ಹಿಂದುಸ್ತಾನ್ ಯುನಿಲಿವರ್ ಮತ್ತು ಟಾಟಾ ಸಮೂಹದ ಚಿಲ್ಲರೆ ವ್ಯಾಪಾರದ ಸರಣಿ ಹೈಪರ್ ಮಾರ್ಕೆಟ್ ಸ್ಟಾರ್ ಬಜಾರ್ಜತೆಗೂಡಿ `ಇಂಡಿಯಾಸ್ ಫೇವರಿಟ್ಸ್~ ಅಭಿಯಾನ ಆರಂಭಿಸಿವೆ. ಬಡ ಮಕ್ಕಳ ಶಿಕ್ಷಣಕ್ಕೆ ನೆರವಾಗುವುದು ಇದರ ಉದ್ದೇಶ. ಜತೆಗೆ ಗ್ರಾಹಕರಿಗೂ ಅನೇಕ ಆಫರ್ಗಳು ದೊರೆಯಲಿವೆ.

ಮುಂಬೈಯಲ್ಲಿ ಆ. 29ರಂದು ಆರಂಭವಾದ ಅಭಿಯಾನ ಬೆಂಗಳೂರೂ ಸೇರಿದಂತೆ ದೇಶದ ವಿವಿಧೆಡೆಯ ಸ್ಟಾರ್ ಬಜಾರ್ಗಳಲ್ಲಿ ಸೆಪ್ಟೆಂಬರ್ 21ರ ತನಕ ನಡೆಯಲಿದೆ. ಈ ಅವಧಿಯಲ್ಲಿ ಹಿಂದುಸ್ತಾನ್ ಯುನಿಲಿವರ್ನ ಹಲವು ಉತ್ಪನ್ನಗಳ ಮೇಲೆ ಆಕರ್ಷಕ ರಿಯಾಯ್ತಿ ಪಡೆಯಬಹುದು.

ಇದಲ್ಲದೆ ಸ್ಟಾರ್ ಬಜಾರ್ ಮಳಿಗೆಯಲ್ಲಿ ವಾರಕ್ಕೊಮ್ಮೆ ನಡೆಯಲಿರುವ `ವೋಟ್ ಫಾರ್ ಇಂಡಿಯಾಸ್ ಫೇವರಿಟ್ಸ್~ ಬ್ರಾಂಡ್ ಸ್ಪರ್ಧೆಯಲ್ಲಿ ಭಾಗವಹಿಸಿ ಗ್ರಾಹಕರು ಬಹುಮಾನವನ್ನೂ ಗೆಲ್ಲಬಹುದು.

ಬೆಂಗಳೂರಿನ ಮೂರು ಮಳಿಗೆಗಳಲ್ಲಿ ನಡೆಯುವ ಮಾರಾಟದ ಶೇಕಡಾ 5ರಷ್ಟು ಮೊತ್ತವನ್ನು ಸೌಲಭ್ಯ ವಂಚಿತ ಮಕ್ಕಳ ಶಿಕ್ಷಣ, ಏಳಿಗೆಯಲ್ಲಿ ತೊಡಗಿಸಿಕೊಂಡ ಪರಿಕ್ರಮ ಸಂಸ್ಥೆಗೆ ದೇಣಿಗೆಯಾಗಿ ನೀಡಲಾಗುವುದು. ಈ ಅಭಿಯಾನದ ಮೂಲಕ ಸ್ಮೈಲ್ ಫೌಂಡೇಶನ್ ಮತ್ತು ಚೆನ್ನೈನ ತೊಳಮೈ ಸಂಸ್ಥೆಗೂ ನೆರವು ದೊರೆಯಲಿದೆ.

`ಕಳೆದ ವರ್ಷದ ಸೆಪ್ಟೆಂಬರ್ನಲ್ಲಿ ಸ್ಟಾರ್ ಬಜಾರ್ ಮತ್ತು ಹಿಂದುಸ್ತಾನ್ ಯುನಿಲಿವರ್ ಮೊದಲ ಬಾರಿಗೆ ಆರಂಭಿಸ್ದ್ದಿದ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿತ್ತು. ಹೀಗಾಗಿ ಇದನ್ನು ವಾರ್ಷಿಕ ಉತ್ಸವವಾಗಿ ನಡೆಸಲು ತೀರ್ಮಾನಿಸಲಾಯಿತು. ಸ್ಥಳೀಯ ಸ್ವಯಂ ಸೇವಾ ಸಂಸ್ಥೆಗಳನ್ನು ಬೆಂಬಲಿಸುವುದು ನಮ್ಮ ಉದ್ದೇಶ~ ಎನ್ನುತ್ತಾರೆ ಸ್ಟಾರ್ನ ಸಿಇಒ ಜಮ್ಷೆಡ್ ದಬೂ ಮತ್ತು ಯುನಿಲಿವರ್ ಸಿಇಒ ನಿತಿನ್ ಪರಾಂಜಪೆ ಹೇಳುತ್ತಾರೆ. ಜ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.