ಮಂಗಳವಾರ, ಜನವರಿ 28, 2020
25 °C

ಸ್ವಾಮಿ ನಂ ಭಾಷೆ ಇರೋದೇ ಹೀಗೆ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಲೋ  ಮಗಾ, ಎಲ್‌ಕೆಬಿ ತುಂಬಾ ಬೈದ ಕಣೋ.~

`ಯಾಕೋಮ್ಮಾ, ಏನಂತೆ ಅವನಿಗೆ?~

`ನಾವು ಸರಿಯಾಗಿ ಮಾತಾಡಲ್ವಂತೆ~

`ಅರೆ, ಇನ್ನೆಂಗೆ ಮಾತಾಡ್ಬೇಕಂತೆ ಅವನಿಗೆ?~`ಇಂಗ್ಲಿಷ್, ಹಿಂದಿ ಮಿಕ್ಸ್ ಮಾಡ್ಬಾರ್ದಂತೆ, ಜೋರಾಗಿ ಮಾತಾಡ್ಲೂ ಬಾರದಂತೆ~

`ಇದೊಳ್ಳೆ ಗೋಳಲ್ಲೋ ಮಚ್ಚಾ, ಅವನ ಮುಂದೆ ಕೆಮ್ಮಂಗೂ ಇಲ್ವೇನೋ~`ಏನೋ ಹೋಗ್ಲಿ ಮೇಸ್ಟ್ರು ಅಂತ ಸುಮ್ನೆ ಕೇಳ್ಕೊಂಡು ಬಂದೆ ಮಚ್ಚಾ. ಅವನೊಬ್ನೇ ಅಲ್ಲಾ ಕಣೋ, ಈ ಗೆಡ್ಡೆಗಳು ಸ್ವಲ್ಪ ಹಂಗೆ ಕಣೋ. ನೆನ್ನೆ ನಮ್ಮಪ್ಪಾನೂ ಅಂಗೆ ಬಯ್ದ ನೋಡು.ಹುಡುಗೀರ್ ಬಗ್ಗೆ ಮಾತಾಡ್ಬಾರ‌್ದಂತೆ, ಏನೇ, ಬಾರೆ, ಹೋಗೆ ಅಂತಾನೂ ಅನ್ಬಾರ್ದಂತೆ. ಏನಮ್ಮ, ಹೋಗಮ್ಮ, ಬಾರಮ್ಮ ಅನ್ಬೇಕಂತೆ. ಫೋನಲ್ಲೂ ಮಾತಾಡಬಾರ್ದಂತೆ, ಮೆಸೇಜೂ ಮಾಡ್ಬಾರ್ದಂತೆ. ಎಲ್ಲಾ ಲೆಕ್ಚರ್ ಕೊಡೋಕೆ ರೆಡಿ ಇರ್ತಾರೆ ನೋಡು. ಅಲ್ಲಾ ಗಿರಿ, ಬಾರಮ್ಮ, ಹೋಗಮ್ಮ ಅಂದ್ರೆ ಗುಗ್ಗು ಅನ್ಕೋಳಲ್ವೇನು ಹುಡುಗೀರು?~`ಲೋ ಮುಚ್ಚೋಮ್ಮ ಸುಧೀ, ನಿಮ್ಮಪ್ಪಂಗೇ ಅಂತೀಯಲ್ಲೋ, ಇನ್ನು ಮೇಸ್ಟ್ರುಗೆ ಬಿಡ್ತೀಯ. ಅವರು ಹೇಳಿದ್ರಲ್ಲಿ ತಪ್ಪೇನಿದೆ. ಎಲ್ಲಾರ್ಗೂ ಗೌರವ ಕೊಡೋದನ್ನು ಕಲಿತ್ಕೋ~.ಹುಡುಗೀರ‌್ಗೆ ಸೀರಿಯಸ್ ಆಗಿರೋರು ಇಷ್ಟಾ ಆಗ್ತಾರೆ ಕಣೋ. ಇಷ್ಟು ದಿನ ಕ್ಲೋಸ್ ಆಗಿ ಮಾತಾಡಿ ಯಾರನ್ನ ಬೀಳಿಸ್ಕೊಂಡೆ? ಇಲ್ಲಾ ತಾನೆ, ಈ ಥರನೋ ಟ್ರೈ ಮಾಡಿ ನೋಡು, ಬಿದ್ರೂ ಬೀಳಬೌದು.~`ಸರಿ ಮಗಾ ಅದೂ ಟ್ರೈ ಮಾಡೇ ಬಿಡೋಣ. ಏನಾಡ್ರೂ ಎಡವಟ್ಟಾದ್ರೆ, ನಿಂಗೈತೆ ಕಣ್ಲಾ~

ಕಾಲೇಜು ಶುರುವಾದ ಕೂಡಲೇ ರಂಗೇರಿತ್ತು. ಕಾಲೇಜು ಸ್ವಲ್ಪ ದಿನ ನಡೆಯುತ್ತಿದ್ದ ಹಾಗೇ ರಜಾ ಬೇಕು ಅಂತಾ ಮನಸ್ಸು ಬಯಸುತ್ತೆ. ರಜಾ ಬಂದ ಎರಡೇ ದಿನಕ್ಕೆ ಬೋರ್ ಆಗುತ್ತೆ.

