ಭಾನುವಾರ, ಜನವರಿ 19, 2020
26 °C

ಸ್ಪೀಕರ್ ನಿವಾಸದ ಬಳಿ ಸ್ಫೋಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಂಫಾಲ(ಪಿಟಿಐ): ಮಣಿಪುರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಮೇಲಿನ ಬಂಡುಕೋರರ ದಾಳಿ ಮುಂದು ವರಿದಿದ್ದು, ಇಲ್ಲಿನ ಶಿಂಗ್‌ಜಮೈನಲ್ಲಿರುವ ವಿಧಾನಸಭಾ ಸ್ಪೀಕರ್ ಹಿಮೊಚಂದ್ರ ಅವರ ನಿವಾಸದ ಮೇಲೆ ಅಪರಿಚಿತ ವ್ಯಕ್ತಿಗಳು ಗ್ರೆನೆಡ್ ಎಸೆದಿದ್ದಾರೆ.ಗುರುವಾರ ಮಧ್ಯರಾತ್ರಿ ಹಿಮೊ ಚಂದ್ರ ಅವರ ನಿವಾಸದ ಗೇಟಿನ ಬಳಿ ಬಾಂಬ್ ಸ್ಫೋಟಿಸ್ದ್ದಿದು, ಯಾರೂ  ಗಾಯಗೊಂಡಿಲ್ಲ ಎಂದು  ಮೂಲಗಳು ತಿಳಿಸಿವೆ.ಬಂಡುಕೋರರು ಕೇವಲ ಕಾಂಗ್ರೆಸ್ ಪಕ್ಷದವರ ಮೇಲೆ ದಾಳಿ ಮಾಡುತ್ತಿದ್ದು, ಇತರ ಪಕ್ಷದವರ ದಾಳಿ ಮಾಡಿಲ್ಲ ಎಂದು ಕಾಂಗ್ರೆಸ್ ವಕ್ತಾರರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)