ಸ್ವಾವಲಂಬಿ ಜೀವನಕ್ಕೆ ಶಿಕ್ಷಣ ಅಗತ್ಯ

ಬುಧವಾರ, ಜೂಲೈ 17, 2019
26 °C

ಸ್ವಾವಲಂಬಿ ಜೀವನಕ್ಕೆ ಶಿಕ್ಷಣ ಅಗತ್ಯ

Published:
Updated:

ಮೂಡುಬಿದಿರೆ: `ಸಮಾಜದ ಮುಖ್ಯವಾಹಿನಿಗೆ ಬಂದು ಸ್ವಾವಲಂಬಿ ಜೀವನ ನಡೆಸುವುದಕ್ಕೆ ಶಿಕ್ಷಣ ಪ್ರತಿಯೊಬ್ಬರಿಗೂ ಅಗತ್ಯ. 6ರಿಂದ 14ವರ್ಷದೊಳಗಿನ ಮಕ್ಕಳು ಯಾವುದೇ ಕಾರಣಕ್ಕೆ ಶಿಕ್ಷಣದಿಂದ ವಂಚಿರಾಗಬಾರದು~ ಎಂದು ವಿರೋಧ ಪಕ್ಷದ ಮುಖ್ಯ ಸಚೇತಕ ಅಭಯಚಂದ್ರ ಜೈನ್ ಹೇಳಿದರು.`ಶಾಲೆಗಾಗಿ ನಾವು ನೀವು~ ಕಾರ್ಯಕ್ರಮದ ಅಂಗವಾಗಿ ಇಲ್ಲಿನ ಪುಚ್ಚೆಮೊಗರು ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ಸಮಾರಂಭ ಉದ್ಘಾಟಿಸಿ ಮಾತನಾಡಿದರು.`ವಿದ್ಯಾರ್ಥಿಗಳು ಬದಲಾವಣೆಗೆ ಹೊಂದಿಕೊಳ್ಳಬೇಕು. ಇದು ವಿಜ್ಞಾನ ಯುಗ. ವಿಜ್ಞಾನ ವಿಷಯದಲ್ಲಿ ಓದಿದವರೆಲ್ಲಾ ಎಂಜಿನಿಯರ್ ಆಗಲು ಆಸೆ ಪಡುತ್ತಾರೆ. ರಾಷ್ಟ್ರದ ವೈಜ್ಞಾನಿಕ ಅಗತ್ಯತೆಯನ್ನು ತುಂಬಬಲ್ಲ ವಿಜ್ಞಾನಿಯಾಗುತ್ತೇನೆ ಎಂಬ ಹಂಬಲ ಇರುವ ವಿದ್ಯಾರ್ಥಿಗಳು ದೇಶಕ್ಕೆ ಬೇಕಾಗಿದೆ~ ಎಂದರು.ಮಕ್ಕಳ ಪ್ರತಿಭೆಯನ್ನು ಗುರುತಿಸಲು ಕೃಷಿ ದರ್ಶನ, ಚಿಣ್ಣರ ಮೇಳದಂತ ವಿವಿಧ ಕಾರ್ಯಕ್ರಮಗಳು ಶಾಲೆಯಲ್ಲಿ ನಡೆಯುತ್ತಿದ್ದು ವಿದ್ಯಾರ್ಥಿಗಳು ಇದರ ಸದುಪಯೋಗ ಪಡಕೊಳ್ಳಬೇಕು ಎಂದು ಹೇಳಿದರು.ಹೊಸಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಚಂದ್ರಹಾಸ್ ಸನಿಲ್, ಪುರಸಭೆ ಅಧ್ಯಕ್ಷ ರತ್ನಾಕರ ದೇವಾಡಿಗ, ಕ್ಷೇತ್ರ ಪ್ರಭಾರ ಶಿಕ್ಷಣಾಧಿಕಾರಿ ರಾಜಶ್ರಿ, ಪಂಚಾಯತಿ ಸದಸ್ಯ ಶ್ರಿನಿವಾಸ್, ಶಿಕ್ಷಣ ಸಂಯೋಜಕ ವಿನಯ ಕುಮಾರ್, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ಸಿಂಥಿಯಾ ಪಾಯಸ್, ಮುಖ್ಯೋಪಧ್ಯಾಯಿನಿ ತೆರೆಸಿಯಾ ಡಿ`ಸೋಜ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ಅಧ್ಯಕ್ಷೆ ಪ್ರೇಮಾ ಜೈನ್, ಜಾಯ್ಲಸ್ ತಾಕೋಡೆ ಇದ್ದರು.

 

ಬಳಿಕ ಶಾಸಕರು ಪ್ರಾಂತ್ಯದ ಮಂಜುನಾಥ ಸ್ವಾಮಿ ಪ್ರೌಢಶಾಲೆಗೆ ಭೇಟಿ ನೀಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ಮಂಜೂರಾದ ವಿದ್ಯಾರ್ಥಿ ವೇತನ ಹಾಗೂ ರೆಡ್ ಕ್ರಾಸ್ ವತಿಯಿಂದ ನೀಡಲಾದ ಬ್ಯಾಗ್‌ಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಿದರು. ತಹಶೀಲ್ದಾರ್, ರೆಡ್‌ಕ್ರಾಸ್ ಘಟಕದ ಅಧ್ಯಕ್ಷ ಮುರಳೀಧರ್, ಸದಸ್ಯರಾದ ಅಬ್ದುಲ್ಲಾ, ಸಿ.ಎಚ್.ಅಬ್ದುಲ್ ಗಫೂರ್ ಇದ್ದರು. ನಂತರ ಶಾಸಕರು ವಿವಿಧ ಶಾಲೆಗಳ ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry