ಸೌಲಭ್ಯ ಕಾಣದ ಕುರಟ್ಟಿ ಹೊಸೂರು

ಸೋಮವಾರ, ಮೇ 27, 2019
33 °C

ಸೌಲಭ್ಯ ಕಾಣದ ಕುರಟ್ಟಿ ಹೊಸೂರು

Published:
Updated:

ರಾಮಾಪುರ: ಮೂಲ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಆರು ತಿಂಗಳ ಹಿಂದೆ ಗ್ರಾಮ ಪಂಚಾಯಿತಿ ಚುನಾವಣೆ ಬಹಿಷ್ಕರಿಸಿದ್ದ ಕುರಟ್ಟಿ ಹೊಸೂರು ಗ್ರಾಮದ ಸ್ಥಿತಿ ಇಂದಿಗೂ ಹಾಗೆಯೇ ಇದೆ.ಈಗ ಉಪ ಚುನಾವಣೆಗೆ ಗ್ರಾಮ ಸಜ್ಜಾಗಿದೆ. ಅನೇಕ ಅಭ್ಯರ್ಥಿಗಳು ಕಣಕ್ಕೆ ಧುಮುಕಿದ್ದಾರೆ. ಪ್ರಮುಖ ರಾಜಕೀಯ ಪಕ್ಷಗಳ ಬೆಂಬಲಿಗರ ಕಣದಲ್ಲಿದ್ದು, ಪ್ರಚಾರದ ಕಾವು ಏರತೊಡಗಿದೆ. ಆದರೆ ದಶಕಗಳಿಂದ ಗ್ರಾಮದ ಸಮಸ್ಯೆಗಳ ಬಗ್ಗೆ ಯಾವ ಜನ ನಾಯಕರೂ ತಲೆ ಕೆಡಿಸಿಕೊಂಡಿಲ್ಲ.ಕೊಳ್ಳೇಗಾಲ ತಾಲ್ಲೂಕಿನ ಕುರಟ್ಟಿ ಹೊಸೂರು ಗ್ರಾ.ಪಂ. ವ್ಯಾಪ್ತಿಯಲ್ಲಿ ಹಲವು ಮೂಲಭೂತ ಸಮಸ್ಯೆಗಳಿವೆ. ಅವು ಈಡೇರಿಸುವಂತೆ ಆರು ತಿಂಗಳ ಹಿಂದೆಯೇ ಗ್ರಾಮಸ್ಥರು ಒತ್ತಾಯಿಸಿದ್ದರು. ಈ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಕಾಡಂಚಿನ ಗ್ರಾಮಗಳಾದ ಕುರಟ್ಟಿ ಹೊಸೂರು, ಶೆಟ್ಟಳ್ಳಿ, ಭದ್ರಯ್ಯನಹಳ್ಳಿ, ಚೆನ್ನೂರು, ಅರಬಗೆರೆ 75, ಹೊಸಳ್ಳಿ, ದಂಟಳ್ಳಿ, ಚಂಗಡಿ, ಮುನಿಶೆಟ್ಟಿ ದೊಡ್ಡಿ, ವಿ.ಎಸ್. ದೊಡಿ ಇತ್ಯಾದಿ ಹಳ್ಳಿಗಳು ಒಳಪಡುತ್ತವೆ.ಈ ಎಲ್ಲ ಗ್ರಾಮಗಳಲ್ಲಿ ಕುಡಿಯುವ ನೀರು, ಚರಂಡಿ, ಶಾಲೆಗೆ ತಡೆಗೋಡೆ ಮತ್ತು ಗೇಟ್, ರಸ್ತೆ ಡಾಂಬರೀಕರಣ, ಹೆರಿಗೆ ಆಸ್ಪತ್ರೆ, ಪಶು ಚಿಕಿತ್ಸಾಲಯ, ಬಡವರಿಗೆ ವಸತಿ, ವಸತಿ ನಿಲಯದ ಕಟ್ಟಡ ಕೊಟರೆ ಮುಂತಾದ ಸಮಸ್ಯೆಗಳನ್ನು ಈ ಗ್ರಾಮಗಳು ಎದುರಿಸುತ್ತಿವೆ.ಈ ಸಮಸ್ಯೆಗಳಿಗೆ ಮುಕ್ತಿ ನೀಡಬೇಕು. ಇಲ್ಲವಾದರೆ ಹೋರಾಟ ನಡೆಸಬೇಕಾಗುತ್ತದೆ ಎಂದು ಗ್ರಾಮಸ್ಥರ ಎಚ್ಚರಿಕೆ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry