ಸೋಮವಾರ, ಜನವರಿ 20, 2020
17 °C

ಸ್ತನ ಕ್ಯಾನ್ಸರ್ ಸತ್ಯ-ಮಿಥ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತದಲ್ಲಿ ಮಹಿಳೆಯರ ಕ್ಯಾನ್ಸರ್ ಸಂಬಂಧೀ ಮರಣಗಳಲ್ಲಿ ಸ್ತನ ಕ್ಯಾನ್ಸರ್‌ಗೆ ಎರಡನೇ ಸ್ಥಾನವಿದೆ. ಆದರೂ ಬಹುತೇಕ ಸ್ತನಗಡ್ಡೆಗಳು ನಿರಪಾಯಕಾರಿಯಾಗಿರುತ್ತವೆ. ಅದೇನೇ ಇರಲಿ ಪ್ರತಿ ಗಡ್ಡೆಯನ್ನೂ ವೈದ್ಯರಿಂದ ತಪಾಸಣೆಗೆ ಒಳಪಡಿಸುವುದು ಅಗತ್ಯ.ಸ್ತನ ಕ್ಯಾನ್ಸರ್ ಬಗ್ಗೆ ಕೆಲವು ಮಿಥ್ಯೆಗಳು-

* ಪುರುಷರಿಗೆ ಸ್ತನ ಕ್ಯಾನ್ಸರ್ ಬರುವುದಿಲ್ಲ!

ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಸ್ತನ ಕ್ಯಾನ್ಸರ್ ಹೊಂದುತ್ತಾರಾದರೂ, ಪುರುಷರಲ್ಲೂ ಸ್ತನ ಕ್ಯಾನ್ಸರ್ ಬರಬಹುದು.* ಜನನ ನಿಯಂತ್ರಣ ಮಾತ್ರೆಯಿಂದ ಸ್ತನ ಕ್ಯಾನ್ಸರ್ ಬರುತ್ತದೆ!

ಜನನ ನಿಯಂತ್ರಣ ಮಾತ್ರೆಗಳಲ್ಲಿ ಸಣ್ಣ ಪ್ರಮಾಣದ ಎಸ್ಟ್ರೋಜನ್ ಇರುವುದು ನಿಜ. ಆದರೆ ಎಷ್ಟು ಸಣ್ಣ ಪ್ರಮಾಣವೆಂದರೆ, ಸ್ತನದ ಕ್ಯಾನ್ಸರ್ ಬೆಳವಣಿಗೆಯಲ್ಲಿ ಅದರ ಸಣ್ಣ ಪಾತ್ರವೂ ಇಲ್ಲ. ಆದರೂ ಈ ಬಗ್ಗೆ ನಿಮ್ಮ ವೈದ್ಯರ ಬಳಿ ಮಾತನಾಡಿ.* ಮಮ್ಮೊಗ್ರಾಮ್ಸನಿಂದ ಕ್ಯಾನ್ಸರ್ ಹರಡುತ್ತದೆ?

ಮಮ್ಮೊಗ್ರಾಮ್ಸ ವೇಳೆಗೆ ಹೊರಸೂಸುವ ವಿಕಿರಣದ ಪ್ರಮಾಣ ಅತ್ಯಂತ ಸಣ್ಣದು, ಹಾಗಾಗಿ ಅದು ಸುರಕ್ಷಿತ.* ಸ್ತನದಲ್ಲಿ ಗಡ್ಡೆ ಇದ್ದರೆ ಅದು ಖಂಡಿತ ಕ್ಯಾನ್ಸರ್!

ಸ್ತನದ ಗಡ್ಡೆಗಳಲ್ಲಿ ಬಹುತೇಕ ಕ್ಯಾನ್ಸರ್ ಗಡ್ಡೆಗಳಾಗಿರುವುದಿಲ್ಲ. ಶೇಕಡಾ 80ರಷ್ಟು ಸ್ತನದ ಗಡ್ಡೆಗಳು ಮೃದು ಸ್ವಭಾವದ್ದು. ಕೆಲವು ಗಡ್ಡೆಗಳು ಕ್ಯಾನ್ಸರ್‌ಪೂರ್ವದ ಗಡ್ಡೆಗಳೂ ಆಗಿರಬಹುದು; ಅವುಗಳಿಗೆ ಚಿಕಿತ್ಸೆಯಿದೆ. ಆದರೆ ಎಲ್ಲ ಸ್ತನದ ಗಡ್ಡೆಗಳನ್ನೂ ವಿವರವಾಗಿ ತಪಾಸಣೆಗೆ ಒಳಪಡಿಸಿ.* ಸಣ್ಣ ಗಾತ್ರದ ಸ್ತನ ಇರುವ ಮಹಿಳೆಯರಿಗೆ ಸ್ತನ ಕ್ಯಾನ್ಸರ್ ಬರುವ ಸಂಭವ ಕಡಿಮೆ!

ಸ್ತನದ ಜೀವಾಂಶಗಳ ಗಾತ್ರದ ಹಿನ್ನೆಲೆಯಲ್ಲಿ ಯಾವುದೇ ಮಹಿಳೆ ಸ್ತನದ ಕ್ಯಾನ್ಸರ್ ಸಾಧ್ಯತೆಯಿಂದ ತಪ್ಪಿಸಿಕೊಳ್ಳುವುದಿಲ್ಲ. ಸ್ತನದ ಗಾತ್ರದ ಆಧಾರದ ಮೇಲೆ ಕ್ಯಾನ್ಸರ್ ತಾರತಮ್ಯ ಮಾಡುವುದಿಲ್ಲ.* ನನ್ನ ವಂಶವಾಹಿಯಲ್ಲಿ ಇಲ್ಲದಿದ್ದರೆ ಕ್ಯಾನ್ಸರ್ ಬರುವುದಿಲ್ಲ!

ವಾಸ್ತವವಾಗಿ, ಸ್ತನ ಕ್ಯಾನ್ಸರ್ ಬಂದಿರುವವರಲ್ಲಿ ಶೇಕಡಾ 5ರಿಂದ 10 ರಷ್ಟು ಮಂದಿಗೆ ಮಾತ್ರ ವಂಶಪಾರಂಪರ‌್ಯ ಜೀವವಾಹಿನಿಯಿಂದ    ಬಂದಿರುತ್ತದೆ. ಇದರರ್ಥ- ಶೇಕಡಾ 90ರಿಂದ 95ರಷ್ಟು ಜನರಿಗೆ ಕ್ಯಾನ್ಸರ್ ಬಂದಿರುವುದು ಇತರ ಕಾರಣಗಳಿಂದ. ಅವರ ಕುಟುಂಬದಲ್ಲಿ ಯಾರಿಗಾದರೂ ಇದ್ದರೆ  ಅವರಿಗೂ ಬರುವ ಸಂಭವ ಹೆಚ್ಚು.  * ಮಮ್ಮಗ್ರಾಮ್ಸ ತುಂಬ ವೇದನೆ ಉಂಟು ಮಾಡುತ್ತದೆ!

ಅದು ತೀವ್ರ ನೋವು ತರುವಂತದ್ದಲ್ಲ; ಮೆನೊಪಾಸ್ ಪೂರ್ವದ ಸ್ಥಿತಿಯಲ್ಲಿರುವ ಮಹಿಳೆಯರು, ತಮ್ಮ ಋತುಸ್ರಾವ ಚಕ್ರದ ಮೊದಲ ಎರಡು ವಾರಗಳಲ್ಲಿ ತಪಾಸಣೆಯನ್ನು ಯೋಜಿಸಿಕೊಳ್ಳಬೇಕು.

 

ಆ ಸಂದರ್ಭದಲ್ಲಿ   ಅವರ ಸ್ತನಗಳು ಕಡಿಮೆ ಮೃದುವಾಗಿರುತ್ತವೆ. ಮಮ್ಮಗ್ರಾಮ್ಸ ನಿಮಗೆ ತುಂಬಾ ನೋವು   ಉಂಟು ಮಾಡುತ್ತದೆ ಎಂದಾದರೆ ಅದನ್ನು ನಿರ್ವಹಿಸುವ ತಂತ್ರಜ್ಞನ ಬಳಿ ಮಾತನಾಡಿ.ತಂತ್ರಜ್ಞರು ಬಳಸುವ ಒತ್ತಡದಲ್ಲಿ ಹೆಚ್ಚು ಕಡಿಮೆ ಇರುತ್ತದೆ. ನಿಮಗೆ   ನೋವಾಗುವುದಾದರೆ ಒತ್ತಡ ಕಡಿಮೆ ಮಾಡಿ ತಂತ್ರಜ್ಞ   ನೋವನ್ನೂ ಕಡಿಮೆ ಮಾಡಬಹುದು. ಹೆಚ್ಚು ಒತ್ತಡ ಬಳಸಿದಷ್ಟೂ ರೇಡಿಯಾಲಜಿಸ್ಟ್‌ನಿಗೆ ಇಮೇಜ್‌ಗಳು ಹೆಚ್ಚು ಸ್ಪಷ್ಟವಾಗಿ ಓದಲು ಸುಲಭವಾಗುತ್ತದೆ ಎನ್ನುವುದನ್ನೂ ಮರೆಯದಿರಿ.

ಹೆಚ್ಚಿನ ವಿವರಗಳಿಗೆ: ಕಿದ್ವಾಯಿ ಮೆಮೋರಿಯಲ್ ಇನ್‌ಸ್ಟಿಟ್ಯೂಟ್ ಆಫ್ ಅಂಕಾಲಜಿ.  9845923257 

 

ಪ್ರತಿಕ್ರಿಯಿಸಿ (+)