ಸೋಮವಾರ, ಮಾರ್ಚ್ 8, 2021
19 °C

ಹಂಪನಾ ‘ಜೈನ ಜಗತ್ತಿನ ರತ್ನ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಂಪನಾ ‘ಜೈನ ಜಗತ್ತಿನ ರತ್ನ’

ಹಾವೇರಿ: ಜೈನ ಸಮುದಾಯ ಹಾಗೂ ಸಾಹಿತ್ಯದ ಬಗ್ಗೆ ಸಮಗ್ರ ಅಧ್ಯಯನ ಮಾಡಿರುವ ಡಾ.ಹಂ.­ಪ.­ನಾಗರಾಜಯ್ಯ ಅವರಿಗೆ ಅಮೆರಿಕದ ಜ್ಯುವೆಲ್‌ ಆಫ್ ಜೈನ್ ವರ್ಲ್ಡ್‌ (ಜೈನ ಜಗತ್ತಿನ ರತ್ನ) ಪ್ರಶಸ್ತಿಯನ್ನು ಬುಧ­ವಾರ ಇಲ್ಲಿ  ಪ್ರದಾನ ಮಾಡಲಾಯಿತು.ಜಿಲ್ಲಾ ಜೈನ ಸಮುದಾಯ ಹಮ್ಮಿಕೊಂಡ ಪಂಚಕಲ್ಯಾಣ ಕಾರ್ಯ­ಕ್ರಮದಲ್ಲಿ ಪ್ರಶಸ್ತಿ ಫಲಕ, ಸನ್ಮಾನ ಪತ್ರ ಹಾಗೂ ರೂ. 25,000 ನಗದು ಪುರಸ್ಕಾರ ಒಳಗೊಂಡ ಪ್ರಶಸ್ತಿ­ಯನ್ನು ಡಾ. ಹಂಪನಾ ಅವರಿಗೆ ಅಟ್ಲಾಂಟಾ ಜೈನ್‌ ವರ್ಲ್ಡ್‌ ಫೌಂಡೇ­ಷನ್‌ನ ಸುನೀಲ ಸೇನ್ ನೀಡಿ ಗೌರವಿಸಿದರು.‘ಡಾ.ಹಂಪನಾ ಅವರು ಜೈನ ಜಗತ್ತಿನ ರತ್ನವಷ್ಟೇ ಅಲ್ಲ ಕನ್ನಡ ಸಾಹಿ­ತ್ಯದ ರತ್ನವೂ ಆಗಿದ್ದಾರೆ. ಅವರಿಗೆ ಜೈನ ಸಮುದಾಯ ಕೊಡಮಾಡುವ ಅಂತರ­ರಾಷ್ಟ್ರೀಯ ಪ್ರಶಸ್ತಿ ದೊರೆ­ತಿ­ರುವುದು ನಾಡಿಗೆ ಹೆಮ್ಮೆಯ ಸಂಗತಿಯಾಗಿದೆ’ ಎಂದು ಪ್ರೊ. ಹಿ.ಚಿ.ಬೋರಲಿಂಗಯ್ಯ  ಹೇಳಿದರು.‘53 ವರ್ಷಗಳಿಂದ ಜೈನ ಸಮು­ದಾಯದ ಒಳ, ಹೊರವುಗಳ ಬಗ್ಗೆ ಅಧ್ಯಯನ ನಡೆಸಲು ಈ ನಾಡಿನ ಜೈನ ಸಮುದಾಯದ ಸಹಕಾರ ಬಹಳಷ್ಟಿದೆ. ಈ ಪ್ರಶಸ್ತಿಯು ನನಗೆ ಮತ್ತಷ್ಟು ಕೆಲಸ ಮಾಡಲು ಸ್ಫೂರ್ತಿ ಹಾಗೂ ಚೈತನ್ಯ  ನೀಡಲಿದೆ’ ಎಂದು ಪ್ರಶಸ್ತಿ ಸ್ವೀಕರಿಸಿದ ಡಾ.ಹಂಪನಾ ಹೇಳಿದರು.‘ವ್ಯವಹಾರಕ್ಕೆ ಮಾತ್ರ ಸಿಮೀತ­ವಾಗಿದ್ದ ಕನ್ನಡ ಭಾಷೆಗೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ರೂಪ ಕೊಟ್ಟ ಶ್ರೇಯಸ್ಸು ಜೈನ ಸಮು­ದಾ­ಯಕ್ಕೆ ಸಲ್ಲುತ್ತದೆ. ಕನ್ನಡ ಭಾಷಾ ಮಾಧ್ಯಮ ಕುರಿತು ಸುಪ್ರೀಂ ಕೋರ್ಟ್‌ನ ನಿರ್ಧಾರ ರಾಜ್ಯಕ್ಕೆ ಮಾರಕ­ವಾಗಿದ್ದು, ಕನ್ನಡ ಸಾಹಿತ್ಯ ಪರಿಷತ್‌ ಹಾಗೂ ಸಾಹಿತಿಗಳು ಕನ್ನ­­ಡದ ಉಳಿವಿಗಾಗಿ ಸೂಕ್ತ ನಿರ್ಣಯ ತೆಗೆದುಕೊಳ್ಳುವುದು ಅವಶ್ಯವಾಗಿದೆ’ ಎಂದು ಅವರು ಆಗ್ರಹಿಸಿದರು.ಸಾಹಿತಿಗಳಾದ ಕಮಲಾ ಹಂಪನಾ, ಸತೀಶ ಕುಲಕರ್ಣಿ ಪಾಲ್ಗೊಂಡಿದ್ದರು. ಮುನಿಶ್ರೀ ೧೦೮ ಪುಣ್ಯಸಾಗರ ಮಹಾರಾಜರು, ಹುಕ್ಕೇರಿ ಮಠದ ಸದಾಶಿವ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.