ಶುಕ್ರವಾರ, ಮೇ 27, 2022
31 °C

ಹಂಪಿ ವೈಭವ ಬಾರಕೂರಿಗೆ ಸಿಗಲಿ: ಕೋಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ರಹ್ಮಾವರ: ವಿಶ್ವಪರಂಪರೆಯಲ್ಲಿ ಗುರುತಿಸುವ ಪ್ರಯತ್ನವಾಗಬೇಕೆಂದರೆ ಹಂಪಿಗೆ ಸಿಗುವಂತಹ ವೈಭವ ಮನ್ನಣೆ ಬಾರಕೂರಿಗೆ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಸರ್ಕಾರ ಸ್ಥಳೀಯ ಜನತೆಯ ಸಹಕಾರ ಅಗತ್ಯ ಎಂದು ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.ಬಾರಕೂರಿನ ರುಕ್ಮಿಣಿ ಶೆಡ್ತಿ ಸ್ಮಾರಕ ನ್ಯಾಷನಲ್ ಸರ್ಕಾರಿ ಪ್ರಥಮದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಭಾನುವಾರ ಮಂಗಳೂರು ವಿವಿ ಮಟ್ಟದ ಸಾಂಸ್ಕೃತಿಕ ಸ್ಫರ್ಧಾ ಕಾರ್ಯಕ್ರಮ ‘ಹೆಜ್ಜೆ ಗೆಜ್ಜೆ’ ಉದ್ಘಾಟಿಸಿ ಮಾತನಾಡಿದರು.ವ್ಯಕ್ತಿಯೊಬ್ಬ ಯಶಸ್ಸು ಹೊಂದಬೇಕಾದರೆ ಸತತ ಪ್ರಯತ್ನ ಪಡಬೇಕು. ವಿದ್ಯಾರ್ಥಿ ಜೀವನದಲ್ಲಿ ಜೀವನೋತ್ಸಾಹವಿರಬೇಕು. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಪ್ರಾಮಾಣಿಕತೆ ಅಳವಡಿಸಿಕೊಂಡರೆ ಭವಿಷ್ಯದಲ್ಲಿ ಯಶಸ್ಸು ಗಳಿಸಬಹುದು ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಕಾಲೇಜು ಶಿಕ್ಷಣ ಇಲಾಖೆಯ ಮಂಗಳೂರು ಪ್ರಾದೇಶಿಕ ಕಚೇರಿಯ ಜಂಟಿ ನಿರ್ದೇಶಕ ಎಚ್.ಆರ್.ನಾಗರಾಜ ಅರಸ್ ಮಾತನಾಡಿ ವಿದ್ಯಾರ್ಥಿ ಜೀವನದಲ್ಲಿ ಶಿಸ್ತು ಅತೀ ಅಗತ್ಯ. ನಾವು ಇತರರಿಗೆ ಮಾದರಿಯಾಗಿರಬೇಕು. ಶಿಕ್ಷಣದ ಎಲ್ಲಾ ಚಟುವಟಿಕೆಯಲ್ಲಿ ಭಾಗವಹಿಸುವಂತೆಯೇ,  ಪಠ್ಯೇತರ ಚಟುವಟಿಕೆಯಲ್ಲಿಯೂ ಭಾಗವಹಿಸುವ ಉತ್ಸಾಹ ವಿದ್ಯಾರ್ಥಿಯಲ್ಲಿರಬೇಕು ಎಂದರು.ಮುಂಬೈಯ ಬಿಎಆರ್‌ಸಿಯ ನಿವೃತ್ತ ಅಧಿಕಾರಿ ಬಿ. ವಿಶ್ವನಾಥ ಶೆಟ್ಟಿ, ಪ್ರಾಂಶುಪಾಲ ರಾಜಶೇಖರ ಹೆಬ್ಬಾರ್ ಸಿ., ಮುಖ್ಯ ಶೈಕ್ಷಣಿಕ ಸಲಹೆಗಾರ ಗಣೇಶ್ ಪೈ ಎಂ., ಸಾಂಸ್ಕೃತಿಕ ಕಾ ರ್ಯಕ್ರಮಗಳ ಸಂಯೋಜಕಿ ಚಂದ್ರಾವತಿ ಶೆಟ್ಟಿ, ಉಪನ್ಯಾಸಕರಾದ ರಮೇಶ್ ಆಚಾರ್, ಚಂದ್ರಶೇಖರ್ ಶೆಟ್ಟಿ,  ವಿದ್ಯಾರ್ಥಿ ಮುಖಂಡರಾದ ಚೇತನಾ, ಅಜಿತ್ ಕುಮಾರ್ ಶೆಟ್ಟಿ, ಸುಜಾತ, ದಿವ್ಯಾ, ಗೀತಾ, ರವೀಂದ್ರ ಕೊಠಾರಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.