ಬೆಳಗಾವಿ: ಉಡುಪಿಯ ಸೌಜನ್ಯ ಶೆಟ್ಟಿ ಅವರು ‘ಮಿಸ್ಟರ್ ಸತೀಶ ಶುಗರ್ಸ್ ಕ್ಲಾಸಿಕ್–- 2013’ ರಾಜ್ಯ ಮಟ್ಟದ ಆರನೇ ದೇಹದಾರ್ಢ್ಯ ಚಾಂಪಿಯನ್ಷಿಪ್ನಲ್ಲಿ ‘ಚಾಂಪಿಯನ್ ಆಫ್ ಚಾಂಪಿಯನ್ಸ್’ ಗೌರವ ತಮ್ಮದಾಗಿಸಿಕೊಂಡರು.

ಸತೀಶ ಶುಗರ್ಸ್ ಹಾಗೂ ಭಾರತೀಯ ದೇಹ ದಾರ್ಢ್ಯ ಸಂಸ್ಥೆ ಆಶ್ರಯದಲ್ಲಿ ನಗರದಲ್ಲಿ ಶನಿವಾರ ರಾತ್ರಿ ನಡೆದ ಸ್ಪರ್ಧೆಯಲ್ಲಿ ಸೌಜನ್ಯ ಶೆಟ್ಟಿ ದೇಹದ ಮೈಕಟ್ಟು ಹಾಗೂ ಸ್ನಾಯುಗಳ ಬಲ ಪ್ರದರ್ಶನದಲ್ಲಿ ಇತರೆ 6 ಸ್ಪರ್ಧಾಳುಗಳನ್ನು ಹಿಂದಿಕ್ಕಿ ‘ಚಾಂಪಿಯನ್ ಆಫ್ ಚಾಂಪಿಯನ್ಸ್’ ಪಟ್ಟದೊಂದಿಗೆ ₨ 1,55,555 ನಗದು ಬಹುಮಾನ ಜೇಬಿಗಿಳಿಸಿಕೊಂಡರು.

ಬೆಂಗಳೂರಿನ ಪಳನಿ, ಬೆಳಗಾವಿಯ ವಿಜಯಗೌಡ, ಪ್ರೀತಮ್ ಚೌಗಲೆ, ಉಡುಪಿಯ ಆನಂದ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ರಮೇಶ ಅಂತಿಮ ಸ್ಪರ್ಧೆಯಲ್ಲಿದ್ದರು. ಇದಕ್ಕೂ ಮುನ್ನ ನಡೆದ ಉತ್ತಮ ಮೈಕಟ್ಟು ಮತ್ತು ಅಂಗಾಂಗಗಳನ್ನು ಹೊಂದಿರುವವರ 75 ಕೆ.ಜಿ. ವಿಭಾಗದಲ್ಲಿ ಸೌಜನ್ಯ ಪ್ರಥಮ ಸ್ಥಾನದೊಂದಿಗೆ ₨ 15,000 ನಗದು ಬಹುಮಾನ ಪಡೆದಿದ್ದರು.ಸ್ಥಳೀಯ ಸ್ಪರ್ಧಿ ವಿನೋದ ಮೇತ್ರಿ ಒಂದು ನಿಮಿಷದ ಸಂಗೀತದಲ್ಲಿ ಉತ್ತಮ ನಡೆ ಹಾಗೂ ದೇಹದ ಕಸರ ತ್ತು ಪ್ರದರ್ಶಿಸಿ ‘ಬೆಸ್ಟ್