ಕ್ಲಾಸಿಗೆ ಬಂಕ್ ಹೊಡೆದು ಪಿಕ್ಚರ್ ನೋಡೋದರಲ್ಲಿ ಇರೋ ಥ್ರಿಲ್, ಖಾಲಿ ಕೂತಿದ್ದಾಗ ಪಿಕ್ಚರ್‌ಗೆ ಹೋಗೋದ್ರಲ್ಲಿ ಇರೋಲ್ಲವಲ್ಲ. ಫ್ರೆಂಡ್ಸ್ ಜತೆ ಸಿನಿಮಾ ನೋಡೋ ಮಜಾ, ಫ್ಯಾಮಿಲಿ ಜತೆ ನೋಡದರಲ್ಲಿ ಇರಲ್ವಲ್ಲ. ಕಾಲೇಜು ಕ್ಯಾಂಪಸ್‌ನ ಭಾಷೆಯೇ ಬೇರೆ.ಕೊಳ್ಳೇಗಾಲದ `ಎನ್ ಡಾ~ ತಮಿಳ್ನನ್ನಡದಿಂದ ಹಿಡಿದು, ಮಚ್ಚಾ, ಮಗಾ, ಡುಬಾಕ್, ಗುಲ್ಡು ಅಂತಾ ಹುಡುಗರು ಮಾತನಾಡಿದರೆ, ಹುಡುಗಿಯರೂ ಕಮ್ಮಿ ಏನೂ ಇಲ್ಲ. `ಏನೇ ಮಗಳೇ~ ಅಂತಾ ಸ್ವಲ್ಪ ಡೀಸೆಂಟ್ ಆಗೇ ಮಾತಾಡ್ತಾರೆ. `ಕಮ್ ಯಾ~, `ಸಿಟ್ ಯಾ~ ಠಸ್, ಪುಸ್ ಇಂಗ್ಲಿಷ್ ಬಳಕೆಯಲ್ಲೂ ಇವರೇ ಮುಂದು. ಯಾಕೆಂದ್ರೆ ಎಕ್ಸಾಂನಲ್ಲಿ ಜಾಸ್ತಿ ಮಾರ್ಕ್ಸ್ ತಗೋಳೋದೂ ಇವರೇ ನೋಡಿ!ಆದರೆ ನಮ್ಮ ಸುಧೀರ್, ಗಿರೀಶ್ ಮಾತಾಡೋದು ಅವರ ಮೇಸ್ಟ್ರು, ಅಪ್ಪ ಅಮ್ಮಂಗೆ ಇಷ್ಟಾ ಆಗ್ತಾ ಇಲ್ಲ! ಇದು ಸುಧೀರ್, ಗಿರೀಶ್‌ರ ಕಥೆ ಮಾತ್ರವಲ್ಲ. ಎಲ್ಲರದೂ ಇದೇ ಸಮಸ್ಯೆ.ಆದರೆ ನಿಜಕ್ಕೂ ಮಾತಾಡೋದು ತಪ್ಪಾ. ಖಂಡಿತಾ ಅಲ್ಲ ಅನ್ನೋದು, ಹುಡುಗ- ಹುಡುಗೀರ ವಾದ. ಕಾಲೇಜಿನ ಕಾರಿಡಾರ್‌ನಲ್ಲಿ ನಿಂತರೆ ಸುಧೀ, ಗಿರಿ ಮಾತನಾಡಿಕೊಂಡ ರೀತಿಯ ಡೈಲಾಗ್‌ಗಳು ಕಮ್ಮಿ ಏನಿಲ್ಲ. ಲೈಬ್ರರಿಯಲ್ಲಿ ಪಿಸುಗುಟ್ಟುವ ಮಾತುಗಳಾದ್ರೆ, ಕ್ಯಾಂಟೀನ್‌ನಲ್ಲಿ ಒಂದು ಧಮ್ ಎಳೆದು ಜೋರಾಗೇ ಮಾತು ಆಚೆ ಬರ್ತಾವೆ. ಇವೇನನ್ನೂ ಮಾತಾಡದೇ ಪಾಠ. ಕೇಳಿ ಪುಸ್ತಕ ಮಾತ್ರ ಕೇಳೋವರ ತಂಡವೂ ಇದೆ. ಜಾಲಿ ಹುಡುಗರ ಬಾಯಲ್ಲಿ ಇವರು ಕುಡುಮಿಗಳು...ನಮ್ಮ ಕುಡುಮಿ ಪ್ರಕಾಶ ಹೇಳ್ತಾನೆ, `ಒಳ್ಳೆಯ ಮಾತಾದ್ರೂ, ಕೆಟ್ಟ ಮಾತಾದ್ರೂ ಆಡಿ, ಭಾಷೆ ಯಾವ್ದಾದ್ರೆ ಏನು? ಭಾವ ಮುಖ್ಯ. ಮಚ್ಚಾ, ಮಗಾ, ಏನ್ ಡಾ ಇವೆಲ್ಲಾ ವಯಸ್ಸಿನ ಮಹಿಮೆ~. `ಆದರೆ ಒಳ್ಳೆಯ ಪದ ಬಳ್ಸೋದೋ ಬೇಡ್ವೋ, ಯಾರನ್ನೂ  ಹರ್ಟ್ ಮಾಡ್ಬೇಸ್ವೋ ಸುಧೀ~

ಇದು ನಿನ್ನ ಫ್ರೆಂಡ್‌ನ ರಿಕ್ವೆಸ್ಟ್!

ಪ್ರತಿಕ್ರಿಯಿಸಿ (+)