ಬುಧವಾರ, ಮೇ 12, 2021
18 °C

ಸೋಲೂರು: 15ರಂದು ಸಾಮೂಹಿಕ ವಿವಾಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸೋಲೂರು ಗ್ರಾಮದ ಆರ್ಯ ಈಡಿಗ ಮಹಾ ಸಂಸ್ಥಾನದ ಶ್ರೀ ರೇಣುಕಾ ಯಲ್ಲಮ್ಮ ದೇವಿ ದೇವಸ್ಥಾನ ಟ್ರಸ್ಟ್ ಆಶ್ರಯದಲ್ಲಿ ಏಪ್ರಿಲ್ 14 ಮತ್ತು 15 ರಂದು ಗುರುವಂದನೆ ಮತ್ತು ಉಚಿತ ಸಾಮೂಹಿಕ  ವಿವಾಹವನ್ನು ಏರ್ಪಡಿಸಲಾಗಿದೆ ಎಂದು ಸೋಲೂರು ಮಹಾ ಸಂಸ್ಥಾನದ ಕಾರ್ಯನಿರ್ವಾಹಕ ಧರ್ಮದರ್ಶಿ ಎಂ.ತಿಮ್ಮೇಗೌಡ ಹೇಳಿದರು.ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್ 14 ರಂದು ಸಂಜೆ 7.30ಕ್ಕೆ ರೇಣುಕಾನಂದ ಸ್ವಾಮೀಜಿಯವರಿಗೆ ಗುರುವಂದನೆ ಮತ್ತು ಕಿರೀಟಧಾರಣೆ ಕಾರ್ಯ ನಡೆಯಲಿದೆ. ಏಪ್ರಿಲ್ 15 ರಂದು ಬೆಳಿಗ್ಗೆ 8ಕ್ಕೆ ಸಾಮೂಹಿಕ ವಿವಾಹ ಮಹೋತ್ಸವ ಮತ್ತು ರೇಣುಕಾದೇವಿ ಯಲ್ಲಮ್ಮ ದೇವಿ ದೇವಸ್ಥಾನದ ದ್ವಿತೀಯ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಸಚಿವ ವಿ.ಸೋಮಣ್ಣ ಉದ್ಘಾಟಿಸುವರು.ಕೋಮಲಾ ಪೋತರಾಜ್ ಅವರ `ಭಕ್ತಿಗೀತೆಗಳ ಧ್ವನಿಸುರುಳಿ~ಯನ್ನು ಸಂಸದ ಪಿ.ಸಿ.ಮೋಹನ್ ಬಿಡುಗಡೆ ಮಾಡಲಿದ್ದು, ಕಾರ್ಯಕ್ರಮದಲ್ಲಿ ಶಾಸಕರಾದ ಬೇಳೂರು ಗೋಪಾಲಕೃಷ್ಣ, ಜೆ.ಡಿ.ನಾಯ್ಕ, ಕೋಟಾ ಶ್ರೀನಿವಾಸ ಪೂಜಾರಿ, ಮಾಲೀಕಯ್ಯ ಗುತ್ತೇದಾರ್, ಜೆ.ನರಸಿಂಹಸ್ವಾಮಿ ಮತ್ತಿತರರು ಆಗಮಿಸುವರು.ಕಾರ್ಯಕ್ರಮದಲ್ಲಿ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಶಾಸಕ ಹರತಾಳ ಹಾಲಪ್ಪ, ಮಹಾದ್ವಾರದ ನಿರ್ಮಾತೃ ವಿ.ರಾಮಕೃಷ್ಣ ಹಾಗೂ ವಿಶ್ವಕಪ್ ವಿಜೇತ ಭಾರತ ಮಹಿಳಾ ಕಬಡ್ಡಿ ತಂಡದ ನಾಯಕಿ ಮಮತಾ ಪೂಜಾರಿ ಅವರನ್ನು ಸನ್ಮಾನಿಸಲಾಗುವುದು. ಸಾಮೂಹಿಕ ವಿವಾಹದಲ್ಲಿ ಬೇರೆ ಜನಾಂಗದವರೂ ಭಾಗವಹಿಸಬಹುದಾಗಿದ್ದು, ಸಾಮೂಹಿಕ ವಿವಾಹದಲ್ಲಿ ವಧು-ವರರಿಗೆ ಬಟ್ಟೆ, ಮಾಂಗಲ್ಯ, ಕಾಲುಂಗುರಗಳನ್ನು ಉಚಿತವಾಗಿ ನೀಡಲಾಗುವುದು.ವಧು-ವರರು ಅರ್ಜಿಯನ್ನು ಸುಕ್ಷೇತ್ರ ಸೋಲೂರು, ಈಡಿಗ ಭವನ (ದೂರವಾಣಿ- 080 27709990); ತುಮಕೂರಿನ ಯಲ್ಲಮ್ಮ ಪುಟ್ಟಪ್ಪ ವಿದ್ಯಾರ್ಥಿ ನಿಲಯ (ದೂ- 9845604554), ಮೈಸೂರು ಮತ್ತು ಚಾಮರಾಜನಗರ ಆರ್ಯ ಈಡಿಗರ ಸಂಘ (0821 2331262)ವನ್ನು ಸಂಪರ್ಕಿಸಲು ಕೋರಲಾಗಿದೆ.

 

ಭರ್ತಿ ಮಾಡಿದ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಏಪ್ರಿಲ್ 9ರೊಳಗೆ ಸಲ್ಲಿಸುವಂತೆ ಕೋರಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಆರ್ಯ ಈಡಿಗ ಸಂಘದ ಜಂಟಿ ಕಾರ್ಯದರ್ಶಿ ವಾಸನ್, ಖಜಾಂಚಿ ಹರಿಹರನ್ ಮತ್ತಿತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.