ಪೋಸರ್’ ಪ್ರಶಸ್ತಿ ಗಳಿಸಿದರು.
ಫಲಿತಾಂಶ: 55 ಕೆಜಿ ವಿಭಾಗ: ಪಳನಿ.ಕೆ (ಬೆಂಗಳೂರು)–1, ವಿವೇಕ ಪವಾರ (ಬೆಳಗಾವಿ)–2, ಉಮೇಶ ಗಂಗಾಣಿ (ಬೆಳಗಾವಿ)–3, ಪ್ರತಾಪ ಕಾಲಕುಂದ್ರಿಕರ (ಬೆಳಗಾವಿ)–4, ಸಂತೋಷ (ದಕ್ಷಿಣ ಕನ್ನಡ)–5.
60 ಕೆಜಿ ವಿಭಾಗ: ವಿಜಯಗೌಡ (ಬೆಳಗಾವಿ)–1, ಪುರುಷೋತ್ತಮ (ದಕ್ಷಿಣ ಕನ್ನಡ)–2, ಕಿಶೋರ ಪಾಟೀಲ (ಬೆಳಗಾವಿ)–3, ಪೀಟರ್ ನರೋನಾ (ಉತ್ತರ ಕನ್ನಡ)–4, ಮಹಾಂತೇಶ ಗುರವ (ಬೆಳಗಾವಿ)–5.

65 ಕೆಜಿ ವಿಭಾಗ: ಆನಂದ ಸುವರ್ಣ (ಉಡುಪಿ)–1, ವಿನೋದ ಮೇತ್ರಿ (ಬೆಳಗಾವಿ)–2, ರಾಘವೇಂದ್ರ (ಉಡುಪಿ)–3, ಪ್ರಕಾಶ ಜಾಧವ (ಧಾರವಾಡ)–4, ಪ್ರವೀಣ ಕಣಬರಕರ (ಬೆಳಗಾವಿ)–5.
70 ಕೆಜಿ ವಿಭಾಗ: ರಮೇಶ.ಕೆ.ಆರ್ (ದಕ್ಷಿಣ ಕನ್ನಡ)–1, ಪ್ರಕಾಶ ಪೂಜಾರಿ (ಧಾರವಾಡ)–2, ನಾಗರಾಜ ಕೋಲ್ಕಾರ್ (ಬೆಳಗಾವಿ)–3, ರಕ್ಷಿತ ಕೋಟಿಯಾನ್ (ಉಡುಪಿ)–4, ಅಮರ ಪಾಟೀಲ (ಬೆಳಗಾವಿ)–5.
75 ಕೆಜಿ ವಿಭಾಗ: ಸೌಜನ್ಯ ಶೆಟ್ಟಿ (ಉಡುಪಿ)–1, ಕುಮಾರ.ಕೆ (ಬೆಂಗಳೂರು)–2, ನಾಗೇಂದ್ರ ಮಡಿವಾಳ (ಬೆಳಗಾವಿ)–3, ನಾಮಧರ ಘಡಿ (ಬೆಳಗಾವಿ)–4, ರಿಯಾಜ್.ಕೆ (ಧಾರವಾಡ)–5.

80 ಕೆಜಿ ವಿಭಾಗ: ನಿತ್ಯಾನಂದ ಕೋಟ್ಯನ್ (ಉಡುಪಿ)–1, ಸಿದ್ದು ದೇಶನೂರ (ಬೆಳಗಾವಿ)–2, ಅನಿಲ್ (ಉಡುಪಿ)–3, ಮನೀಶ ಮಂಜೇಶ್ವರ (ಉಡುಪಿ)–4, ವರ್ಗೀಸ್.ಜೆ (ಮೈಸೂರು)–5.
80 ಕೆಜಿ ಮೇಲ್ಪಟ್ಟವರ ವಿಭಾಗ: ಪ್ರೀತಮ್ ಚೌಗಲೆ (ಬೆಳಗಾವಿ)–1, ಮಂಜುನಾಥ ಎಸ್ (ದಾವಣಗೆರೆ)–2, ಸಯ್ಯದ್ ಇಕ್ಬಾಲ್ (ದಾವಣಗೆರೆ)–3, ಅನಂತ ಪಾಟೀಲ (ಧಾರವಾಡ)–4, ಪ್ರಣಯ ಶೆಟ್ಟಿ (ಬೆಳಗಾವಿ)–5.
ಚಾಂಪಿಯನ್ ಆಫ್ ಚಾಂಪಿಯನ್ಸ್: ಸೌಜನ್ಯ ಶೆಟ್ಟಿ (ಉಡುಪಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.