ಶುಕ್ರವಾರ, ಜನವರಿ 24, 2020
21 °C

ಸ್ಪೀಡ್ ಸ್ಕೇಟಿಂಗ್: ಹೃತಿಕ್, ತೀರ್ಥಾಗೆ ಚಿನ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕದ ಹೃತಿಕ್ ಕರಡಿ ಹಾಗೂ ತೀರ್ಥಾ ಸುಬ್ಬಯ್ಯ ಇಲ್ಲಿ ನಡೆಯುತ್ತಿರುವ 49ನೇ ರಾಷ್ಟ್ರೀಯ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ  8-10 ವರ್ಷ (ಬಾಲಕರು) ಹಾಗೂ 10-12 ವರ್ಷದೊಳಗಿನವರ (ಬಾಲಕಿಯರು) ವಿಭಾಗದ ರಸ್ತೆ ರೇಸ್-11(ಇನ್‌ಲೈನ್ ಸ್ಕೇಟರ್) 2000 ಮೀಟರ್‌ನಲ್ಲಿ ಚಿನ್ನದ ಪದಕ ಜಯಿಸಿದ್ದಾರೆ. ಚಾಂಪಿಯನ್‌ಷಿಪ್‌ನ ಎರಡನೇ ದಿನವಾದ ಬುಧವಾರ ಕೆಲ ಸ್ಪರ್ಧೆಗಳು ನೈಸ್ ರಸ್ತೆಯಲ್ಲಿ ನಡೆದವು.  ಫಲಿತಾಂಶ ಇಂತಿದೆ: ರಸ್ತೆ ರೇಸ್-11 (ಇನ್‌ಲೈನ್ ಸ್ಕೇಟರ್) 5000 ಮೀಟರ್: ಬಾಲಕರ ವಿಭಾಗ (16 ವರ್ಷ): ಸ್ಟೀಫನ್ ಪಾಲ್ (ಆಂಧ್ರಪ್ರದೇಶ)-1, ಜಿ.ವಿ.ರಾಘವೇಂದ್ರ (ಕರ್ನಾಟಕ)-2, ಮೀಟ್ ಷಾ (ಗುಜರಾತ್)-3. 14-16 ವರ್ಷ: ಮೋಹಿತ್ ಮಲಿಕ್ (ದೆಹಲಿ)-1, ಆಕಾಶ್ ರಾಜು (ಕರ್ನಾಟಕ)-2, ಚಿರಂತ್ ಭಾರದ್ವಾಜ್ (ಕರ್ನಾಟಕ)-3. 12-14 ವರ್ಷ (3000 ಮೀ.): ತೇಜೇಶ್ವರ್ (ತಮಿಳುನಾಡು)-1, ಪ್ರತೀಕ್ ಪ್ರಸಾದ್ (ಕರ್ನಾಟಕ)-2, ಎಸ್.ಅಂಕಿತ್ (ಕರ್ನಾಟಕ)-3.8-10 ವರ್ಷ (2000 ಮೀ.): ಹೃತಿಕ್ ಕರಡಿ (ಕರ್ನಾಟಕ)-1, ತನ್ಮಯ (ಹರಿಯಾಣ)-2, ಮೊಹಮ್ಮದ್ ಹ್ಯಾರಿಸ್ (ತಮಿಳುನಾಡು)-3.ಬಾಲಕಿಯರು: 16 ವರ್ಷ (5000 ಮೀ.): ಎಚ್.ಎ.ನಿಲಾಶಾ (ಕರ್ನಾಟಕ)-1, ಎಚ್.ಎ.ಪ್ರಗ್ನಾ (ಕರ್ನಾಟಕ)-2, ಮಾನ್ಸಿ ಬೀಡೆ (ಮಹಾರಾಷ್ಟ್ರ). 12-14 ವರ್ಷ (3000 ಮೀ.): ಮುಸ್ಕಾನಾ ಚೌಹಾನ್ (ಹರಿಯಾಣ)-1, ಸಿಲಿಯಾ ಸಿಮ್ಮಿತ್ (ಕರ್ನಾಟಕ)-2, ಅನುಶ್ರೀ ಚೌಹಾನ್ (ಮಹಾರಾಷ್ಟ್ರ)-3. 10-12 ವರ್ಷ (2000  ಮೀ.): ತೀರ್ಥನಾ ಸುಬ್ಬಯ್ಯ (ಕರ್ನಾಟಕ)-1, ಸಂಜನಾ ರೆಡ್ಡಿ (ಆಂಧ್ರಪ್ರದೇಶ)-2, ಪ್ರಕೃತಿ ಸಕ್ಸೇನಾ (ದೆಹಲಿ)-3. 8-10 ವರ್ಷ (2000 ಮೀ.): ಪ್ರೀತಾ ಶ್ರೀಲಾಲ್ (ಉತ್ತರಪ್ರದೇಶ)-1, ರಿಯಾ ಎಲೆಜಬೆತ್ ಅಚ್ಚಯ್ಯ (ಕರ್ನಾಟಕ)-2.

ಪ್ರತಿಕ್ರಿಯಿಸಿ (+)