ಶನಿವಾರ, ಜನವರಿ 18, 2020
26 °C

ಸ್ವದೇಶಿ ನಿರ್ಮಿತ ಲಕ್ಷ್ಯ-2: ಮತ್ತೆ ಯಶಸ್ವಿ ಪ್ರಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಲಸೋರ್ (ಒಡಿಶಾ) (ಪಿಟಿಐ): ಸ್ವದೇಶಿ ನಿರ್ಮಿತ, ಚಾಲಕ ರಹಿತ ಯುದ್ಧ ವಿಮಾನ (ಪಿಟಿಎ) ಲಕ್ಷ್ಯ- 2 ಇಲ್ಲಿನ ಪರೀಕ್ಷಾ ವಲಯದಲ್ಲಿ (ಟಿಐಆರ್) ಶುಕ್ರವಾರ ಎರಡನೇ ಬಾರಿ ಯಶಸ್ವಿಯಾಗಿ ಪರೀಕ್ಷಾರ್ಥ ಹಾರಾಟ ನಡೆಸಿತು.ಟಿಐಆರ್‌ನ ಉಡಾವಣಾ ಸಂಕೀರ್ಣ 3ರಲ್ಲಿ ಸಂಚಾರಿ ವಾಹನದ ಮೂಲಕ ಲಕ್ಷ್ಯದ 11ನೇ ಪ್ರಾತ್ಯಕ್ಷಿಕೆ ನಡೆಯಿತು. ಎರಡು ದಿನಗಳ ಹಿಂದಷ್ಟೇ ಲಕ್ಷ್ಯವು ಇಂಥದ್ದೇ ಪ್ರಯೋಗಕ್ಕೆ ಒಳಪಟ್ಟಿತ್ತು.

ಸಮುದ್ರದ ಮೇಲ್ಮೈಯಿಂದ ಸುಮಾರು 15 ಮೀಟರ್ ಎತ್ತರದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಯಶಸ್ವಿ ಹಾರಾಟ ನಡೆಸಿ ಇದು ತನ್ನ ಸಂಪೂರ್ಣ ಸಾಮರ್ಥ್ಯವನ್ನು ಅನಾವರಣಗೊಳಿಸಿತು.ರಕ್ಷಣಾ ಸಂಶೋಧನಾ ಹಾಗೂ ಅಭಿವೃದ್ಧಿ ಸಂಸ್ಥೆಯ (ಡಿಆರ್‌ಡಿಒ) ಪ್ರಯೋಗಾಲಯವಾದ, ಬೆಂಗಳೂರು ಮೂಲದ ವೈಮಾನಿಕ ಅಭಿವೃದ್ಧಿ  ಸಂಸ್ಥೆಯು (ಎಡಿಎ) ಈ ಯುದ್ಧ ವಿಮಾನವನ್ನು ವಿನ್ಯಾಸ ಮಾಡಿ ಅಭಿವೃದ್ಧಿಪಡಿಸಿದೆ.ಈಗಾಗಲೇ ಎಡಿಎ, ಬೆಂಗಳೂರಿನ ಹೊಸಕೋಟೆ ಬಳಿ ಸಣ್ಣ ಹಾಗೂ ಅತಿ ಸಣ್ಣ ಯುದ್ಧ ವಿಮಾನಗಳಾದ ಬ್ಲ್ಯಾಕ್ ಕೈಟ್, ಗೋಲ್ಡನ್ ಹಾಕ್ ಹಾಗೂ ಪುಷ್ಪಕ್‌ಗಳ ಪರೀಕ್ಷಾರ್ಥ ಹಾರಾಟ ನೆರವೇರಿಸಿದೆ.    

ಪ್ರತಿಕ್ರಿಯಿಸಿ (+)