ಮಂಗಳವಾರ, ಮಾರ್ಚ್ 9, 2021
31 °C

ಸ್ವಾತಂತ್ರ್ಯ ದಿನ: ವಿಶ್ವಸಂಸ್ಥೆಯಲ್ಲಿ ಸುಬ್ಬುಲಕ್ಷ್ಮಿಗೆ ಗೌರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ವಾತಂತ್ರ್ಯ ದಿನ: ವಿಶ್ವಸಂಸ್ಥೆಯಲ್ಲಿ ಸುಬ್ಬುಲಕ್ಷ್ಮಿಗೆ ಗೌರವ

ವಿಶ್ವಸಂಸ್ಥೆ (ಪಿಟಿಐ): ಭಾರತದ 70ನೇ ಸ್ವಾತಂತ್ರ್ಯೋತ್ಸವ ದಿನವಾದ ಆಗಸ್ಟ್‌ 15ರಂದು ವಿಶ್ವಸಂಸ್ಥೆಯ ಮುಖ್ಯ ಕಚೇರಿಯಲ್ಲಿ ನಡೆಯುವ ಸಾಮಾನ್ಯ ಅಧಿವೇಶನದಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕಿ ಎಂ.ಎಸ್‌.ಸುಬ್ಬುಲಕ್ಷ್ಮಿ ಅವರಿಗೆ ವಿಶೇಷ ಗೌರವ ಸಲ್ಲಿಸಲಾಗುವುದು.ಅವರ ಜನ್ಮ ಶತಮಾನೋತ್ಸವ ಅಂಗವಾಗಿ ಅಂದು ಸಂಗೀತ ನಿರ್ದೇಶಕ ಎ.ಆರ್‌.ರಹಮಾನ್‌ ಅವರು ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಇದಲ್ಲದೆ ಆಗಸ್ಟ್‌ 15ರಿಂದ 19ರವರೆಗೆ ಸುಬ್ಬುಲಕ್ಷ್ಮಿ ಅವರ ಛಾಯಾಚಿತ್ರಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ಸಯ್ಯದ್‌ ಅಕ್ಬರುದ್ದೀನ್‌ ಟ್ವೀಟ್‌ ಮಾಡಿದ್ದಾರೆ.ಸುಬ್ಬುಲಕ್ಷ್ಮಿ ನಂತರ ಎ.ಆರ್‌ ರಹಮಾನ್‌ ಅವರು ವಿಶ್ವಸಂಸ್ಥೆಯಲ್ಲಿ ಕಾರ್ಯಕ್ರಮ ನೀಡುವ ಅವಕಾಶ ಪಡೆದ  ಭಾರತದ ಎರಡನೇ ಕಲಾವಿದರಾಗಿದ್ದಾರೆ.  ತಮ್ಮ ಹಾಡುಗಳ  ಮೂಲಕ ರಹಮಾನ್‌ ಅವರು ಸುಬ್ಬುಲಕ್ಷ್ಮಿ ಅವರಿಗೆ ಗೌರವಾರ್ಪಣೆ ಮಾಡಲಿದ್ದಾರೆ.1966ರಲ್ಲಿ ವಿಶ್ವಸಂಸ್ಥೆಯ ಮುಖ್ಯಕಚೇರಿಯಲ್ಲಿ ಸುಬ್ಬುಲಕ್ಷ್ಮಿ ಸಂಗೀತ ಕಾರ್ಯಕ್ರಮ ನೀಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.