ಮೈಸೂರು:  ಸುಂದರ ವಾತಾವರಣ, ಸಜ್ಜನರು ನೆಲೆಸಿರುವ ಈ ಅರಸರ ಊರಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ, ವಾಹನ-ಸಂಚಾರ ದಟ್ಟಣೆಯ ಕಾಟವಿಲ್ಲ ಅಧಿಕಾರಶಾಹಿಗಳ ಸಹಕಾರ ಪಡೆದು ಸೂಕ್ತ ಸೌಲಭ್ಯಗಳನ್ನು ಒದಗಿಸಿದರೆ ಇಲ್ಲಿ ಐಟಿ ಕಂಪೆನಿಗಳು ಹೆಚ್ಚು ಹೆಚ್ಚು ಸ್ಥಾಪನೆಯಾಗಲಿವೆ ಎಂದು ಎನ್.ಆರ್. ನಾರಾಯಣ ಮೂರ್ತಿ ಹೇಳಿದರು.

ನಾಸ್ ಕಾಮ್ (ಮೈಸೂರು 2.0 ಗ್ಲೋಬಲ್ ಐಟಿ-ಬಿಪಿಒ ಹಬ್) ವತಿಯಿಂದ ನಗರದ ಸೈಲೆಂಟ್ ಶೋರ್ಸ್ ರೆಸಾರ್ಟ್ನಲ್ಲಿ ಶನಿವಾರ ಏರ್ಪಡಿಸಿದ್ದ ಮಾಹಿತಿ ತಂತ್ರಜ್ಞಾನ ಸಮ್ಮೇಳನ ಮತ್ತು ಪ್ರದಶರ್ನದಲ್ಲಿ ಅವರು ಮಾತನಾಡಿದರು.

ಈ ನಗರದಲ್ಲಿ ಯೋಜಿಸಿ- ಯೋಚಿಸಿ ಅಗತ್ಯ ಸೌಕರ್ಯಗಳನ್ನು ಕಲ್ಪಿಸಿದರೆ ಇದು ಐಟಿ ದೈತ್ಯ ನಗರಿಯಾಗಲಿದೆ. ಇಲ್ಲಿರುವ ಇನ್ಫೋಸಿಸ್ ಸಂಸ್ಥೆಯಲ್ಲಿ ಪ್ರತಿ 32 ವಾರಗಳಿಗೊಮ್ಮೆ 10300 ಎಂಜಿನಿಯರಿಂಗ್ ಪದವೀಧರರಿಗೆ ತರಬೇತಿ ನೀಡಲಾಗುತ್ತಿದೆ. ಕಾರ್ಪೋ ರೇಟ್ ತರಬೇತಿ ಸಂಸ್ಥೆ, ನಾಯಕತ್ವ ಸಂಸ್ಥೆ, ಎಂಜಿನಿಯರಿಂಗ್ ಕಾಲೇಜುಗಳು ಎಲ್ಲವೂ ಇಲ್ಲಿವೆ. ಇವೆಲ್ಲವೂ ಸಾಫ್ಟ್ವೇರ್ ಕಂಪೆನಿಗಳಿಗೆ ವರದಾನವಾ ಗಲಿವೆ ಎಂದರು.

ಇಂದಿನ ಬ್ಯುಸಿ ಯುಗದಲ್ಲಿ ಅಗತ್ಯ ಸೌಕರ್ಯಗಳಿಲ್ಲದಿದ್ದರೆ ಉದ್ದಿಮೆದಾ ರರು ಉದ್ದಿಮೆ ಸ್ಥಾಪಿಸಲು ಮುಂದೆ ಬರುವುದಿಲ್ಲ. ಚೀನಾದ ಶಾಂಘೈ ನಗರದಲ್ಲಿ ಗುಣಮಟ್ಟದ ರಸ್ತೆಗಳು, ಸಮರ್ಪಕ ವಿದ್ಯುತ್ ಪೂರೈಕೆ, ವಸತಿ ವ್ಯವಸ್ಥೆ ಇತ್ಯಾದಿ ಸೌಕರ್ಯಗಳನ್ನು ಕಲ್ಪಿಸಿದ ನಂತರ ಐಟಿ ಪಾರ್ಕ್ ಸ್ಥಾಪಿಸಲು ಕಂಪೆನಿಗಳನ್ನು ಆಹ್ವಾನಿಸ ಲಾಯಿತು ಎಂದು ಉದಾಹರಣೆ ನೀಡಿದರು.

