ಮಂಗಳವಾರ, ಜನವರಿ 28, 2020
19 °C

ಸ್ವರ್ಣ ಮಂದಿರದ ಟೀಕೆ: ಭಾರತ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಅಮೆರಿಕದ ಪ್ರಸಿದ್ಧ ಟಿ.ವಿ ಕಾರ್ಯಕ್ರಮವೊಂದರಲ್ಲಿ ನಿರೂಪಕರಾದ ಜೇ ಲೆನೊ ಭಾರತದ  ಸ್ವರ್ಣ ಮಂದಿರದ ಬಗ್ಗೆ ಲಘುವಾಗಿ ಮಾತನಾಡಿದ ಬಗ್ಗೆ ಭಾರತ ಬಲವಾಗಿ ಆಕ್ಷೇಪಿಸಿದೆ.ಎನ್‌ಬಿಸಿ ಚಾನೆಲ್‌ನಲ್ಲಿ ಪ್ರಸಾರ ವಾಗುವ `ದ ಟುನೈಟ್ ಶೋ~ ಕಾರ್ಯಕ್ರಮದಲ್ಲಿ ಲೆನೊ ಅಮೃತಸರದ ಸಿಖ್‌ರ ಪವಿತ್ರ ಸ್ವರ್ಣ ಮಂದಿರದ ದೃಶ್ಯ ತೋರಿಸಿ ಅಮೆರಿಕದ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಮಿಟ್ ರೊಮ್ನೆ ಅವರ ಬೇಸಿಗೆಯ ನಿವಾಸವಾಗಲಿದೆ ಎಂದಿದ್ದರು.ಭಾನುವಾರ ಇಲ್ಲಿಗೆ ಭೇಟಿ ನೀಡಿದ್ದ ಅನಿವಾಸಿ ಭಾರತೀಯರ ವ್ಯವಹಾರಗಳ ಸಚಿವ ವಯಲಾರ್ ರವಿ ಈ ಟೀಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವಿಷಯವನ್ನು ಅಮೆರಿಕದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಗಮನಕ್ಕೆ ತರುವಂತೆ ಭಾರತದ ಅಮೆರಿಕ ರಾಯಭಾರಿ ನಿರುಪಮಾ ರಾವ್ ಅವರಿಗೆ ಸೂಚಿಸಿದ್ದಾರೆ.

ಪ್ರತಿಕ್ರಿಯಿಸಿ (+)