ಸ್ವಸ್ಥ ಸಮಾಜ ನಿರ್ಮಾಣ- ಯುವಪೀಳಿಗೆ ಪಾತ್ರ ಮಹತ್ವದ್ದು

ಗುರುವಾರ , ಮೇ 23, 2019
32 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಸ್ವಸ್ಥ ಸಮಾಜ ನಿರ್ಮಾಣ- ಯುವಪೀಳಿಗೆ ಪಾತ್ರ ಮಹತ್ವದ್ದು

Published:
Updated:

ಕಾರ್ಕಳ: `ಸ್ವಸ್ಥ ಸಮಾಜ ನಿರ್ಮಾಣದಲ್ಲಿ ನವಪೀಳಿಗೆಯ ಪಾತ್ರ ಮಹತ್ವದ್ದು~ ಎಂದು ರೋಟರಿ ಅಂತರರಾಷ್ಟ್ರೀಯ ಜಿಲ್ಲೆ 3180ಯ ಗವರ್ನರ್ ಎಚ್.ಎಲ್.ರವಿ ತಿಳಿಸಿದರು.ಇಲ್ಲಿನ ರೋಟರಿ ಕ್ಲಬ್‌ಗೆ ಇತ್ತೀಚೆಗೆ ಅಧಿಕೃತ ಸಂದರ್ಶನ ನೀಡಿದ ಅವರು ನಂತರ ನಡೆದ ಸಮಾರಂಭದಲ್ಲಿ ಮಾತನಾಡಿ ಸಮಾಜದಲ್ಲಿ ಆವರಿಸಿದ ಭ್ರಷ್ಟಾಚಾರ, ಅನಿಷ್ಟಗಳ ನಿರ್ಮೂಲನ, ಸ್ವಸ್ಥ ಹಾಗೂ ಸ್ವಾವಲಂಬಿ ಸಮಾಜದ ನಿರ್ಮಾಣಕ್ಕೆ ಯುವಕರು ಪ್ರಯತ್ನಶೀಲರಾಗಬೇಕು.ಅಣ್ಣಾಹಜಾರೆಯವರ ಹೋರಾಟ ಗಾಂಧಿತತ್ವಗಳನ್ನು ಪುನಶ್ಚೇತನಗೊಳಿಸಿದೆ. ಇದರ ಪರಿಣಾಮವಾಗಿ ಯುವಜನತೆ ಹಾಗೂ ಪ್ರಜ್ಞಾವಂತ ನಾಗರಿಕರಲ್ಲಿ ದೇಶಪ್ರೇಮ, ಸಾಮಾಜಿಕ ಹೊಣೆಗಾರಿಕೆಯನ್ನು ಜಾಗೃತಗೊಳಿಸಿದಂತಾಗಿದೆ ಎಂದರು.ರೋಟರಿ ಅಧ್ಯಕ್ಷ ಅಭಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ವಲಯ ಸಹಾಯಕ ಗವರ್ನರ್ ಕೆ.ಆರ್.ಪಾಟ್ಕರ್ ಕ್ಲಬ್ ಪತ್ರಿಕೆ `ಸರ್ವಿಸ್~ ಅನಾವರಣಗೊಳಿಸಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.  ವಲಯ ಸೇನಾನಿ ಎಂ.ಜಿ.ನಾಗೇಂದ್ರ ಕ್ಲಬ್ ಸದಸ್ಯರ ಕೈಪಿಡಿ ಬಿಡುಗಡೆಗೊಳಿಸಿದರು.ಮಾಜಿ ಸಹಾಯಕ ಗವರ್ನರ್ ಪ್ರಕಾಶ್ ಆಚಾರ್ಯ, ಪ್ರಭಾತ್‌ಕುಮಾರ್, ಭರತ್‌ರಾಜ್, ಮಾಜಿ ಸಹಾಯಕ ಗವರ್ನರ್ ಎಂ.ಎನ್.ಧನಕೀರ್ತಿ, ಕಾರ್ಯದರ್ಶಿ ಡಿ.ಸಿ ಶಾಂತಪ್ಪ, ಮೋಹನ್ ಪಡಿವಾಳ್, ಜ್ಯೋತಿ ಪದ್ಮನಾಭ ಇದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry