ಬುಧವಾರ, ಏಪ್ರಿಲ್ 14, 2021
31 °C

ಸ್ವದೇಶಿ ಸಂಕ್ಷಿಪ್ತ ಸುದ್ದಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಜಿ ಸೇನಾಧಿಕಾರಿಗೆ ಶಿಕ್ಷೆ

ನವದೆಹಲಿ (ಪಿಟಿಐ):
ವಿದೇಶಾಂಗ ಇಲಾಖೆಗೆ ತಪ್ಪು ಮಾಹಿತಿ ನೀಡಿ ಏಳು ಜನರನ್ನು ವಿದೇಶಕ್ಕೆ ಕೊಂಡೊಯ್ದ ಉಚ್ಚಾಟಿತ ಸೇನಾಧಿಕಾರಿಯೊಬ್ಬರಿಗೆ ದೆಹಲಿ ನ್ಯಾಯಾಲಯ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.ಇಲ್ಲಿನ ವಿಶೇಷ ಸಿಬಿಐ ನ್ಯಾಯಾಧೀಶ ಮನೋಜ್ ಜೈನ್ ಅವರು ಈ ತೀರ್ಪು ನೀಡಿದ್ದಾರೆ. ಉಚ್ಚಾಟಿತ ಸೇನಾಧಿಕಾರಿ ಸುರೇಶ್ ಬಾಬು ಎಂಬುವರು ವಿದೇಶಾಂಗ ವ್ಯವಹಾರಗಳ ಸಚಿವಾಯಲಕ್ಕೆ ತಪ್ಪು ಮಾಹಿತಿ ನೀಡುವ ಮೂಲಕ 2007ರಲ್ಲಿ ಜರ್ಮನಿಯಲ್ಲಿ ನಡೆದ ಬರ್ಲಿನ್ ಸಂಗೀತೋತ್ಸವದಲ್ಲಿ ಪಾಲ್ಗೊಂಡಿದ್ದರು.ತಾವೆಲ್ಲಾ ಅಲ್ಲಿಗೆ ಹೊರಟಿರುವ ಅಧಿಕೃತ ಸದಸ್ಯರು ಎಂಬ ಸೋಗಿನಲ್ಲಿ  ಜನರನ್ನು ಕರೆದುಕೊಂಡು ಹೋಗಿದ್ದರು. ತಮ್ಮಂದಿಗೆ ಜರ್ಮನಿಗೆ ಕೊಂಡೊಯ್ದ ಜನರ ದಾಖಲೆಗಳ ಬಗ್ಗೆ ಅವರು ಭಾರತೀಯ ವಿದೇಶಾಂಗ ಇಲಾಖೆಗೆ ತಪ್ಪು ಮಾಹಿತಿ ನೀಡಿ ಅವರು ಪಾಸ್‌ಪೋರ್ಟ್ ಪಡೆಯುವಂತೆ ಸಹಾಯ ಮಾಡ್ದ್ದಿದಲ್ಲದೇ ವಂಚನೆ ಆರೋಪವೂ ಅವರ ಮೇಲಿತ್ತು.ಕೊಲೆ ಆರೋಪ: ಶಾಸಕನ ಬಂಧನ

ಪಟ್ನಾ (ಐಎಎನ್‌ಎಸ್):
ಬಿಹಾರದ ಕತಿಯಾರ್ ಜಿಲ್ಲೆಯಲ್ಲಿ ತನ್ನ ಉದ್ಯೋಗಿಯನ್ನು ಹತ್ಯೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಬಿಜೆಪಿ ಶಾಸಕ ಅಶೋಕ್ ಅಗರವಾಲ್ ಅವರನ್ನು ಪೊಲೀಸರು ಬಂದಿಸಿದ್ದಾರೆ.ಕೊಲೆ ಆರೋಪವಿರುವ ಶಾಸಕನನ್ನು ಬಂಧಿಸಿಸುವಂತೆ ವಿರೋಧ ಪಕ್ಷಗಳು ಹಾಗೂ ಮೃತ ಉದ್ಯೋಗಿಯ ಕುಟುಂಬದವರು ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಿದ್ದರು. ಬಂಧಿತ ಶಾಸಕನನ್ನು ಕೋರ್ಟ್‌ಗೆ ಹಾಜರುಪಡಿಸಲಾಗುವುದು ಎಂದು ಉಪ-ವಿಭಾಗಿಯದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಘಟನೆ ವಿವರ: ಶಾಸಕ ಅಶೋಕ್ ಅಗರವಾಲ್ ಅವರು  ತಮ್ಮ ನಿವಾಸ ಹಾಗೂ ಪೆಟ್ರೋಲ್ ಬಂಕ್‌ನಲ್ಲಿ  ಭದ್ರತಾ ಸಿಬ್ಬಂದಿಯಾಗಿದ್ದ ಧೀರಜ್ ಮಹೊತ್ ಅವರನ್ನು ಕೊಲೆ ಮಾಡಿದ ಎದುರಿಸುತ್ತಿದ್ದರು. ಕೊಲೆಯಾದ ಧೀರಜ್ ಸಹೋದರರು ಶಾಸಕ ಅಶೋಕ್ ಅಗರವಾಲ್ ಅವರೇ ಈ ಕೊಲೆ ಮಾಡಿದ್ದಾರೆ ಎಂದು ದೂರು ನೀಡಿದ್ದರು.