ಬೆಂಗಳೂರು ಎಂಬ ಬೃಹದಾಕಾರದ ಮರದ ಕರಿನೆರಳು ಮೈಸೂರಿನ ಐಟಿ ಅಭಿವೃದ್ಧಿಗೆ ತಡೆಯಾಗಿದೆ. ಈ ಎರಡು ನಗರಗಳ ನಡುವಿನ ಸಾರಿಗೆ ವ್ಯವಸ್ಥೆಗೆ ಪ್ರಾಮುಖ್ಯತೆ ನೀಡಿ ಪ್ರಯಾಣದ ಅನುಭವ, ಸಮಯ ಹಿತಕರವಾಗಿ ರುವಂತೆ ನೋಡಿಕೊಂಡರೆ ಅದು ಸಾಂಸ್ಕೃತಿಕ ನಗರಿಯಲ್ಲಿ ಐಟಿ ಕ್ಷೇತ್ರದ ವಿಸ್ತರಣೆಗೆ ರಹದಾರಿಯಾಗಲಿದೆ.

ಮೈಸೂರಲ್ಲಿ ವಿಮಾನ ನಿಲ್ದಾಣ ಆರಂಭಿಸಲು 11 ವರ್ಷ ಬೇಕಾಯಿತು. ಇಲ್ಲಿಂದ ಒಂದು ವಿಮಾನ ಮಾತ್ರ ಸಂಚರಿಸುತ್ತಿದೆ. ಈ ಎರಡು ನಗರಗಳ ನಡುವೆ ಪ್ರತಿ ಗಂಟೆಗೊಂದು ಹೆಲಿಕಾಪ್ಟರ್ ಸಂಚರಿಸುವಂತಾಗಬೇಕು ಎಂದು ತಿಳಿಸಿದರು.

ಇಂಥಹ ಸಮ್ಮೇಳನಗಳಲ್ಲಿ ಸುಮಾರು 200ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪೆನಿಗಳ ಮುಖ್ಯ ಕಾರ್ಯನಿರ್ವ ಣಾಧಿಕಾರಿ ಗಳು (ಸಿಇಒ) ಪಾಲ್ಗೊಳ್ಳುವಂತೆ ಮಾಡಬೇಕು. ಅಂತರಾಷ್ಟ್ರೀಯ ಗುಣ ಮಟ್ಟದ ಶಾಲೆಗಳನ್ನು ತೆರೆಯಬೇಕು. ಆಗ ಸಾಫ್ಟ್ವೇರ್ ಸಿಬ್ಬಂದಿಯನ್ನು ಇಲ್ಲಿಗೆ ವರ್ಗಾವಣೆ ಮಾಡಿದಾಗ ಬರಲು ಹಿಂದೇಟು ಹಾಕುವುದಿಲ್ಲ. ಪೋಷಕರು ಮಕ್ಕಳ ಶಿಕ್ಷಣದ ಬಗ್ಗೆ ಅತೀವ ಕಾಳಜಿ ಹೊಂದಿರುತ್ತಾರೆ ಎಂದು ಹೇಳಿದರು.

ಸಮ್ಮೇಳನಲ್ಲಿ ಐಟಿ ವಲಯದ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ತಜ್ಞರು ವಿಷಯಗಳನ್ನು ಮಂಡಿಸಿದ್ದರು. ನಾಸ್ ಕಾಮ್ ಉಪಾಧ್ಯಕ್ಷ ಕೆ.ಎಸ್.ವಿಶ್ವನಾಥ್ ಸ್ವಾಗತಿಸಿದರು. ಜೆಎಸ್ಎಸ್ನ ಪ್ರೊ.ಎಂ.ಎಚ್.ಧನಂಜಯ ಮಾತನಾಡಿ ದರು. ವಿವಿಧೆಡೆಗಳಿಂದ ಪ್ರತಿನಿಧಿಗಳು ಆಗಮಿಸಿದ್ದರು.

ಮೈಸೂರಿನಲ್ಲಿ ಮನರಂಜನೆಗೆ ಕೊರತೆ ಇಲ್ಲ: ನಗರದಲ್ಲಿ ಮನರಂಜನಗೆ ಸೌಕರ್ಯಗಳನ್ನು ಕಲ್ಪಿಸಬೇಕು ಎಂದು ಪ್ರತಿನಿಧಯೊಬ್ಬರು ಕೇಳಿದಾಗ, ಮೈಸೂರಿನಲ್ಲಿ ಐತಿಹಾಸಿಕ ತಾಣ ಮನರಂಜನೆಗೆ ಇಲ್ಲಿ ಕೊರತೆ ಇಲ್ಲ. ಕಾಲೇಜು ದಿನಗಳಲ್ಲಿ ಕ್ಲಾಸ್ ಬಂಕ್ ಮಾಡಿ 20 ಪೈಸೆ ಖರ್ಚು ಮಾಡಿ ಕೊಂಡು ಗಣೇಶ ಚಿತ್ರಮಂದಿರಕ್ಕೆ ಸಿನಿಮಾ ನೋಡಲು ಹೋಗುತ್ತಿದ್ದೆ ಎಂದು ಎನ್ಐಇ ಕಾಲೇಜಿನಲ್ಲಿ ಓದುತ್ತಿದ್ದ ದಿನ ನೆನಪಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.