ಶುಕ್ರವಾರ, ಜನವರಿ 24, 2020
28 °C

ಸೌರಾಷ್ಟ್ರ ಕರಕುಶಲ ವಸ್ತು ಪ್ರದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೌರಾಷ್ಟ್ರ ಆರ್ಟ್ಸ್ ಅಂಡ್ ಕ್ರಾಫ್ಟ್ಸ್ ಸಂಸ್ಥೆಯು ಇದೇ ಜನವರಿ 29ರವರೆಗೆ ಜವಳಿ ಮತ್ತು ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟವನ್ನು ಹಮ್ಮಿಕೊಂಡಿದೆ.

ಅತ್ಯುನ್ನತ ಮಟ್ಟದ ಜವಳಿ, ಕೈಮಗ್ಗ ಮತ್ತು ಕರಕುಶಲ ವಸ್ತುಗಳು ಇಲ್ಲಿ ಲಭ್ಯ. ಹಲವು ರಾಜ್ಯಗಳ ಉಡುಪುಗಳು, ಡ್ರೆಸ್ ಮೆಟೀರಿಯಲ್,   ಚಿಲ್ಕನ್, ಟೈ, ಡೈ ಮತ್ತು ಕಾಂತಾ ವಿನ್ಯಾಸದ ಸೀರೆಗಳು, ಕಾಟನ್ ಮತ್ತು ಸಿಲ್ಕ್ ಉಡುಪುಗಳು, ಖಾದಿ ಬಟ್ಟೆ, ಕುರ್ತಾ, ಶಾಲ್, ಕಾರ್ಪೆಟ್, ಬೆಡ್ ಸ್ಪ್ರೆಡ್ ಹೀಗೆ ಎಲ್ಲವೂ ಒಂದೆಡೆಯೇ ಸಿಗುತ್ತವೆ.

ಅಷ್ಟೇ ಅಲ್ಲ, ಮನೆಯ ಅಲಂಕಾರಕ್ಕೆ ಬಳಸುವ ಅನೇಕ ವಸ್ತುಗಳು ಇಲ್ಲಿ ದೊರೆಯುತ್ತದೆ. ಕಂಚಿನ ಪ್ರತಿಮೆಗಳು, ರಾಜಸ್ತಾನದ ಮರದ ಪೀಠೋಪಕರಣಗಳು, ತಾಂಜಾವೂರು, ಮಧುಬನಿ ಪೇಂಟಿಂಗ್, ಟೆರ‌್ರಕೋಟಾ ವಸ್ತುಗಳು ಇಲ್ಲಿವೆ.

ಜೊತೆಗೆ ಅಲಂಕಾರಿಕ ಮತ್ತು ಸಾಂಪ್ರದಾಯಿಕ ಆಭರಣಗಳು, ಸೋಹನ್‌ಪುರದ ಮರದ ಆಟಿಕೆಗಳು, ಚನ್ನಪಟ್ಟಣದ ಮರದ ಗೊಂಬೆಗಳೂ ಉಂಟು.

ಪ್ರದರ್ಶನ ನಡೆಯುವ ಸ್ಥಳ: ಸಫೀನಾ ಪ್ಲಾಜಾ, ನಂ 84/85, ಇನ್‌ಫೆಂಟ್ರಿ ರಸ್ತೆ. ಪ್ರದರ್ಶನ ಜನವರಿ 29ರವರೆಗೆ ನಡೆಯಲಿದೆ.

ಪ್ರತಿಕ್ರಿಯಿಸಿ (+)