ಸ್ಫೋಟ: ಹೈಕೋರ್ಟ್‌ನಲ್ಲೂ ಆತಂಕ

7

ಸ್ಫೋಟ: ಹೈಕೋರ್ಟ್‌ನಲ್ಲೂ ಆತಂಕ

Published:
Updated:
ಸ್ಫೋಟ: ಹೈಕೋರ್ಟ್‌ನಲ್ಲೂ ಆತಂಕ

ಬೆಂಗಳೂರು: ದೆಹಲಿಯಲ್ಲಿ ಬಾಂಬ್ ಸ್ಫೋಟದ ನಂತರ ಇಲ್ಲಿಯ ಹೈಕೋರ್ಟ್‌ನಲ್ಲಿಯೂ ಗುರುವಾರ ಆತಂಕದ ವಾತಾವರಣ ಕಂಡುಬಂತು. ಸುದ್ದಿ ಕಾಳ್ಗಿಚ್ಚಿನಂತೆ ಕೋರ್ಟ್‌ನಲ್ಲಿ ಹರಡುತ್ತಲೇ, ಟಿ.ವಿ. ವೀಕ್ಷಿಸಲು ವಕೀಲರು ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದರು.ಇನ್ನೊಂದೆಡೆ, ಕೋರ್ಟ್ ಆವರಣದಲ್ಲಿ ತಕ್ಷಣ ಜಮಾಯಿಸಿದ ಕೆಲ ವಕೀಲರು ರಾಜ್ಯದಲ್ಲಿನ ಎಲ್ಲ ಕೋರ್ಟ್‌ಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿಗಳನ್ನು ಆಗ್ರಹಿಸಿದರು.`ಹೈಕೋರ್ಟ್‌ನಲ್ಲಿ ಈಗ ಇರುವ ಭದ್ರತೆ ಸಾಲದು. ಅಧೀನ ಕೋರ್ಟ್‌ಗಳಲ್ಲಿ ಕನಿಷ್ಠ ಭದ್ರತೆಯೂ ಇಲ್ಲ. ಇದೇ ರೀತಿ ರಾಜ್ಯದಲ್ಲಿನ ಇತರ ಕೋರ್ಟ್‌ಗಳ ಪರಿಸ್ಥಿತಿಯೂ ಇದೆ. ಈ ಹಿನ್ನೆಲೆಯಲ್ಲಿ ನ್ಯಾಯಾಲಯಗಳಿಗೆ ಸೂಕ್ತ ರಕ್ಷಣೆ ಅಗತ್ಯ~ ಎಂದು ಅವರು ಹೇಳಿದರು.ಈ ಕುರಿತು ಪ್ರತಿಕ್ರಿಯೆ ನೀಡಿದ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಕೆ.ಎನ್.ಪುಟ್ಟೇಗೌಡ ಅವರು, `ಹೈಕೋರ್ಟ್ ಮಟ್ಟಿಗೆ ಹೇಳುವುದಾದರೆ ಈಗಾಗಲೇ ಸಾಕಷ್ಟು ಭದ್ರತಾ ಕ್ರಮ ತೆಗೆದುಕೊಳ್ಳಲಾಗಿದೆ.ಪೊಲೀಸರಿಗೆ ವಕೀಲರು ಸಹಕರಿಸುವುದು ಮುಖ್ಯ. ಬಾಂಬ್ ಸ್ಫೋಟದಂತಹ ಕೃತ್ಯ ಯಾವಾಗ ಎಲ್ಲಿ ಬೇಕಾದರೂ ಆಗಬಹುದು. ಎಲ್ಲೋ ಬಾಂಬ್ ಸ್ಫೋಟ ಆಗಿದೆ ಎಂಬ ಸುದ್ದಿ ತಿಳಿದ ಕ್ಷಣದಲ್ಲಿ ಮಾತ್ರ ಎಚ್ಚರಿಕೆ ವಹಿಸುವುದು ಬಿಟ್ಟು, ಸದಾ ಭದ್ರತೆಗೆ ಎಲ್ಲರ ಸಹಕಾರ ಅಗತ್ಯ~ ಎಂದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry