ಮಂಗಳವಾರ, ಮೇ 11, 2021
24 °C

ಸ್ಕ್ವಾಷ್: ಭಾರತದ ಸವಾಲು ಅಂತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತದ ರಾಷ್ಟ್ರೀಯ ಚಾಂಪಿಯನ್ ಸೌರವ್ ಘೋಷಾಲ್ ಮ್ಯಾಂಚೆಸ್ಟರ್‌ನಲ್ಲಿ ನಡೆಯುತ್ತಿರುವ ಬ್ರೀಟಿಷ್ ಗ್ರ್ಯಾನ್ ಪ್ರೀ ಸ್ಕ್ವಾಷ್ ಚಾಂಪಿಯನ್‌ಷಿಪ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಸೋಲು ಕಂಡರು. ಈ ಮೂಲಕ ಭಾರತದ ಸವಾಲು ಅಂತ್ಯಗೊಂಡಿತು.ಬುಧವಾರ ನಡೆದ ಪಂದ್ಯದಲ್ಲಿ ಶ್ರೇಯಾಂಕ ರಹಿತ ಆಟಗಾರ ಸೌರವ್ 4-11, 5-11, 2-11ರಲ್ಲಿ ಫ್ರಾನ್ಸ್ ನ ಗ್ರೆಗೊರಿ ಗುಲಿಟೈರ್ ಎದುರು ಸೋಲು ಅನುಭವಿಸಿದರು. ಈ ಹೋರಾಟ 47 ನಿಮಿಷಗಳ ಕಾಲ ನಡೆಯಿತು. ಈ ವರ್ಷದ ಅತಿ ದೊಡ್ಡ ಚಾಂಪಿಯನ್‌ಷಿಪ್ ಇದಾಗಿದೆ. ಇಲ್ಲಿ ವಿಶ್ವದ ಮಾಜಿ ಆರು ಅಗ್ರ ಆಟಗಾರರು ಸೇರಿದಂತೆ ಒಟ್ಟು 20 ಖ್ಯಾತನಾಮ ಸ್ಪರ್ಧಿಗಳು ಪ್ರಶಸ್ತಿಗಾಗಿ ಪೈಪೋಟಿ ನಡೆಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.