ಬುಧವಾರ, ಮೇ 18, 2022
23 °C

ಸ್ನಾತಕೋತ್ತರ ಅಧ್ಯಯನ ಕೇಂದ್ರದ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನರಗುಂದ: ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣಕ್ಕಾಗಿ ಸರ್ಕಾರ ಇಂದು ಹೆಚ್ಚಿನ ಆದ್ಯತೆ ನೀಡುತ್ತಿದೆ. ಆ ನಿಟ್ಟಿನಲ್ಲಿ ಪಟ್ಟಣದಲ್ಲಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ಆರಂಭವಾಗುತ್ತಿದೆ. ಅದಕ್ಕೆ ಬೇಕಾದ ಮೂಲ ಸೌಲಭ್ಯಗಳನ್ನು ಶೀಘ್ರವೇ ಒದಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ ಹೇಳಿದರು. ಸೋಮವಾರ ಪಟ್ಟಣದ ಸಿದ್ಧೇಶ್ವರ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಕೇಂದ್ರ ಹಾಗೂ ಒಕ್ಕೂಟ ವಿಭಾಗಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.ವಿದ್ಯಾರ್ಥಿನಿಯರಿಗೆ ಅವಶ್ಯವಿರುವ ವಸತಿ  ನಿಲಯವನ್ನು ನಿರ್ಮಿಸಿ ಕೊಡಲಾಗುವುದು. ಉಪನ್ಯಾಸಕರ ಹಾಗೂ ನರಗುಂದ ನಾಗರಿಕರ ಅವಿರತ ಶ್ರಮದ ಫಲವಾಗಿ ತಾಲ್ಲೂಕು ಕೇಂದ್ರದಲ್ಲಿ ಸ್ನಾತಕೋತ್ತರ ಕೇಂದ್ರ ಆರಂಭವಾಗುತ್ತಿರುವುದು ಸಂತಸದ ವಿಷಯ ಎಂದು ತಿಳಿಸಿದರು.  ಮುಖ್ಯ ಅತಿಥಿಗಳಾಗಿದ್ದ ಅಣ್ಣಿಗೇರಿ ಸರಕಾರಿ  ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಎಸ್.ಜಿ.ನಾವಿ ಮಾತನಾಡಿ ವಿದ್ಯಾರ್ಥಿಗಳು ಧನಾತ್ಮಕ ಆಲೋಚನೆಗಳ ಮೂಲಕ, ವಿಶ್ವಾಸ, ನಂಬಿಕೆ ಇಟ್ಟು ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಾಚಾರ್ಯೆ ನೀಲಾಂಬಿಕಾ ಪಟ್ಟಣಶೆಟ್ಟಿ `ಉಪನ್ಯಾಸಕರ ಶ್ರಮ, ಸಚಿವರ ಬೆಂಬಲದಿಂದ ಸ್ನಾತಕೋತ್ತರ ಕೇಂದ್ರ ಆರಂಭಗೊಂಡಿದೆ. ಈ ವರ್ಷ ಎಂ.ಎಸ್‌ಸಿ ಗಣಿತ, ಭೌತಶಾಸ್ತ್ರ, ಎಂ.ಕಾಂ ಹಾಗೂ ಎಂ.ಎ ಇತಿಹಾಸ ವಿಷಯದ ವಿಭಾಗಗಳು ಆರಂಭಗೊಂಡಿವೆ. ಒಟ್ಟು 60 ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದಾರೆ. ಉತ್ತರ ಕರ್ನಾಟಕದಲ್ಲಿಯೇ ಇದನ್ನು ಮಾದರಿ ಕೇಂದ್ರವಾಗಿಸಲು ಪ್ರಯತ್ನಿಸಲಾಗುವುದು ಎಂದರು.ಪುರಸಭೆ ಅಧ್ಯಕ್ಷೆ ಮಲ್ಲವ್ವ ಗುಂಜಳ, ಡಾ.ಬಿ.ಎಂ.ಜಾಬಣ್ಣವರ, ಸಿ.ಎಸ್.ಸಾಲೂಟಗಿಮಠ   ಅತಿಥಿಗಳಾಗಿದ್ದರು. ವಿ.ಎಸ್. ಢಾಣೆ, ಎಫ್.ವೈ. ಭಜಂತ್ರಿ, ಎ.ಪಿ. ಪಾಟೀಲ, ಒಕ್ಕೂಟ ವಿಭಾಗದ ಅಧ್ಯಕ್ಷ ಎಚ್.ಎಸ್.ಸುರೇಶಕುಮಾರ, ದಾವೂದ್‌ಜೈ, ಎಸ್.ಕೆ. ಪಾಟೀಲ, ಉಪಸ್ಥಿತರಿದ್ದರು. ಸ್ನಾತಕೋತ್ತರ ಕೇಂದ್ರದ ಸಮನ್ವಯಾಧಿಕಾರಿ ಡಾ.ಎ.ಬಿ. ವಗ್ಗರ ಸ್ವಾಗತಿಸಿದರು. ಆರ್.ಎಚ್. ತಿಗಡಿ ಅತಿಥಿಗಳನ್ನು ಪರಿಚಯಿಸಿದರು. ಮಧುಮತಿ ಕಳ್ಳಿಮನಿ ಹಾಗೂ ಎ.ಎಸ್. ಸೌದಾಗರ ನಿರೂಪಿಸಿದರು. ಸಂಜೀವಕುಮಾರ ಡಂಬಳ ವಂದಿಸಿದರು.ಡಿ.ಇಡಿ ಪರೀಕ್ಷೆಯಲ್ಲಿ ಸಾಧನೆ

ಗದಗ:
ನಗರದ ಪಂ. ಪಂಚಾಕ್ಷರ ಗವಾಯಿಗಳವರ ಡಿ.ಇಡಿ ಕಾಲೇಜಿನ ಡಿ.ಇಡಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ್ದಾರೆ. ಕಾಲೇಜಿನ ಒಟ್ಟು ಫಲಿತಾಂಶ ಶೇ. 90ರಷ್ಟಾಗಿದೆ.ಎಸ್.ಎಸ್. ಕಂಸವಣ್ಣವರ (ಶೇ 91) ಕಾಲೇಜಿಗೆ ಪ್ರಥಮ, ಎಸ್.ಎಸ್. ಅತ್ತಿಗೇರಿ (ಶೇ. 88) ದ್ವಿತೀಯ ಹಾಗೂ ಯು.ಬಿ. ಸಾಲಿಮಠ (ಶೇ.87) ತೃತೀಯ ಸ್ಥಾನ ಪಡೆದಿದ್ದಾರೆ. ಅದೇ ರೀತಿ ಡಿ.ಇಡಿ ಪ್ರಥಮ ವರ್ಷದ ಪರೀಕ್ಷೆಯಲ್ಲಿ ಎ.ಎಂ. ಸಾವಳಗಿಮಠ ಹಾಗೂ ಆರ್.ಪಿ. ಮಾಂಡ್ರೆ (ಶೇ.89) ಕಾಲೇಜಿಗೆ ಪ್ರಥಮ, ಎಸ್.ಎಂ. ಮಣ್ಣೇರಿ ಹಾಗೂ ಎಂ.ಯು. ಕವಳಿಕಾಯಿ (ಶೇ.87) ದ್ವಿತೀಯ ಮತ್ತು ಎಫ್.ಎಸ್. ನದಾಫ್ ತೃತೀಯ ಸ್ಥಾನ ಪಡೆದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.