ಮಧುಗಿರಿ: ದಲಿತರಿಗೆ ಸ್ಮಶಾನ ಭೂಮಿ ಇರುವವರನ್ನು ಬೇಡಿ ಶವಸಂಸ್ಕಾರ ಮಾಡಬೇಕಾಗಿದ್ದು, ಕೂಡಲೇ ಸ್ಮಶಾನ ಸ್ಥಳ ನೀಡಬೇಕೆಂದು ಒತ್ತಾಯಿಸಿ ದಲಿತ ಸಮುದಾಯದವರು ಉಪ ವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿದರು.

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ದಸಂಸ ತಾಲ್ಲೂಕು ಸಂಚಾಲಕ ಜಿ.ಸಿ.ತಿಮ್ಮಯ್ಯ ಮಾತನಾಡಿ, ರುದ್ರಭೂಮಿ ಇಲ್ಲದ ಗ್ರಾಮಗಳಿಗೆ ಸರ್ಕಾರದಿಂದ ಶಾಶ್ವತ ರುದ್ರಭೂಮಿ ಕಾಯ್ದಿರಿಸಬೇಕು. ಬಡತನ ರೇಖೆಯಿಂದ ಕೆಳಗಿರುವ ಕುಟುಂಬಗಳಿಗೆ ಪಡಿತರ ಚೀಟಿ ನೀಡಬೇಕು. ಬಗರ್ಹುಕುಂ ಸಾಗುವಳಿದಾರರಿಗೆ ಸಾಗುವಳಿ ಪತ್ರ ನೀಡಬೇಕೆಂದು ಒತ್ತಾಯಿಸಿದರು.

ಇದಕ್ಕು ಮುನ್ನ ಪುರಭವನದಿಂದ ಹೊರಟ ದಲಿತರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ ಘೋಷಣೆ ಕೂಗಿದರು.

ವಿವಿಧ ಗ್ರಾಮಗಳ ಮುಖಂಡರಾದ ಎನ್.ನಾಗರಾಜು, ಪಿ.ಸಿ.ನಾಗಭೂಷಣ್, ಎಂ.ಮಹೇಶ್, ಬ್ರಹ್ಮಸಮುದ್ರ ಕರಿಯಣ್ಣ, ದೊಡ್ಡಮಾಲೂರು ಹನುಮಂತರಾಯಪ್ಪ, ತಿಪ್ಪಾಪುರ ಶ್ರೀರಾಮಪ್ಪ, ಬೆಲ್ಲದಮಡು ಸಿದ್ದಗಂಗಯ್ಯ, ಕಸಾಪುರ ದಾನಪ್ಪ, ಮಾಯಗೊಮಡನಹಳ್ಳಿ ರಂಗನಾಥ, ಕಾಟಗೊಂಡನಹಳ್ಳಿಮಂಜುನಾಥ,ತಿಪ್ಪಾಪುರನಾಗರತ್ನಮ್ಮಪುರವರಪುಟ್ಟಣ್ಣ,ಗೋಪಗೊಂಡನಹಳ್ಳಿ ಮಲೇರಂಗಯ್ಯ, ಬೆಂಕಿಪುರ ಸಿದ್ದಪ್ಪ, ಗೂಬಲಗುಟ್ಟೆ ಅಂಜಿನಪ್ಪ, ಕಂಬದಹಳ್ಳಿ ರಾಮಕೃಷ್ಣಯ್ಯ,ರೆಡ್ಡಿಹಳ್ಳಿನಾಗರಾಜು,ನೀರಕಲ್ಲುನರಸಿಂಹಯ್ಯ,ಶ್ರಾವಂಡನಹಳ್ಳಿಸಿದ್ದಲಿಂಗಯ್ಯ,ಗಂಜಲಗುಂಟೆ ಅಂಜಿನಪ್ಪ, ಕವಣದಾಲ ಕಣಿಮಯ್ಯ, ಮುದ್ದಹನುಮಯ್ಯ, ಈಶ್ವರಪ್ಪ ಮತ್ತಿತರರು ಪ್ರತಿಭಟನೆನೇತೃತ್ವ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.