ಬುಧವಾರ, ಮೇ 18, 2022
27 °C

ಸ್ಫೂರ್ತಿ ತುಂಬಿದಯುವ ಸ್ಪಂದನ-3

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜನವರಿ 20ರಿಂದ 23ರ ವರೆಗೆ ಮಂಚನಬಲೆ ಜಲಾಶಯದ ಹಿನ್ನೀರ ಪ್ರದೇಶದ ಸಮೀಪವಿರುವ ‘ವ್ಯಾಲ್ಯೂ ಲೇನ್ಸ್’ನಲ್ಲಿ ಹಬ್ಬದ ವಾತಾವರಣ. ಸತತ ಮೂರು ದಿನಗಳ ಕಾಲ ವಿವಿಧ ರಾಜ್ಯಗಳಿಂದ ಬಂದ ನೂರಕ್ಕೂ ಅಧಿಕ ಯುವ ಮನಸುಗಳು ಅಲ್ಲಿ ಕುಣಿದು ಕುಪ್ಪಳಿಸಿದ್ದವು.ಇಂತಹ ಸಂಭ್ರಮಕ್ಕೆ ಅವಕಾಶ ಕಲ್ಪಿಸಿದ್ದು ಬೆಂಗಳೂರಿನ ಬಸವೇಶ್ವರ ನಗರ ರೋಟರಿ ಸಂಸ್ಥೆ. ಕಾರ್ಯಕ್ರಮದ ಹೆಸರು ‘ಯುವ ಸ್ಪಂದನ-3’. ಬಸವೇಶ್ವರನಗರದ ರೋಟರಿ ಸಂಸ್ಥೆ ಮೂರನೇ ವರ್ಷ ಆಯೋಜಿಸಿದ ಬಹು ಜಿಲ್ಲಾ ರೋಟರಿ ಯೂತ್ ಲೀಡರ್‌ಶಿಪ್ ಅವಾರ್ಡ್ಸ್ (ಆರ್‌ವೈಎಲ್‌ಎ)  ತರಬೇತಿ ಶಿಬಿರ ಅದು.ಯುವಕರಲ್ಲಿ ನಾಯಕತ್ವ ಗುಣ ಬೆಳೆಸುವ ನಿಟ್ಟಿನಲ್ಲಿ ರೋಟರಿ ಸಂಸ್ಥೆ ವಿಶೇಷವಾಗಿ ಆಯೋಜಿಸುವ ಈ ತರಬೇತಿ ಶಿಬಿರದಲ್ಲಿ 18-24 ವಯೋಮಾನದ  78 ಮತ್ತು 8ರಿಂದ 12 ವರ್ಷದ  38 ಬಾಲಕ - ಬಾಲಕಿಯರು ಭಾಗವಹಿಸಿದ್ದರು.ಶಿಬಿರ ಅಂದ ಕೂಡಲೇ ಅದರಲ್ಲೂ ಯುವಕರಿಗಾಗಿಯೇ ಮೀಸಲಾಗಿರುವ  ಶಿಬಿರದಲ್ಲಿ ಆಟ ಪಾಠ, ತುಂಟಾಟ, ವಿನೋದ ಎಲ್ಲಾ ಇರಲೇಬೇಕು ಅಲ್ಲವೇ?ರೋಟರಿಯ ಈ ಶಿಬಿರದಲ್ಲಿ ಎಲ್ಲವೂ ಇತ್ತು. ಯುವಜನರಿಗೆ ಇಲ್ಲಿ ದೊರಕಿದ್ದು ಭರಪೂರ ಮನರಂಜನೆ. ಜೊತೆಗೆ ಹೊಸ ಗೆಳೆಯರು. ನಾಯಕತ್ವ ಗುಣ ಮೈಗೂಡಿಸಿಕೊಳ್ಳುವುದರ ಕುರಿತ ತರಬೇತಿ. ತಮ್ಮ ಸಾಮರ್ಥ್ಯ ಹೊರಗೆಡಹಲು ಒಂದು ಉತ್ತಮ ಅವಕಾಶ.ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಕೇರಳ ಮತ್ತು ಮಹಾರಾಷ್ಟ್ರಗಳಿಂದ ಬಂದ ಯುವಜನರು ತಮ್ಮ ಪ್ರತಿಭೆ-ಸಾಮರ್ಥ್ಯವನ್ನು  ಪ್ರದರ್ಶಿಸಿ ಸೈ ಎನಿಸಿಕೊಂಡರು.ರೋಟೆರಿಯನ್ ಸುಧೀರ್ ಎಸ್.ನವಲೆ ಅವರ ಮಾರ್ಗದರ್ಶನದಲ್ಲಿ ನಡೆದ ಶಿಬಿರದಲ್ಲಿ ಯುವಕರಿಗೆ ತರಬೇತಿ ನೀಡುವ ಹೊಣೆಯನ್ನು ಅನುಭವಿ ತರಬೇತುದಾರರಾದ ಹಾಗೂ ಮಾಜಿ ಸೇನಾಧಿಕಾರಿಗಳಾದ ಕರ್ನಲ್ ಅರುಣ್ ಧಾರ್ ಮತ್ತು ಮೇಜರ್ ವೈಭವ್ ಕಪೂರ್ ಹೊತ್ತಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.