ಶಾಸಕ ಅಗರವಾಲ್ ಈ ಆರೋಪವನ್ನು ನಿರಾಕರಿಸಿದ್ದು, ಆಕಸ್ಮಿಕವಾಗಿ ಮೆಹತೊ ತಮ್ಮ ಒಡೆತನದ ಪೆಟ್ರೋಲ ಬಂಕ್‌ನಲ್ಲಿ ಮೃತಪಟ್ಟಿದ್ದಾರೆ ಎಂದು ಹೇಳಿದ್ದಾರೆ.ನಕ್ಸಲರ ಗುಂಡಿಗೆ ಇಬ್ಬರು ಬಲಿ

ರಾಂಚಿ  (ಪಿಟಿಐ):
ಜಾರ್ಖಂಡ್‌ನ ಕುಂತಿ ಜಿಲ್ಲೆಯ ಬಾಕೊಪ್ ಗ್ರಾಮದಲ್ಲಿ ಮಾವೊ ಗೆರಿಲ್ಲಾ ಪಡೆ ಹಾಗೂ ಕೇಂದ್ರ ಮೀಸಲು ಪೊಲೀಸ್ ಪಡೆಯ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು  ಸಿಆರ್‌ಪಿಎಫ್‌ನ ಸಿಬ್ಬಂದಿ ಬಲಿ ಯಾಗಿದ್ದಾರೆ. ಐವರು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ತೀವ್ರವಾಗಿ ಗಾಯಗೊಂಡಿದ್ದ ಇಬ್ಬರು ಸಿಆರ್‌ಪಿಎಫ್ ಸಿಬ್ಬಂದಿ ರಾಂಚಿ ಯ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ಡಿಜಿಪಿ ಜಿ.ಎಸ್.ರಾತ್ ಹೇಳಿದ್ದಾರೆ.ಹೆಚ್ಚಿದ ಸಾವು: ಸುಪ್ರೀಂ ಕಳವಳ

ನವದೆಹಲಿ (ಪಿಟಿಐ):
ಅಮರನಾಥ ಯಾತ್ರೆಯ ಸಂದರ್ಭದಲ್ಲಿ  ಸಾವು -ನೋವುಗಳ ಪ್ರಕರಣ ಹೆಚ್ಚುತ್ತಿರುವ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ. ಯಾತ್ರಾರ್ಥಿಗಳ  ಸಾವಿನ ಸಂಖ್ಯೆ 97ಕ್ಕೆ ಏರಿಕೆ ಆಗಿರುವ ಬಗ್ಗೆ ಜಮ್ಮು -ಕಾಶ್ಮೀರ ಸರ್ಕಾರವನ್ನು ತರಾಟೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್ ಅದಷ್ಟು ಬೇಗ ಯಾತ್ರಿಗಳಿಗೆ ವೈದ್ಯಕೀಯ ನೆರವು ನೀಡುವಂತೆ ಸೂಚಿಸಿದೆ.ಮಾಧ್ಯಮಗಳ ವರದಿಯನ್ನು ಆಧರಿಸಿ ಸ್ವಯಂ ವಿಚಾರಣೆಗೆ ಕೈಗೆತ್ತಿಕೊಂಡ  ಬಿ.ಎಸ್. ಚೌಹಣ್  ಮತ್ತು ಸ್ವತಂತ್ರ ಕುಮಾರ್ ಅವರನ್ನು ಒಳಗೊಂಡ ಪೀಠ ಕೇಂದ್ರ, ಉತ್ತರ ಪ್ರದೇಶ ಹಾಗೂ ಪಂಜಾಬ್ ಸರ್ಕಾರಗಳು ಸಹ ಅವಶ್ಯಕತೆ ಬಿದ್ದರೆ ಯಾತ್ರಾರ್ಥಿಗಳಿಗೆ ವೈದ್ಯರ ತಂಡವನ್ನು ಕಳುಹಿಸಿ ಕೊಡುವಂತೆ ಹೇಳಿದೆ.`ವಿಶೇಷ ನ್ಯಾಯಾಲಯ ಅಸಾಧ್ಯ~

