ಶುಕ್ರವಾರ, ಮೇ 14, 2021
21 °C

ಸ್ಮಶಾನದಿಂದ ಯುವತಿ ಶವ ನಾಪತ್ತೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಲ್ಹಾರ: ಗ್ರಾಮದಲ್ಲಿನ  ಸ್ಮಶಾನದಲ್ಲಿನ ಯುವತಿಯೊಬ್ಬಳ ಶವ ನಾಪತ್ತೆಯಾದ ಘಟನೆ ನಡೆದಿದೆ.

ಈ ಮಹಿಳೆ (24) ಅನಾರೋಗ್ಯ ದಿಂದ ಬಳಲುತ್ತಿದ್ದು ವಿಜಾಪುರದ ಬಿಎಲ್‌ಡಿಇ ಆಸ್ಪತ್ರೆಯಲ್ಲಿ ದಾಖಲಿಸ ಲಾಗಿತ್ತು. ಶನಿವಾರ ರಾತ್ರಿ ಈಕೆ ನಿಧನ ಹೊಂದಿದಳು. ಭಾನುವಾರ ಕೊಲ್ಹಾರ ಗ್ರಾಮದಲ್ಲಿ ಮಧ್ಯಾಹ್ನ  ಶವಸಂಸ್ಕಾರ ನೆರವೇರಿಸಲಾಗಿತ್ತು.ಮೂರು ದಿನದ ಕಾರ್ಯ ನೆರವೇರಿಸಿ ಹೂವು ಹಾಕಿ ಬರಲು ಮಂಗಳವಾರ ಕುಟುಂಬ ಸದಸ್ಯರು ಸ್ಮಶಾನಕ್ಕೆ ತೆರಳಿದ್ದರು. ಆದರೆ ಗೋರಿ ಅಗೆದು ಶವ ತೆಗೆದುಕೊಂಡು ಹೋಗಿರುವುದು ಕಂಡುಬಂತು.ಶವಕ್ಕೆ ಸುತ್ತಿದ್ದ ಬಟ್ಟೆ, ಹೂವುಗಳನ್ನು ಗೋರಿಯಲ್ಲಿ ಬಿಟ್ಟು, ಕೇವಲ ಶವ ತೆಗೆದುಕೊಂಡು ಹೋಗಿರುವುದು ಹಲವು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.ಮಾಟ ಮಾಡುವ ಮಂತ್ರವಾದಿಗಳ ಕೈವಾಡ ಇರಬಹುದು ಇಲ್ಲವೇ ವೈದ್ಯ ಕೀಯ ಸಂಶೋಧನೆಗಳಿಗೆ ಬಳಸಲು ಶವವನ್ನು ಹೊತ್ತು ಒಯ್ದಿರಬಹುದು ಎಂದು ಗ್ರಾಮದ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮದಲ್ಲಿ ಇದೇ ಮೊದಲ ಬಾರಿ ಇಂತಹ ಘಟನೆ ನಡೆದಿದ್ದು, ಜನರಲ್ಲಿ ಆತಂಕ ಮೂಡಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.