ಗುರುವಾರ , ಜನವರಿ 23, 2020
19 °C

ಸ್ತ್ರೀಶಕ್ತಿ ತರಬೇತಿ ಭವನಕ್ಕೆ ಅಡಿಗಲ್ಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: `ಮಹಿಳೆಯರಿಗೆ ವೃತ್ತಿ ಕೌಶಲ ತರಬೇತಿ, ಮಾರುಕಟ್ಟೆ ಮೊದಲಾದ ವ್ಯವಸ್ಥೆಗಳನ್ನು ಒಂದೇ ಸೂರಿನ ಅಡಿಯಲ್ಲಿ ಕಲ್ಪಿಸುವ ಸಲುವಾಗಿ ಗದುಗಿನಲ್ಲಿ ಸ್ತ್ರೀಶಕ್ತಿ ಭವನ ತರಬೇತಿ ಭವನವನ್ನು ನಿರ್ಮಾಣ ಮಾಡಲಾಗುತ್ತಿದೆ~ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಸಿ.ಸಿ. ಪಾಟೀಲ ತಿಳಿಸಿದರು.ನಗರದ ಹಾತಲಗೇರಿ ರಸ್ತೆ ಸಮೀಪ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಸ್ತ್ರೀಶಕ್ತಿ ಯೋಜನೆಯಡಿ ಸ್ವ-ಸಹಾಯ ಗುಂಪುಗಳ ಸದಸ್ಯರು ಹಾಗೂ ಗೊಂಚಲು ಪ್ರತಿನಿಧಿಗಳ ಪ್ರತಿನಿಧಿಗಳ ತರಬೇತಿಗಾಗಿ ನಿರ್ಮಿಸಲು ಉದ್ದೇಶಿಸಿರುವ ವಿಭಾಗ ಮಟ್ಟದ ಸ್ತ್ರೀ ಶಕ್ತಿ ತರಬೇತಿ ಭವನಕ್ಕೆ ಮಂಗಳವಾರ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.  ನಗರಾಭಿವೃದ್ಧಿ ಪ್ರಾಧಿಕಾರವು ಭವನ ನಿರ್ಮಾಣಕ್ಕಾಗಿ 23 ಲಕ್ಷ ರೂಪಾಯಿ ವೆಚ್ಚದಲ್ಲಿ 25 ಗುಂಟೆ ಜಾಗ ನೀಡಿದೆ. ಇಲ್ಲಿ ಒಂದು ಕೋಟಿ ರೂಪಾಯಿ ಅನುದಾನದಲ್ಲಿ ಭವನ ನಿರ್ಮಾಣ ಗೊಳ್ಳಲಿದೆ. ನಿರ್ಮಿತಿ ಕೇಂದ್ರವು ಕಾಮಗಾರಿ ಕೈಗೆತ್ತಿಕೊಳ್ಳಲಿದೆ. ವರ್ಷಾಂತ್ಯಕ್ಕೆ ಕಟ್ಟಡ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಅವರು ತಿಳಿಸಿದರು.ಶಾಸಕ ಶ್ರೀಶೈಲಪ್ಪ ಬಿದರೂರ ಮಾತನಾಡಿ, ಮುಂಬೈ ಕರ್ನಾಟಕ ಭಾಗದ 7 ಜಿಲ್ಲೆಗಳ ಮಹಿಳೆಯರಿಗೆ ಈ ಭವನದಿಂದ ಉಪಯೋಗವಾಗಲಿದ್ದು, ಎಲ್ಲ ವ್ಯವಸ್ಥೆಗಳು ಒಂದೇ ಸೂರಿನ ಅಡಿಯಲ್ಲಿ ದೊರಕಲಿವೆ ಎಂದು ತಿಳಿಸಿದರು.ಜಿಲ್ಲಾಧಿಕಾರಿ ಎಸ್. ಶಂಕರ ನಾರಾಯಣ, ಸಿಇಒ ವೀರಣ್ಣ ತುರಮರಿ, ಜಿ.ಪಂ. ಅಧ್ಯಕ್ಷೆ ಬಸವ ರಾಜೇಶ್ವರಿ ಪಾಟೀಲ, ಉಪಾಧ್ಯಕ್ಷೆ ಶಾಂತವ್ವ ದಂಡಿನ, ಸದಸ್ಯ ಎಂ.ಎಸ್. ದೊಡ್ಡಗೌಡರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಎಸ್. ಕರೀಗೌಡರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕಿ ಡಾ. ಶಮ್ಲಾ ಇಕ್ಬಾಲ್, ಉಪ ನಿರ್ದೇಶಕ ಎಚ್.ಜೆ. ಚಂದ್ರಶೇಖರ ಹಾಗೂ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)