ಮಂಗಳವಾರ, ಮೇ 17, 2022
27 °C

ಸ್ವಾರ್ಥ ಬಿಡಿ, ಸಂಘಟಿತರಾಗಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರೇಕೆರೂರ: ‘ಮಹಿಳೆಯರಲ್ಲಿ ಆತ್ಮಸ್ಥೈರ್ಯ ಹೆಚ್ಚಿರುತ್ತದೆ. ಅವರು ಅದನ್ನು ಸಮರ್ಪಕವಾಗಿ ಬಳಸಿಕೊಂಡು ಸಮಾಜಕ್ಕೆ ಉಪಕಾರ ಆಗುವಂತಹ ಜೀವನ ನಡೆಸಬೇಕು. ಸ್ವಾರ್ಥವನ್ನು ಬಿಟ್ಟು ಸಂಘಟಿತರಾಗಿ ಮುಂದೆ ಬರಬೇಕು’ ಎಂದು ಜೆಸಿಐ ಹಿರೇಕೆರೂರ ದುರ್ಗಾ ಅಧ್ಯಕ್ಷೆ ವಿಜಯಲಕ್ಷ್ಮಿ ಛಾಯಾಪತಿ ಹೇಳಿದರು.ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ಜೆಸಿಐ ಹಿರೇಕೆರೂರ ದುರ್ಗಾ ಸಂಸ್ಥೆ ವತಿಯಿಂದ ಪಟ್ಟಣದ ಸರ್ವಜ್ಞ ಕಲಾ ಭವನದಲ್ಲಿ ಭಾನುವಾರ ಮಹಿಳೆಯರಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು  ಮಾತನಾಡಿದರು.ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವುದು ಮಹಿಳೆಯರ ಮೊದಲ ಕರ್ತವ್ಯವಾಗಬೇಕು. ಸ್ಪರ್ಧಾತ್ಮಕ ಮನೋಭಾವನೆ ಮಕ್ಕಳಲ್ಲಿ ಬೆಳೆಸಬೇಕು. ‘ನೀನು ಮುಂದೆ ಬಾ’ ಎಂಬ ಭಾವನೆ ಬೆಳೆಸಿರಿ. ‘ಅವನಿಗಿಂತ ಮುಂದೆ ಬಾ’ ಎಂಬ ಭಾವನೆ ಬೆಳೆಸಬೇಡಿ ಎಂದರು.ಅನ್ನಪೂರ್ಣ ಯು. ಬಣಕಾರ, ಜಿ.ಪಂ. ಸದಸ್ಯೆ ಬಸಮ್ಮ ಅಬಲೂರ, ಸುಮಾ ಅರುಣಕುಮಾರ, ಗೀತಾ ಕೊತ್ವಾಲ, ಸುಮಾ ಶೆಟ್ಟರ, ಲೀಲಾ ಚಾಮರಾಜ್, ಜೆಸಿಐ ನಿಕಟಪೂರ್ವ ಅಧ್ಯಕ್ಷ ಬಸವರಾಜ ಶೆಟ್ಟರ, ಪ್ರಕಾಶ ಶಿರಗಂಬಿ, ಈರಣ್ಣ ವಾಲಿಶೆಟ್ಟರ ಮೊದಲಾದವರು ಹಾಜರಿದ್ದರು.ಜೇಸಿರೇಟ್ ಅಧ್ಯಕ್ಷೆ ಪರಿಮಳಾ ಪ್ರಕಾಶ ಶಿರಗಂಬಿ ಸ್ವಾಗತಿಸಿದರು. ಶಶಿಕಲಾ ಅತ್ತಿಕಟ್ಟಿ ಪ್ರಾಸ್ತಾವಿಕ ಮಾತನಾಡಿದರು.ಕುರುಡು ನಡಿಗೆ ಸ್ಪರ್ಧೆ, ಬಿಂದಿ ಅಂಟಿಸುವ ಸ್ಪರ್ಧೆ, ದಾರ ಪೋಣಿಸುವ ಸ್ಪರ್ಧೆ, ಮ್ಯಾಚಿಂಗ್ ಸ್ಪರ್ಧೆ, ಹೇರ್‌ಸ್ಟೈಲ್ ಸ್ಪರ್ಧೆಗಳಲ್ಲಿ ಹತ್ತಾರು ಮಹಿಳೆಯರು ಪಾಲ್ಗೊಂಡು ತಮ್ಮಲ್ಲಿ ಅಡಗಿರುವ ಪ್ರತಿಭೆಗಳನ್ನು ಪ್ರದರ್ಶಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.