ಗುರುವಾರ , ಜೂನ್ 24, 2021
28 °C

ಸ್ನೂಕರ್: ಫೈನಲ್‌ಗೆ ಐಒಸಿಎಲ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಐಒಸಿಎಲ್ ತಂಡ ಇಲ್ಲಿ ನಡೆಯುತ್ತಿರುವ ಪಿಎಸ್‌ಪಿಬಿ ಇಂಟರ್ ಯೂನಿಟ್ ಸ್ನೂಕರ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿತು.



ಭಾನುವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಐಒಸಿಎಲ್ 4-2ರಲ್ಲಿ ಬಿಪಿಸಿಎಎಲ್ ಎದುರು ಜಯಿಸಿತು. ಇನ್ನೊಂದು ನಾಲ್ಕರ ಘಟ್ಟದ ಪಂದ್ಯದಲ್ಲಿ ಒಎನ್‌ಜಿಸಿ 4-0ರಲ್ಲಿ ಜಿಎಐಎಲ್ ತಂಡವನ್ನು ಮಣಿಸಿ ಪ್ರಶಸ್ತಿ ಸನಿಹ ಹೆಜ್ಜೆ ಹಾಕಿತು.



ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೆ ಅರ್ಹತಾ ಟೂರ್ನಿಯ ಪಂದ್ಯಗಳು ಸಹ ಇದೇ ವೇಳೆ ನಡೆದವು.

ರೂಪೇಶ್ ಶಾ, ಸೌರವ್ ಕೊಠಾರಿ ರಾಷ್ಟ್ರೀಯ ಟೂರ್ನಿಗೆ ಅರ್ಹತೆ ಪಡೆದರೆ, ಅಲೋಕ್ ಕುಮಾರ್ ಹಾಗೂ ಪಂಕಜ್ ಅಡ್ವಾಣಿ ಅವರನ್ನು ನಾಮ ನಿರ್ದೇಶನ ಮಾಡಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.