ಟೊರಾಂಟೊ (ಪಿಟಿಐ): ಭಾರತದ ದೀಪಿಕಾ ಪಳ್ಳಿಕಲ್ ಬುಧವಾರ ಇಲ್ಲಿ ಆರಂಭವಾದ ಗ್ರಾನೇಟ್ ಓಪನ್ ಸ್ಕ್ವಾಷ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ್ದಾರೆ.

ಮಹಿಳೆಯರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ದೀಪಿಕಾ 11–4, 9–11, 11–2, 11–7ರಲ್ಲಿ ಈಜಿಪ್ಟ್ನ ನೂರನ್ ಎಲ್ ಟರ್ಕಿ ಅವರನ್ನು ಮಣಿಸಿದರು.

ವಿಶ್ವ ರ್ಯಾಂಕಿಂಗ್ನಲ್ಲಿ 61ನೇ ಸ್ಥಾನದಲ್ಲಿರುವ ಈಜಿಪ್ಟ್ನ ಆಟಗಾರ್ತಿ ದೀಪಿಕಾಗೆ ಕಠಿಣ ಪೈಪೋಟಿ ನೀಡಿದರು.

ಈಜಿಪ್ಟ್ನ ನೂರನ್ ವಿಭಿನ್ನ ತಂತ್ರ ದೊಂದಿಗೆ ಆಡಿದರು. ಆದರೆ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ 17ನೇ ಸ್ಥಾನದಲ್ಲಿ ರುವ ದೀಪಿಕಾ ಚೇತರಿಸಿಕೊಂಡು ತಿರು ಗೇಟು ನೀಡುವಲ್ಲಿ ಯಶಸ್ವಿಯಾದರು.

ಆದರೆ ಎರಡನೇ ಸೆಟ್ನ ಆರಂಭದಲ್ಲೇ ಎದುರಾಳಿಗೆ ಪಾಯಿಂಟ್ಸ್ ಬಿಟ್ಟುಕೊಟ್ಟು ಸೋಲು ಅನುಭವಿಸಿದರು. ಆದರೆ ನಿರ್ಣಾಯಕ ಸೆಟ್ನಲ್ಲಿ ಎಂದಿನ ಆಟದ ಮೂಲಕ ಗಮನಸೆಳೆದ ದೀಪಿಕಾ ಪಂದ್ಯದ ಮೇಲೆ ಸಂಪೂರ್ಣವಾಗಿ ಹಿಡಿತ ಸಾಧಿಸಿ ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.