ಶನಿವಾರ, ಜನವರಿ 18, 2020
26 °C

ಸ್ಮಾರಕವಾಗಿ ನಿಜಲಿಂಗಪ್ಪ ನಿವಾಸ: ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಾಜಿ ಮುಖ್ಯಮಂತ್ರಿ ದಿ. ಎಸ್‌.ನಿಜಲಿಂಗಪ್ಪ ಅವರ ಚಿತ್ರದುರ್ಗದ ನಿವಾಸವನ್ನು ಸ್ಮಾರಕವಾಗಿ ಅಭಿವೃದ್ಧಿ­ಪಡಿಸ­ಲಾಗುವುದು ಎಂದು ಮುಖ್ಯ­ಮಂತ್ರಿ ಸಿದ್ದರಾಮಯ್ಯ ಹೇಳಿದರು.ನಿಜಲಿಂಗಪ್ಪನವರ 111ನೇ ಜನ್ಮ­ದಿನಾಚರಣೆ ನಿಮಿತ್ತ ವಿಧಾನಸೌಧದ ಆವರಣದಲ್ಲಿರುವ ನಿಜಲಿಂಗಪ್ಪ ಪ್ರತಿಮೆಗೆ ಮಂಗಳವಾರ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ನಿವಾಸವನ್ನು ಸರ್ಕಾರದ ವಶಕ್ಕೆ ನೀಡಲು ರೂ. 2 ಕೋಟಿ  ಕೊಡುವಂತೆ ಅವರ ಕುಟುಂಬದವರು ಬೇಡಿಕೆ ಇಟ್ಟಿದ್ದರು. ಆ ಮೊತ್ತ  ನೀಡಿ ಮನೆಯನ್ನು ವಶಕ್ಕೆ ಪಡೆಯಲಾಗುವುದು ಎಂದು ತಿಳಿಸಿದರು.ನಿಗಮ – ಮಂಡಳಿಗಳಿಗೆ ಅಧ್ಯಕ್ಷರನ್ನು ನೇಮಕ ಮಾಡುವ ಪ್ರಕ್ರಿಯೆ ಶುರುವಾಗಿದ್ದು, ಆದಷ್ಟು ಬೇಗ ಪೂರ್ಣವಾಗಲಿದೆ ಎಂದರು.

ಸಮಾಜ ಕಲ್ಯಾಣ ಸಚಿವ ಎಚ್‌.ಆಂಜ­­ನೇಯ ಮಾತನಾಡಿ, ನಿಜಲಿಂಗಪ್ಪ ಸಮಾಧಿ ಸ್ಥಳವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಲಾಗು­ವುದು ಎಂದು ತಿಳಿಸಿದರು.ವಿಧಾನಸೌಧದ ಆವರಣದಲ್ಲಿರುವ ಪ್ರತಿಮೆ ನಿಜಲಿಂಗಪ್ಪ ಅವರನ್ನು ಹೋಲುವುದಿಲ್ಲ. ಹೀಗಾಗಿ ಅದನ್ನು ಬದಲಾಯಿಸಬೇಕು ಎಂದು ಈ ಸಂದರ್ಭದಲ್ಲಿ ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್ ಅವರು ಮುಖ್ಯಮಂತ್ರಿಗೆ ಮನವಿ ಮಾಡಿದರು.

ಪ್ರತಿಕ್ರಿಯಿಸಿ (+)