ರಿಯಾದ್ (ಐಎಎನ್ಎಸ್): ಸೌದಿ ಅರೇಬಿಯಾವು ಕಡಿಮೆ ವೇತನದ ಆಧಾರದ ಮೇಲೆ ಭಾರತೀಯ ಮಹಿಳಾ ಮನೆಗೆಲಸದವರನ್ನು ನೇಮಿಸುವ ಪ್ರಕ್ರಿಯೆಯನ್ನು ಮರು ಆರಂಭಿಸಿದೆ ಎಂದು ಇಲ್ಲಿನ ಅಲ್ ಹಯಾತ್ ಪತ್ರಿಕೆಯ ಸುದ್ದಿಯೊಂದನ್ನು ಉಲ್ಲೇಖಿಸಿ ಕ್ಸಿನ್ಹುವಾ ನಿಯತಕಾಲಿಕೆ ಬುಧವಾರ ವರದಿ ಮಾಡಿದೆ.

ಸೌದಿಯ ಕಾರ್ಮಿಕ ಸಚಿವಾಲಯದ ಕಾರ್ಯದರ್ಶಿ ಅಹ್ಮದ್ ಅಲ್ ಫಹೀದ್ ಅವರ ಪ್ರಕಾರ, `ಎರಡು ದೇಶಗಳ ನಡುವೆ ಈಚೆಗೆ ಏರ್ಪಟ್ಟ ಒಪ್ಪಂದದಿಂದಾಗಿ ಈ ಪ್ರಕ್ರಿಯೆಯನ್ನು ಮರು ಆರಂಭಿಸಲಾಗಿದೆ'.

`ಮಹಿಳಾ ಮನೆಗೆಲಸದವರ ನೇಮಕ ಕುರಿತು ಭಾರತ ಸರ್ಕಾರ ಷರತ್ತುಗಳನ್ನು ವಿಧಿಸಿದ್ದರಿಂದ ಈ ಪ್ರಕ್ರಿಯೆಯನ್ನು ಕೆಲ ವರ್ಷಗಳಿಂದ ತಡೆಹಿಡಿಯಲಾಗಿತ್ತು. ಆದರೆ ಈ ಪ್ರಕ್ರಿಯೆಗೆ ಶೀಘ್ರವೇ ಚಾಲನೆ ದೊರೆಯಲಿದೆ' ಎಂದೂ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.