ಮಂಗಳವಾರ, ಜನವರಿ 21, 2020
29 °C
ಟೆನಿಸ್: ಎಐಟಿಎ ಚಾಂಪಿಯನ್ ಸರಣಿ

ಸೋಹಾ, ಭರತ್‌ಗೆ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೋಹಾ, ಭರತ್‌ಗೆ ಪ್ರಶಸ್ತಿ

ಬೆಂಗಳೂರು: ಭರತ್ ನಿಶೋಕ್ ಕುಮಾರನ್ ಹಾಗೂ ಎಸ್. ಸೋಹಾ ಇಲ್ಲಿನ ಟಾಪ್ ಸ್ಪಿನ್ ಅಕಾಡೆಮಿಯಲ್ಲಿ  ಮುಕ್ತಾಯಗೊಂಡ 16 ವರ್ಷದೊಳಗಿನವರ ಎಐಟಿಎ ಚಾಂಪಿಯನ್‌ಷಿಪ್ ಸರಣಿ ಟೆನಿಸ್‌ ಟೂರ್ನಿಯ ಸಿಂಗಲ್ಸ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿದರು.ಬಾಲಕರ ವಿಭಾಗದ ಪ್ರಶಸ್ತಿ ಘಟ್ಟದ ಹಣಾಹಣಿಯಲ್ಲಿ ಭರತ್ 7–6, 6–2ರಿಂದ ರಿಷಿ ರೆಡ್ಡಿ ಅವರನ್ನು ಮಣಿಸಿದರು. ಬಾಲಕಿಯರ ವಿಭಾಗದ ಸಿಂಗಲ್ಸ್ ಫೈನಲ್‌ನಲ್ಲಿ  ಸೋಹಾ 2–6, 6–3, 6–2 ರಲ್ಲಿ ರಶ್ಮಿಕಾ ರಾಜನ್ ಎದುರು ಗೆದ್ದರು.ಪುರುಷರ ಡಬಲ್ಸ್ ವಿಭಾಗದ ಫೈನಲ್‌ನಲ್ಲಿ ಪ್ರಣಶ್ ಬಾಬು ಮತ್ತು ಆದಿಲ್ ಕಲ್ಯಾಣಪುರ್ ಜೋಡಿ 6–4, 6–3 ರಲ್ಲಿ ಸಿದ್ದಾರ್ಥ್ ಎನ್‌. ಗೌಡ ಮತ್ತು ರಾಹುಲ್ ಶಂಕರ್ ಜೋಡಿಯನ್ನು ಪರಾಭವಗೊಳಿಸಿ ಚಾಂಪಿಯನ್ ಆದರು.ಬಾಲಕಿಯರ ವಿಭಾಗದ ಡಬಲ್ಸ್ ಫೈನಲ್ ಪಂದ್ಯದಲ್ಲಿ ನಿಶಾ ಶೆಣೈ ಮತ್ತು ರಶ್ಮಿಕಾ  ರಾಜನ್ ಜೋಡಿ 6–2, 7–6 ರಲ್ಲಿ ಶಿವಾನಿ ಮಂಜಣ್ಣ ಮತ್ತು ಎಸ್. ಸೋಹಾ ಎದುರು ಜಯ ಸಾಧಿಸಿ ಪ್ರಶಸ್ತಿ ಪಡೆದರು.

ಪ್ರತಿಕ್ರಿಯಿಸಿ (+)