟ್ಟಿ, ವೀರಣ್ಣ ಬಿ. ಅಂಗಡಿ, ಸಣ್ಣೋಬಯ್ಯ, ಉಮೇಶ ಹೊನ್ನಾಳಿ, ಕಸ್ತೂರಿ ಪಾಟೀಲ, ಜೆ.ಡಿ.ಶಿರೂರು, ವೀರಣ್ಣ ಹನಗೋಡಿ ಮಠ, ಹೋಬಾನಾಯಕ, ಎಂ.ಎಚ್. ಪಾಟೀಲ, ಜಗ ದೀಶ ಹುಗ್ಗಿ, ಎಂ.ಎಸ್. ಗಾಣಿಗೇರ, ಎಫ್.ವಿ.ಶಿಗ್ಲಿ, ಈಶ್ವರ ಬಾರ್ಕಿ, ವಿ.ಪಿ. ಗುಂಗೇರ, ಶಿವಾನಂದ ಆರೇರ, ಸ್ವರ್ಣಸಿಂಗ್, ಪ್ರಭು ಪಾಟೀಲ, ಪ್ರಶಾಂತ ಉಕ್ಕಡಗಾತ್ರಿ, ಜಿ.ಎಂ. ಗರಗ, ಸುಂದ್ರಾ ರಾಮಚಂದ್ರ, ಎಂ.ಬಿ. ಗಾಣಿಗೇರ, ದೊಡ್ಡಮನಿ ಮತ್ತಿತರರು ಉಪಸ್ಥಿತರಿದ್ದರು.

14 ವರ್ಷದೊಳಗಿನ ಪ್ರಾಥಮಿಕ (ಬಾಲಕರ) ವಿಭಾಗದಲ್ಲಿ ಹಾವೇರಿ ಪ್ರಥಮ ಸ್ಥಾನ ಪಡೆದರೆ ಬಾಗಲ ಕೋಟೆ ದ್ವಿತೀಯ ಸ್ಥಾನ ಪಡೆದಿದೆ. ಬಾಲಕಿಯರಲ್ಲಿ ಚಿಕ್ಕೋಡಿ ಪ್ರಥಮ ಸ್ಥಾನ ಪಡೆದರೆ ಬಾಗಲಕೋಟೆ ದ್ವಿತೀಯ ಸ್ಥಾನ ದೊರಕಿದೆ. ಪ್ರೌಢಶಾಲಾ ಬಾಲಕರ ವಿಭಾಗ ದಲ್ಲಿ ಚಿಕ್ಕೋಡಿ ಪ್ರಥಮ ಸ್ಥಾನ ಮತ್ತು ಹಾವೇರಿ ದ್ವಿತೀಯ ಸ್ಥಾನ ಪಡೆದು ಕೊಂಡಿವೆ.

ಬಾಲಕಿಯರಲ್ಲಿ ಬೆಳಗಾವಿ ಪ್ರಥಮ ಸ್ಥಾನ ಪಡೆದೆ ಬಾಗಲಕೋಟೆ ದ್ವಿತೀಯ ಸ್ಥಾನ ಪಡೆಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಎಂ. ಪ್ರೇಮಾ ಸ್ವಾಗತಿಸಿದರು. ದೈಹಿಕ ನಿರ್ದೇಶಕ ಡಿ. ರವಿ ಪ್ರತಿಜ್ಞಾ ಪ್ರಶಸ್ತಿ ವಿತರಣೆಗೆ ಸಹಕರಿಸಿದರು. ಎಚ್. ಸಿದ್ದಣ್ಣ ಕೋರಿಶೆಟ್ರ ನಿರೂಪಿಸಿದರು, ಪಾಟೀಲ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.