ಮರವಂತೆ (ಬೈಂದೂರು): ಸ್ವಾತಂತ್ರ್ಯ ಹೋರಾಟ ಕಾಲದ ತಲೆಮಾರು ಈಗ ವಿರಳವಾಗುತ್ತಿದ್ದು, ಎಳೆಯರಿಗೆ ಅದರ ಪರಿಚಯವಿಲ್ಲ. ಕನಿಷ್ಠ ಸ್ವಾತಂತ್ರ್ಯ ದಿನವಾದರೂ ಸ್ವಾತಂತ್ರ್ಯ ಹೋರಾಟಗಾರನ್ನು ಸ್ಮರಿಸಬೇಕು ಎಂದು ಮರವಂತೆಯ ಸೇವಾ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ಜತೀಂದ್ರ ಮರವಂತೆ ಹೇಳಿದರು.

ವೇದಿಕೆಯ ಆಶ್ರಯದಲ್ಲಿ ಬುಧವಾರ ನಡೆದ ಸ್ವಾತಂತ್ರ್ಯೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಬೆಂಗಳೂರಿನ ರೋಟರಿ ಓರ್ಚರ್ಡ್ಸ್ ಉಚಿತವಾಗಿ ನೀಡಿದ 40 ಆಂಗ್ಲ-ಕನ್ನಡ ಪದಕೋಶಗಳನ್ನು ಇಲ್ಲಿನ ಸರ್ಕಾರಿ ಪ್ರೌಢಶಾಲೆಯ ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆ ವಿತರಿಸಿದರು.

ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ವೇಷಧಾರಣೆ, ದೇಶಭಕ್ತಿ ಗೀತೆ ಗಾಯನ ಸ್ಪರ್ಧೆ ನಡೆಸಿ, ವಿಜೇತರಿಗೆ ಬಹುಮಾನ ವಿತರಿಸ ಲಾಯಿತು. ಕಳೆದ ವಾರ್ಷಿಕ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾದ ಪ್ರತಿಭಾನ್ವಿತರನ್ನು ಪುರಸ್ಕರಿಸಲಾಯಿತು.

ಸಾಧನಾ ಸ್ಥಾಪಕಾಧ್ಯಕ್ಷ ಎಸ್. ಜನಾರ್ದನ ಸ್ವಾಗತಿಸಿದರು. ಸದಸ್ಯ ನಾಗೇಶ ಎಸ್. ರಾವ್ ವಂದಿಸಿದರು. ಕಾರ್ಯದರ್ಶಿ ರತ್ನಾಕರ ಬಿಲ್ಲವ, ಪ್ರೌಢಶಾಲಾ ಶಿಕ್ಷಕ ಎಚ್. ಸುಬ್ಬಣ್ಣ ಉಡುಪ ಇತರರು ಸಮಾರಂಭದಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.