ಮಂಗಳವಾರ, ಜೂನ್ 22, 2021
27 °C

ಸ್ನೂಕರ್ ಕ್ಲಬ್ ಮೇಲೆ ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ರೆಸಿಡೆನ್ಸಿ ರಸ್ತೆಯ ಸೆವೆನ್ ಹಿಲ್ಸ್ ಸ್ನೂಕರ್ ಕ್ಲಬ್‌ಮೇಲೆ ಸೋಮವಾರ ದಾಳಿ ನಡೆಸಿದ ಬಿಬಿಎಂಪಿ ಪೂರ್ವ ವಲಯ ಜಂಟಿ ಆಯುಕ್ತರು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿ ಹುಕ್ಕಾ ಚಟುವಟಿಕೆ ನಡೆಯುತ್ತಿದ್ದದ್ದನ್ನು ಪತ್ತೆ ಹಚ್ಚಿದ್ದಾರೆ. ಹೊಗೆ ಸೊಪ್ಪು, ಫ್ಲೇವರ್‌ಗಳು ಮತ್ತು ಇತರೆ ಸಾಮಗ್ರಿಗಳನ್ನು ಸಿಬ್ಬಂದಿ ಜಪ್ತಿ ಮಾಡಿ ಕ್ಲಬ್‌ಗೆ ಬೀಗ ಮುದ್ರೆ ಹಾಕಿದ್ದಾರೆ.



ಅಮ್ಯೂಸ್‌ಮೆಂಟ್ ಆಫ್ ಸ್ಮೋಕಿಂಗ್ ಇನ್ ಪಬ್ಲಿಕ್ ಪ್ಲೇಸ್ ಕಾಯ್ದೆಯ (1973) ಕಲಂ 21ರ ಅನ್ವಯ ಹುಕ್ಕಾ ಸೇವನೆಗೆ ಅವಕಾಶ ನೀಡುವುದು ಕಾನೂನು ಬಾಹಿರ. ಬಿಬಿಎಂಪಿ ನೀಡಿದ್ದ ಪರವಾನಗಿಯನ್ನು ಕ್ಲಬ್ ಮಾಲೀಕರು ದುರುಪಯೋಗಪಡಿಸಿಕೊಂಡಿದ್ದು, ಈ ಕ್ಲಬ್‌ಗೆ ಶಾಲಾ ವಿದ್ಯಾರ್ಥಿಗಳು ಭೇಟಿ  ನೀಡುತ್ತಿದ್ದರು.

ಸ್ನೂಕರ್ ಆಡುತ್ತಿದ್ದವರು ಹುಕ್ಕಾ ಸೇದುತ್ತಿದ್ದರು ಎಂದು ಪಾಲಿಕೆ ಅಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.