ತಿರುವನಂತಪುರ (ಪಿಟಿಐ): 
ರಾಜಕೀಯ ಕೊಲೆ ಪ್ರಕರಣಗಳ ವಿಚಾರಣೆಗೆ ವಿಶೇಷ ಕೋರ್ಟ್ ರಚನೆ ಮಾಡುವುದು   ಅಸಾಧ್ಯ ಎಂದು ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಹೇಳಿದ್ದಾರೆ.ರಾಜಕೀಯ ಕೊಲೆ ಪ್ರಕರಣಗಳ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ರಚನೆ ಅಗತ್ಯ ಎಂದು ಐಯುಎಂಎಲ್  ಶಾಸಕ ಕೆ.ಎನ್.ಎ ಖಾದರ್ ಅವರು ವಿಧಾನ ಸಭೆಯಲ್ಲಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಚಾಂಡಿ ಅಪರಾಧ ದಂಡ ಪ್ರಕ್ರಿಯೆ ಸಂಹಿತೆಯಲ್ಲಿ `ರಾಜಕೀಯ ಕೊಲೆ~ ಎಂಬ ಪದಕ್ಕೆ ವಿಶೇಷವಾದ ಪ್ರತ್ಯೇಕ ವಿವರಣೆ ಇಲ್ಲ ಎಂದು ಹೇಳಿದರು.ತಮಿಳುನಾಡಿಗೆ ಅನುಮತಿ

ನವದೆಹಲಿ (ಪಿಟಿಐ):
ಮುಲ್ಲಪೆರಿಯಾರ್ ಅಣೆಕಟ್ಟು ನಿರ್ವಹಣೆ ಹಾಗೂ ಸ್ವಚ್ಛತಾ ಕಾಮಗಾರಿ ಕಾರ್ಯಕೈಗೊಳ್ಳಲು ತಮಿಳುನಾಡು ಸರ್ಕಾರಕ್ಕೆ ಅಡ್ಡಿಯುಂಟು ಮಾಡಬಾರದು ಎಂದು ಕೇರಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ.ನ್ಯಾ.ಡಿ.ಕೆ.ಜೈನ್ ಅವರ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠ ಈ ನಿರ್ದೇಶನ ನೀಡಿದೆ. ಮೂವರು ಸದಸ್ಯರಗಳ ಸಮಿತಿಯ ಮೇಲ್ವಿಚಾರಣೆಯಲ್ಲಿ ಅಣೆಕಟ್ಟಿನ ನಿರ್ವಹಣೆ ಹಾಗೂ ಸ್ವಚ್ಛತೆ ಕಾರ್ಯ ಕೈಗೊಳ್ಳುವಂತೆ ತಮಿಳುನಾಡು ಸರ್ಕಾರಕ್ಕೆ ಸೂಚಿಸಿದೆ.

 

ವಿದ್ಯುತ್ ಘಟಕದಲ್ಲಿ ಅವಗಢ- 5 ಸಾವು

ರಾಯಪುರ (ಐಎಎನ್‌ಎಸ್):  ಛತ್ತಿಸ್‌ಗಡದ ರಾಯಗಡದ ಜಿಲ್ಲೆಯ ಕೊರಬಾ ವೆಸ್ಟ್ ಪವರ್ ಕಂಪೆನಿಯಲ್ಲಿ ನಡೆಯುತ್ತಿದ್ದ ಕಟ್ಟಡದ ಕಾಮಗಾರಿ ವೇಳೆ ಅವಗಢ ಸಂಭವಿಸಿ ಐದು ಮಂದಿ ಮೃತಪಟ್ಟು, ಹಲವಾರು ಮಂದಿ ಗಾಯಗೊಂಡಿದ್ದಾರೆ.ಬಾಡೆ ಬಾಂದಾರ್ ಗ್ರಾಮದಲ್ಲಿರುವ ಕೆಡಬ್ಲ್ಯುಪಿಸಿಎಲ್‌ನ ಘಟಕದಲ್ಲಿ ಈ ಘಟನೆ ನಡೆದಿದೆ.

ಆರೋಪಿ ಶರಣು

ಲಖನೌ (ಪಿಟಿಐ): ಗುವಾಹಟಿಯಲ್ಲಿ ಹದಿ ಹರೆಯದ ಯುವತಿಯ ಅತ್ಯಾಚಾರ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಅಮರ್‌ಜ್ಯೋತಿ ಕಲಿತಾ ವಾರಣಾಸಿ ಪೊಲೀಸರಿಗೆ ಶರಣಾಗತನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.