ಬೆಂಗಳೂರು: ಮುಂದಿನ ದಿನಗಳಲ್ಲಿ ಸ್ನೂಕರ್ ಕ್ರೀಡೆಯಲ್ಲಿಯೂ ವಿಶ್ವಮಟ್ಟದಲ್ಲಿ ಎತ್ತರದ ಸಾಧನೆ ತೋರುವ ಮಹದಾಸೆ ತಮ್ಮದು ಎಂದು ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಬೆಂಗಳೂರಿನ ಪಂಕಜ್ ಅಡ್ವಾಣಿ ನುಡಿದರು.

ಈಚೆಗೆ ಇಂಗ್ಲೆಂಡ್ನ ಲೀಡ್ಸ್ನಲ್ಲಿ ನಡೆದ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ಷಿಪ್ನಲ್ಲಿ ಪ್ರಶಸ್ತಿ ಗೆದ್ದಿದ್ದಕ್ಕಾಗಿ ಇಲ್ಲಿ ಭಾನುವಾರ ಏರ್ಪಡಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಭಾರತ ಬಿಲಿಯರ್ಡ್ಸ್ ಮತ್ತು ಸ್ನೂಕರ್ ಫೆಡರೇಷನ್, ಕರ್ನಾಟಕ ರಾಜ್ಯ ಬಿಲಿಯರ್ಡ್ಸ್ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಸಂಘಟಿಸಲಾಗಿದ್ದ ಈ ಸಮಾರಂಭದಲ್ಲಿ ರೂಪೇಶ್ ಶಾ ಅವರನ್ನೂ ಸನ್ಮಾನಿಸಲಾಯಿತು. ರೂಪೇಶ್ ಅವರು ಪಾಯಿಂಟ್ಸ್ ಮಾದರಿಯ ಬಿಲಿಯರ್ಡ್ಸ್ ವಿಶ್ವ ಪ್ರಶಸ್ತಿ ಗೆದ್ದಿದ್ದಾರೆ.

`ನಾನು ಬಿಲಿಯರ್ಡ್ಸ್ ಮತ್ತು ಸ್ನೂಕರ್ ಕ್ರೀಡೆಗಳೆರಡಕ್ಕೂ ಸಮಾನ ಪ್ರಾಶಸ್ತ್ಯ ನೀಡಿ ಮುಂದಿನ ದಿನಗಳಲ್ಲಿ ಸ್ಪರ್ಧಿಸಲಿದ್ದೇನೆ~ ಎಂದೂ ಪಂಕಜ್ ತಿಳಿಸಿದರು. `ಒಂದು ವೇಳೆ ಈ ಋತುವಿನಲ್ಲಿ ನಾನು ಬಿಲಿಯರ್ಡ್ಸ್ ಆಡಿರದಿದ್ದರೆ, ಸ್ನೂಕರ್ನಲ್ಲಿಯೇ ಹೆಚ್ಚಿನ ಸಾಮರ್ಥ್ಯ ತೋರಿರುತ್ತಿದ್ದೆ~ ಎಂದೂ ಅವರು ಹೇಳಿದರು.

ಕ್ರೀಡಾಪಟುಗಳ ವೈಯಕ್ತಿಕ ಅಭಿಪ್ರಾಯಗಳಿಗೆ ಹೆಚ್ಚಿನ ಮನ್ನಣೆ ನೀಡಬೇಕಾಗುತ್ತದೆ. ಕ್ರಿಕೆಟ್ನಲ್ಲಿ ಸಚಿನ್ ತೆಂಡೂಲ್ಕರ್ ಅವರು ತಾವು ಟಿ 20ನಲ್ಲಿ ಸದ್ಯಕ್ಕೆ ಆಡುವುದಿಲ್ಲ ಎಂದರೆ ಎಲ್ಲರೂ ಅದನ್ನು ಒಪ್ಪಿಕೊಂಡು ಬಿಡುತ್ತಾರೆ. ಅದೇ ರೀತಿ ಇತರ ಕ್ರೀಡೆಗಳಲ್ಲಿ ಆಟಗಾರನೊಬ್ಬ ತನ್ನ ಸಾಮರ್ಥ್ಯಕ್ಕೆ ಸಂಬಂಧಿಸಿದಂತೆ ವ್ಯಕ್ತಪಡಿಸುವ ನಿಲುವುಗಳನ್ನು ಎಷ್ಟರಮಟ್ಟಿಗೆ ಗಂಭೀರವಾಗಿ ಪರಿಗಣಿಸಲಾಗುತ್ತದೆ ಎಂದೂ ಪ್ರಶ್ನಿಸಿದರು.
ಅಷ್ಟು ದೀರ್ಘಕಾಲ ಕ್ರಿಕೆಟ್ ಆಡಿರುವ ಅಂತಹ ಅಪ್ರತಿಮ ಆಟಗಾರನ ಕೆಲವು ನಿರ್ಧಾರಗಳನ್ನು ಅತ್ಯಂತ ಗೌರವಯುತವಾಗಿಯೇ ನೋಡುವುದು ಸೂಕ್ತವೇ ಆಗಿದೆ ಎಂದರು.

`ಪ್ರಸಕ್ತ ನನಗೆ ವಿಶ್ವ ಬಿಲಿಯರ್ಡ್ಸ್ ಪ್ರಶಸ್ತಿಗಿಂತ ದೊಡ್ಡದಾಗಿ ಏನೂ ಕಾಣಿಸುತ್ತಿಲ್ಲ. ಬಹಳಷ್ಟು ಖುಷಿಯಾಗಿದೆ~ ಎಂದರು.`ಇದೀಗ ಇನ್ನು ಮೂರು ದಿನಗಳಲ್ಲಿ ಅಭ್ಯಾಸ ನಡೆಸಿ, ಅಂತರರಾಷ್ಟ್ರೀಯ ಸ್ನೂಕರ್ಟೂರ್ನಿಯೊಂದರಲ್ಲಿ ಪಾಲ್ಗೊಳ್ಳಲು ಲಂಡನ್ಗೆ ತೆರಳುತ್ತಿದ್ದೇನೆ~ ಎಂದೂ ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಪತ್ರಕರ್ತರು `ಮದುವೆಯ ಬಗ್ಗೆ ಯೋಚನೆ ಮಾಡಿದ್ದೀರಾ~ ಎಂದು ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಪಂಕಜ್ `ಇನ್ನೊಂದು ಎರಡು ವರ್ಷದೊಳಗೆ ಇದು ಸಾಧ್ಯವಿಲ್ಲ ಎನಿಸುತ್ತದೆ. ಈಗಂತೂ ನನ್ನ ಮನಸ್ಸಿನೊಳಗೆ ಯಾರೂ ಇಲ್ಲ, ಮುಂದಿನ ದಿನಗಳಲ್ಲಿ ಪ್ರಸ್ತಾವಗಳು ಬಂದರೆ ನೋಡುತ್ತೇನೆ~ ಎಂದರು.

ಭಾರತ ಸ್ನೂಕರ್ ಮತ್ತು ಬಿಲಿಯರ್ಡ್ಸ್ ಫೆಡರೇಷನ್ನ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯಂ ಸ್ವಾಗತಿಸಿದರು. ಫೆಡರೇಷನ್ನ ಅಧ್ಯಕ್ಷ ಕ್ಯಾಪ್ಟನ್ ಮೋಹನ್ ಮತ್ತು ಖಜಾಂಚಿ ಆರಾಧ್ಯ ಅವರು ಪಂಕಜ್ ಅಡ್ವಾಣಿ ಮತ್ತು ರೂಪೇಶ್ಗೆ ತಲಾ ಒಂದು ಲಕ್ಷ ರೂಪಾಯಿ ನಗದು ಮತ್ತು ಆಕರ್ಷಕ ಸ್ಮರಣಿಕೆಗಳನ್ನು ನೀಡಿ ಗೌರವಿಸಿದರು. ಕರ್ನಾಟಕ ಬಿಲಿಯರ್ಡ್ಸ್ ಸಂಸ್ಥೆಯ ಕಾರ್ಯದರ್ಶಿ ವಿಜಯ ಪ್ರಸಾದ್ ಪಂಕಜ್ಗೆ 50ಸಾವಿರ ರೂಪಾಯಿ ನಗದು ನೀಡಿ ಗೌರವಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.