ಬೆಂಗಳೂರು: ಹಣಕಾಸು ವಿಷಯಕ್ಕೆ ಆರಂಭವಾದ ಸ್ನೇಹಿತರ ನಡುವಿನ ಜಗಳ ಒಬ್ಬರ ಕೊಲೆಯಲ್ಲಿ ಅಂತ್ಯವಾದ ಘಟನೆ ಕೋನಪ್ಪನ ಅಗ್ರಹಾರ ಸಮೀಪದ ವೆಂಕಟೇಶ್ ಚಿತ್ರಮಂದಿರದ ಎದುರು ಬುಧವಾರ ರಾತ್ರಿ ನಡೆದಿದೆ.
ಮೂಲತಃ ಕೋಲಾರದವರಾದ ಆನಂದ್ ಕೊಲೆಯಾದವರು. ಆರೋಪಿ ಸಂತೋಷ್(25)ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಇಬ್ಬರು ಸ್ನೇಹಿತರಾಗಿದ್ದು ಒಂದೇ ರೂಮಿನಲ್ಲಿ ವಾಸವಾಗಿದ್ದರು. ರಾತ್ರಿ 8.30ರ ಸುಮಾರಿಗೆ ಸಿನಿಮಾ ವೀಕ್ಷಿಸಿ ಚಿತ್ರಮಂದಿರದಿಂದ ಹೊರ ಬಂದ ಇಬ್ಬರು ಹಣಕಾಸಿನ ವಿಚಾರದಲ್ಲಿ ಜಗಳವಾಡಿದ್ದಾರೆ. ಘಟನೆಯಲ್ಲಿ ಕೆಳಗೆ ಬಿದ್ದ ಆನಂದ್ ತಲೆ ಮೇಲೆ ಸಂತೋಷ್ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದರು.
ಘಟನೆ ಸಂಬಂಧ ಚಿತ್ರಮಂದಿರದಲ್ಲಿ ಟಿಕೆಟ್ ಬುಕಿಂಗ್ ಕೆಲಸ ಮಾಡುತ್ತಿದ್ದ ಮಧುಕುಮಾರ್ ದೂರು ನೀಡಿದ್ದಾರೆ. ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ - ಬಂಧನ: ಮನೆಯೊಳಗೆ ನುಗ್ಗಿದ ದುಷ್ಕರ್ಮಿಯೊಬ್ಬ ಮಹಿಳೆಗೆ ಚಾಕುವಿನಿಂದ ಇರಿದು ಚಿನ್ನದ ಸರ ದೋಚುತ್ತಿದ್ದ ವೇಳೆ ಸ್ಥಳೀಯರು ಆತನನ್ನು ಬಂಧಿಸಿ ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.

ಲಾಲ್ಜೀ ನಗರದ ನಿವಾಸಿ ತಬಸ್ಸುಂ(28) ಅವರಿಗೆ ಆರೋಪಿ ಸಮೀರ್ ಏಳೆಂಟು ಬಾರಿ ಚಾಕುವಿನಿಂದ ಇರಿದಿದ್ದಾನೆ. ಗಂಭೀರ ಗಾಯಗೊಂಡ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಯಿತು ಎಂದು ಪೊಲೀಸರು ತಿಳಿಸಿದರು.

ತಬಸ್ಸುಮ್ ಅವರ ಪತಿ ಅರ್ಫತ್ ಅಲಿ ಖಾನ್ ಕೆಲಸಕ್ಕೆ ಹೋಗಿದ್ದರು. ಮೂರು ವರ್ಷದ ಮಗುವಿನೊಂದಿಗೆ ತಬಸ್ಸುಂ ಮೆನೆಯಲ್ಲಿದ್ದರು. ಮಧ್ಯಾಹ್ನ 1.30ರ ಸುಮಾರಿಗೆ ಮನೆಯೊಳಗೆ ನುಗ್ಗಿದ ಸಮೀರ್, ಅವರಿಗೆ ಚಾಕುವಿನಿಂದ ಇರಿದು ಚಿನ್ನದ ಸರ ಹಾಗೂ ಎಟಿಎಂ ಕಾರ್ಡ್ ಕಿತ್ತುಕೊಂಡಿದ್ದಾನೆ. ಈ ವೇಳೆ ತಬಸ್ಸುಂ ಕಿರುಚಿಕೊಂಡಿದ್ದು ಸ್ಥಳೀಯರು ಆರೋಪಿಯನ್ನು ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಕೊಲೆ ಆರೋಪಿ ಬಂಧನ: ಬೆಂಕಿ ಹಚ್ಚಿ ಮಹಿಳೆಯ ಕೊಲೆ ಮಾಡಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಾಗಲೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಶ್ರೀನಿವಾಸಪುರದ ನಿವಾಸಿ ಗಣೇಶ (26) ಬಂಧಿತ ಆರೋಪಿ. ಮಾರ್ಚ್ 10ರಂದು ಶ್ರೀನಿವಾಸಪುದ ನಿವಾಸಿ ರುಕ್ಷ್ಮಿಣಿ ಎಂಬುವರ ಮೇಲೆ ಪೆಟ್ರೊಲ್ ಎರಚಿ ಬೆಂಕಿ ಹಚ್ಚಿ ಪರಾರಿಯಾಗಿದ್ದನು. ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರುಕ್ಮಿಣಿ ಮಾ.31 ರಂದು ಮೃತಪಟ್ಟಿದ್ದರು. ಸೋಮವಾರ(ಏ.2) ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

`ಗಣೇಶ್ ನಾಲ್ಕು ವರ್ಷಗಳಿಂದ ರುಕ್ಮಿಣಿ ಅವರ ಜತೆ ಅನೈತಿಕ ಸಂಬಂಧ ಹೊಂದಿದ್ದ. 20 ಸಾವಿರ ರೂಪಾಯಿ ಹಣವನ್ನು ರುಕ್ಮಿಣಿಗೆ ಸಾಲವಾಗಿ ನೀಡಿದ್ದ ಗಣೇಶ್, ವಾಪಸ್ ಕೇಳಿದಾಗ ಆತನ ಸ್ನೇಹಿತರ ಮುಂದೆ ರುಕ್ಮಿಣಿ ಅವಮಾನ ಮಾಡಿದ್ದರು.

ಇದರಿಂದ ಕೋಪಗೊಂಡು ಆಕೆಗೆ ಬೆಂಕಿ ಹಚ್ಚಿದ್ದಾನೆ ಎಂಬುದು ವಿಚಾರಣೆ ವೇಳೆ ತಿಳಿದು ಬಂದಿದೆಂದು ಪೊಲೀಸರು ಹೇಳಿದ್ದಾರೆ. ಈಶಾನ್ಯ ವಿಭಾಗದ ಡಿಸಿಪಿ ಡಾ.ರಮೇಶ್ ಅವರ ಮಾರ್ಗದರ್ಶನದಲ್ಲಿ, ಇನ್ಸ್ಪೆಕ್ಟರ್ ಪರಮೇಶ್ವರ ಹೆಗ್ಡೆ ಹಾಗೂ ಸಿಬ್ಬಂದಿ ತಂಡ ಆರೋಪಿಯನ್ನು ಬಂಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.